Advertisement

ನಿರ್ವಹಣೆಗೆ ಕಾಯುತ್ತಿವೆ ನೀರಿನ ಘಟಕಗಳು

01:12 PM Mar 14, 2020 | Team Udayavani |

ಬೈಲಹೊಂಗಲ: ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ನಿಷ್ಪಯೋಜಕವಾಗಿ ಗ್ರಾಮಸ್ಥರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಬೆಳಗಾವಿ ಜಿಪಂನ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದವರ ಉಸ್ತುವಾರಿಯಲ್ಲಿರುವ ಬೈಲಹೊಂಗಲ ತಾಲೂಕಿನಲ್ಲಿ 92 ಹಾಗೂ ಕಿತ್ತೂರು ತಾಲೂಕಿನಲ್ಲಿ 43 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೊಟ್ಯಂತರ ಖರ್ಚು ಮಾಡಿ ನಿರ್ಮಿಸಲಾಗಿದೆ. ಆದರೆ ದೊಡವಾಡದಲ್ಲಿ ಒಂದು ಘಟಕ ಧರ್ಮಸ್ಥಳ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದೆ. ಇನ್ನೂ ಹಲವು ಘಟಕಗಳನ್ನು ಈ ಸಂಘಟನೆ ತಾವು ನಿರ್ವಹಿಸುವುದಾಗಿಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಈಗೀರುವ ಘಟಕಗಳು ಸೂಕ್ತ ನಿರ್ವಹಣೆಯಿಲ್ಲದೆ ಹಲವೆಡೆ ಕೆಟ್ಟು ನಿಂತ ಸ್ಥಿತಿಯಲ್ಲಿವೆ.

ಘಟಕಗಳ ನಿರ್ವಹಣೆ:ಈ ಹಿಂದೆ ಕರ್ನಾಟಕ ರೂರಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ ಮೆಂಟ್‌ ಲಿ.(ಕೆಆರ್‌ ಐಡಿಎಲ್‌) ಮೇಲು ಉಸ್ತುವಾರಿಯಲ್ಲಿದ್ದ ಘಟಕಗಳನ್ನು ಸದ್ಯ ಜಿಪಂನ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದವರು ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಘಟಕಗಳ ಸ್ಥಾಪನೆಗೆ 635.40 ಲಕ್ಷ ವ್ಯಯಿಸಲಾಗಿದೆ. ಈ ಯೋಜನೆಯಡಿ ದೊಡ್ಡ ಘಟಕಗಳನ್ನು ಸ್ಥಾಪಿಸಲು ಪ್ರತಿ ಒಂದಕ್ಕೆ 8 ಲಕ್ಷ 15 ಲಕ್ಷ 85 ಸಾವಿರ ರೂ. ಖರ್ಚು ಮಾಡಲಾಗಿದೆ. ಇಷ್ಟೆಲ್ಲ ಹಣ ಖರ್ಚು ವ್ಯಯಿಸಿದ್ದರೂ ನಾಗರಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಗ್ರಾಪಂನವರು 1 ರೂ. ಗೆ 10ಲೀ ನೀರು ಕೊಟ್ಟು ಬಂದಂತಹ ಹಣವನ್ನು ಬಳಕೆಗೆ ತೆಗೆದುಕೊಂಡು ಅದರ ಘಟಕ ನಿರ್ವಹಣೆಗೆ ಮೊತ್ತವನ್ನು ಬಳಸಲಾಗುತ್ತಿದೆ. ಹಲವೆಡೆ ಎಟಿಎಂ ಕಾರ್ಡ್ ನಂತಹ ಕಾರ್ಡ್‌ ನೀಡಿ ಬಳಕೆ ಮಾಡಲಾಗುತ್ತಿದೆ.

ಘಟಕದ ಉದ್ದೇಶ: ಹಲವಾರು ಗ್ರಾಮಗಳಲ್ಲಿ ಬೊರವೆಲ್‌, ಬಾಂವಿಗಳಿಂದ ಕುಡಿಯುವ ನೀರು ಬಳಸಲಾಗುತ್ತಿದೆ. ಆದರೆ ಇದರಿಂದ ಕಲುಷಿತ ನೀರಿನಿಂದ ಜನರಿಗೆ ಕಾಲರಾ, ವಾಂತಿಬೇದಿ ಇತ್ಯಾದಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಇರುತ್ತದೆ. ಇಂಥ ಸಮಸ್ಯೆ ದೂರ ಮಾಡಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರತಿ ಗ್ರಾಮಗಳಲ್ಲಿ ನಿರ್ಮಿಸಲಾಗಿದೆ. ಈ ಘಟಕಗಳಲ್ಲಿ ಶುದ್ಧ ನೀರು ಸಿಗುವದರಿಂದ ಜನರಿಗೆ ಒಳ್ಳೆಯ ಯೋಜನೆಯಾಗಿ ಪರಿಣಮಿಸಿದೆ. ಬೇಸಿಗೆ ವೇಳೆಯಲ್ಲಿ ನೀರಿನ ಕೊರತೆ ಹೆಚ್ಚಾಗಿರುವುದರಿಂದ ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ಪ್ರಾರಂಭಿಸಿದಲ್ಲಿ ಜನರ ನೀರಿನ ಸಮಸ್ಯೆ ನಿಗಿಸಬಹುದಾಗಿದೆ. ಇನ್ನಾದರೂ ಇಂಥ ಘಟಕಗಳ ನಿರ್ವಹಣೆಗೆ ಸಮಿತಿ ನಿರ್ಮಿಸಿ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕಿದೆ.

ಎನ್‌ಜಿಒಗಳಿಂದ ಟಿಂಡರ್‌ ಕರೆದು ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಎನ್‌ಜಿಒ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಡೆತಡೆಗಳಿಲ್ಲದೆ ನಡೆಸಲಾಗುತ್ತಿದೆ. ತಾಲೂಕಿನಲ್ಲಿ 7ರಿಂದ 8 ಕಡೆ ಮಷೀನ್‌ ಹಾಳಾಗಿವೆ. ಶೀಘ್ರವೇ ದುರಸ್ತಿಗೊಳಿಸಲಾಗುವುದು.  ಎಚ್‌.ಕೆ. ವಂಟಗೂಡಿ, ಕಾರ್ಯನಿರ್ವಾಹಕ ಎಂಜಿನಿಯರ್‌, ಜಿಪಂ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಬೈಲಹೊಂಗಲ

Advertisement

 

-ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next