Advertisement

ಎರಡು ತಿಂಗಳಲ್ಲಿ ರೈತರಿಗೆ ನೀರು

01:24 PM May 10, 2020 | Team Udayavani |

ಯಮಕನಮರಡಿ: ಹುಕ್ಕೇರಿ ತಾಲೂಕಿನ ಹಿಡಕಲ್‌ ಡ್ಯಾಂ ಬಳಿ ಇರುವ ರುಸ್ತಂಪೂರ ಏತ ನೀರಾವರಿ ಯೋಜನೆಯ ಮೊದಲ, ಎರಡನೆಯ ಹಂತದ ಕಾಲುವೆ ಪೈಪ್‌ಲೈನ್‌ ನವೀಕರಣಕ್ಕೆ ಶನಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಶಾಸಕ ಸತೀಶ ಜಾರಕಿಹೊಳಿ

Advertisement

ಮಾತನಾಡಿ, ರುಸ್ತಂಪೂರ ಏತ ನೀರಾವರಿ ಯೋಜನೆಯ ಎರಡು ಹಂತದಲ್ಲಿ ಇರುವ 750ಎಚ್‌ಪಿ ಮೋಟಾರ್‌ಗಳದುರಸ್ತಿ ಹಾಗೂ ದಶಕಗಳಿಂದ ಕಾಲುವೆ ಪೈಪ್‌ ಒಡೆದಿರುವುದರಿಂದ ರೈತರ ಹೊಲಗದ್ದೆಗಳಿಗೆ ನೀರು ಹೋಗದೆ ಮರಳಿ ಜಲಾಶಯ ಸೇರುತ್ತಿದೆ. ಆದ್ದರಿಂದ  ವಿಶೇಷ ಪ್ರಯತ್ನ ಮಾಡಿ ನವೀಕರಣ ಕೈಗೊಳ್ಳಲಾಗುತ್ತಿದ್ದು, ಸುಮಾರು 2226 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ 10ಹಳ್ಳಿಯ ದನಕರುಗಳಿಗೆ ಕುಡಿಯುವ ನೀರು ವ್ಯವಸ್ಥೆ ಆಗಲಿದೆ. ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸಿ ಈ ಭಾಗದ ರೈತರಿಗೆ ನೀರು ಒದಗಿಸಲಾಗುವುದು ಎಂದರು. ನೀರಾವರಿ ಇಲಾಖೆ 3.35ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ.

ಜಿಪಂ ಸದಸ್ಯ ಮಂಜುನಾಥ ಪಾಟೀಲ, ರುಸ್ತಂಪುರ ಗ್ರಾಪಂ ಅಧ್ಯಕ್ಷ ಶೋಭಾ ರಾಜನಗೋಳ, ಭೀಮರಾಯಿ ಲಕ್ಕೆನವರ, ಮಾರುತಿ ನಾಯಿಕ, ಅಭಿಯಂತರಾದ ಎಂ.ಎಸ್‌.ಒಡೆಯರ, ಅರವಿಂದ ಜಮಖಂಡಿ ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next