Advertisement

ನೀರಿನ ಸದ್ಬಳಕೆ; ವಾಲ್ಮಿಯಿಂದ ಆನ್‌ಲೈನ್‌ ತರಬೇತಿ

03:35 PM Aug 31, 2020 | Suhan S |

ಹುಬ್ಬಳ್ಳಿ: ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಕುರಿತು ರಾಜ್ಯದ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ವಾಲ್ಮಿಯಿಂದ ಆನ್‌ ಲೈನ್‌ ತರಬೇತಿ ನಡೆಯಿತು.

Advertisement

ರಾಜ್ಯದ ವಿವಿಧ ಕಡೆಯ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು, ರೈತರು, ಜಲಸಂಪನ್ಮೂಲ ಇಲಾಖೆ ಇಂಜನಿಯರ್‌ ಗಳಿಗೆ ನೀರು ಸದ್ಬಳಕೆ, ಸಂಘಗಳ ಬಲವರ್ಧನೆ ಕುರಿತಾಗಿ ಧಾರವಾಡದ ವಾಲ್ಮಿಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಕೋವಿಡ್‌-19 ಹಿನ್ನೆಲೆಯಲ್ಲಿ ತರಬೇತಿ ಸಾಧ್ಯವಾಗದ್ದರಿಂದ ವಾಲಿ¾ ಆನ್‌ಲೈನ್‌ ತರಬೇತಿಯ ಪ್ರಾಯೋಗಿಕ ಯತ್ನವನ್ನು ಕೈಗೊಂಡಿತು.

ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಆನ್‌ಲೈನ್‌ ತರಬೇತಿಗೆ ಚಾಲನೆ ನೀಡಿದರು. ಕಾಡಾ ನಿರ್ದೇಶಕ ಬಿ.ಜಿ. ಗುರುಪಾದಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ವಿವಿಧ ಕಡೆಯ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಆನ್‌ ಲೈನ್‌ ಮೂಲಕ ತರಬೇತಿ ಮಾಹಿತಿ ಪಡೆದರು. ವಾಲ್ಮಿ ಅಧಿಕಾರಿಗಳು ಸಂಘಗಳ ಪದಾಧಿಕಾರಿಗಳು, ರೈತರಿಗೆ ಆನ್‌ಲೈನ್‌ ತರಬೇತಿಯಲ್ಲಿ ಪಾಲ್ಗೊಳ್ಳುವಿಕೆ ಹೇಗೆ, ಮೊಬೈಲ್‌ಗ‌ಳ ಬಳಕೆ ಇತ್ಯಾದಿ ಕುರಿತಾಗಿ ಅಗತ್ಯ ಮಾಹಿತಿ ನೀಡಿ ತಯಾರುಗೊಳಿಸಿದ್ದರು.

ವಾಲ್ಮಿ ಅಧಿಕಾರಿಗಳಾದ ಬಸವರಾಜ ಬಂಡಿವಡ್ಡರ, ಸುರೇಶ ಕುಲಕರ್ಣಿ ವಿಷಯ ಮಂಡಿಸಿದರು. ಕಾಡಾ ಅಧಿಕಾರಿ ಬಾಲರೆಡ್ಡಿ, ಮಹಾದೇವಗೌಡ, ನಾಗರತ್ನ, ಮಲಪ್ರಭಾ ಮಹಾಮಂಡಳದ ಶ್ರೀ ದಮ್ಮಾಳಿ ಸೇರಿದಂತೆ 30ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಪ್ರದೀಪ ದೇವರಮನಿ ಕಾರ್ಯಕ್ರಮ ಸಂಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next