Advertisement

ಪಾಲಿಕೆಗಳಲ್ಲಿ ಜಲಮಂಡಳಿ ವಿಲೀನ ಕಷ್ಟ

07:03 AM Jun 25, 2020 | Lakshmi GovindaRaj |

ಕಲಬುರಗಿ: ಕುಡಿಯುವ ನೀರು ಸರಬರಾಜು ಮತ್ತು ನಿರ್ವಹಣೆ ಬಗ್ಗೆ ಎಲ್ಲ ಕಡೆಗಳಲ್ಲಿ ದೂರುಗಳು ಕೇಳಿಬರುತ್ತಿದೆ. ಅಲ್ಲದೇ ಮಹಾನಗರ ಪಾಲಿಕೆಗಳಲ್ಲಿ ಜಲ ಮಂಡಳಿಗಳನ್ನು ವಿಲೀನ ಮಾಡುವುದು ಕಷ್ಟ ಎಂದು ನಗರಾಭಿವೃದ್ಧಿ ಸಚಿವ  ಭೈರತಿ ಬಸವರಾಜ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಮಂಡಳಿಯವರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಪಾಲಿಕೆ ಆಯುಕ್ತರ ಮಾತು ಕೇಳುತ್ತಿಲ್ಲ ಎನ್ನುವುದು ಸರಿಯಲ್ಲ.  ಬೆಂಗಳೂರಿನಲ್ಲೂ ಇಂಥ ಸಮಸ್ಯೆ ಇದೆ. ಪಾಲಿಕೆ ಆಯುಕ್ತರಿಗೆ ಅಧಿಕಾರ ಚಲಾಯಿಸುವ ಹಕ್ಕಿದ್ದು, ಅದನ್ನು ಉಪಯೋಗಿಸಿಕೊಂಡು ನಾಗರಿಕರಿಗೆ ಪರಿಹಾರ ಸೂಚಿಸಬೇಕು ಎಂದರು.

ಪಾಲಿಕೆಗಳ ತೆರಿಗೆ ಹೆಚ್ಚಳದಿಂದ ಜನರಿಗೆ ಕಟ್ಟಲು  ತೊಂದರೆಯಾದರೆ ತೆರಿಗೆ ಪಾವತಿ ಅವಧಿ  ವಿಸ್ತರಿಸಲಾಗುವುದು. ಆದರೆ ಯಾವುದೇ ಕಾರಣಕ್ಕೂ ತೆರಿಗೆ ಕಡಿಮೆ ಮಾಡಲ್ಲ. ಜನರ ತೆರಿಗೆ ಹಣವನ್ನು ಸರ್ಕಾರ ಸ್ವಂತಕ್ಕೆ ಬಳಸಿಕೊಳ್ಳಲ್ಲ. ಆಯಾ ಜಿಲ್ಲೆಗಳ ಅಭಿವೃದ್ಧಿಗೆ  ಉಪಯೋಗಿಸಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಕರ್ತರಿಗೆ ನಿವೇಶನ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವ ನಿವೇಶನಗಳ ಪೈಕಿ ಶೇ.5ರಷ್ಟನ್ನು ಪತ್ರಕರ್ತರಿಗೆ ಮೀಸಲಿಡಲು ತೀರ್ಮಾ ನಿಸಲಾಗಿದೆ. ಇದಕ್ಕೆ ಸಿಎಂ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next