Advertisement
ಈ ಯಂತ್ರ, ನೆಲದಿಂದ 100 ಅಡಿ ಆಳದಿಂದ ನೀರನ್ನು ಮೇಲೆತ್ತುತ್ತದೆ. ನೆಲಮಟ್ಟದಲ್ಲಿ ಸುಮಾರು 750 ಅಡಿ ದೂರದವರೆಗೂ ನೀರನ್ನು ಪಂಪ್ ಮಾಡಬಹುದು. ಸಣ್ಣಪುಟ್ಟ ಕೈತೋಟವಿದ್ದರೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು. ಮಹಡಿ ಮನೆಗಳಲ್ಲಾದರೆ ಮೂರನೇ ಅಂತಸ್ತಿನವರೆಗೂ ನೀರು ಪಂಪ್ ಮಾಡಬಹುದು.
ಈ ಯಂತ್ರದಲ್ಲಿ ಪೆಡಲ್‌ಗಳನ್ನು ಅಳವಡಿಸಲಾಗಿದೆ. ಸೈಕಲ್ ತುಳಿಯುವ ಮಾದರಿಯಲ್ಲಿಯೇ ಈ ಯಂತ್ರದಲ್ಲಿರುವ ಪೆಡಲ್‌ಗಳನ್ನು ತುಳಿದರೆ ಸಾಕು, ನೀರು ಪೂರೈಕೆಯಾಗುತ್ತದೆ. ಈ ನೀರೆತ್ತುವ ಯಂತ್ರವನ್ನು ಬಳಸುವುದರಿಂದ ವ್ಯಾಯಾಮವೂ ಆಗುತ್ತದೆ ಎನ್ನುವುದು ಹೆಗ್ಗಳಿಕೆ. ಹ್ಯಾಂಡ್ ಪಂಪ್ ಕಾರ್ಯಾಚರಿಸುವ ಮಾದರಿಯಲ್ಲಿಯೇ ಈ ಯಂತ್ರವೂ ಕೆಲಸ ಮಾಡುತ್ತದೆ. ಈ ಪೆಡಲ್‌ಗಳನ್ನು ನಿರಾಯಾಸವಾಗಿ ತುಳಿಯುವಂತೆ ವಿನ್ಯಾಸಗೊಳಿಸಲಾಗಿದೆ. ಅರ್ಧ ಗಂಟೆ ಪೆಡಲ್ ಮಾಡಿದರೆ ಮೂರು ಸಾವಿರ ಲೀಟರ್ ನೀರು ಪೂರೈಕೆಯಾಗುತ್ತದೆ ಎನ್ನಲಾಗಿದೆ! ಈ ಉಪಕರಣ “ಜೈಲಮ್’ ಎನ್ನುವ ಹೆಸರಿನಲ್ಲಿ ದೊರೆಯುತ್ತಿದೆ.
ಸಂಪರ್ಕ: 9448334131 -ಕುಮಾರ ರೈತ