Advertisement

ನೀರು ಪೂರೈಕೆ: ನಿರ್ಲಕ್ಷ್ಯ ಸಲ್ಲ

04:16 PM Jun 20, 2018 | |

ಸಿಂಧನೂರು: ಪ್ರತಿಯೊಂದು ಇಲಾಖೆ ಅಧಿಕಾರಿಗಳು  ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಬರಬೇಕು.
ಇಲ್ಲದಿದ್ದರೆ ಅಪೂರ್ಣ ಮಾಹಿತಿಯೊಂದಿಗೆ ಹಾಜರಾಗುವ ಅಧಿಕಾರಿಗಳನ್ನು ನಿಷ್ಠುರವಾಗಿ ಸಭೆಯಿಂದ
ಹೊರ ಹಾಕುವುದಾಗಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್‌ ನಾಡಗೌಡ ಎಚ್ಚರಿಸಿದರು.

Advertisement

ನಗರದ ಸರ್ಕ್ನೂಟ್‌ ಹೌಸ್‌ನಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ. ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.

ಮುಖ್ಯವಾಗಿ ಕುಡಿಯುವ ನೀರಿನ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು. ವಿದ್ಯುತ್‌ ಕೊರತೆ ಕಾರಣಕ್ಕಾಗಿಯೇ ನೀರಿನ ಸಮಸ್ಯೆ ಇರುವ ಸ್ಥಳಗಳ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ   ಅಧಿಕಾರಿಗಳನ್ನು ಕೇಳಿದರು.

ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರೇಶ್ವರ ಕ್ಯಾಂಪ್‌ನಲ್ಲಿ ನೀರಿನ ಮೇಲೊಟ್ಟಿ, ಪೈಪ್‌ಲೈನ್‌ ಇದೆ. ಆದರೆ ವಿದ್ಯುತ್‌ ಪರಿವರ್ತಕ ಇಲ್ಲದ್ದಕ್ಕೆ ವಿದ್ಯುತ್‌ ಸರಬರಾಜಿಗೆ ತಡೆಯಾಗಿದ್ದು, ನೀರಿನ ಸಮಸ್ಯೆ ಉದ್ಬವಿಸಿದೆ ಎಂದು ಪಿಡಿಒ ವನುಜಾ ಸಭೆ ಗಮನಕ್ಕೆ ತಂದರು.

ರೌಡಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಟಿಸಿ ಇಲ್ಲದ್ದರಿಂದ ಕುಡಿಯುವ ನೀರು ಪೂರೈಕೆಗೆ
ತೊಂದರೆಯಾಗಿದೆ ಎಂದು ಅಲ್ಲಿಯ ಪಿಡಿಒ ತಿಳಿಸಿದರು. ಗೋನವಾರ ಪಂಚಾಯಿತಿಗೊಳಪಡುವ ಹುಲಗುಂಚಿ,
ಆಯನೂರು ಮತ್ತು ಚಿಂತಮಾನದೊಡ್ಡಿ, ಎಲೆಕೂಡ್ಲಿಗಿ ಪಂಚಾಯಿತಿ ವ್ಯಾಪ್ತಿಯ ಎಸ್‌.ಎನ್‌.ಕ್ಯಾಂಪಿನಿಂದ ಬಸಾಪುರ
ಗ್ರಾಮದವರೆಗೆ ವಿದ್ಯುತ್‌ ಕಂಬಗಳ ಅವಶ್ಯಕತೆಯಿದೆ ಎಂದು ಅಭಿವೃದ್ಧಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿದ್ಯುತ್‌ ಗುತ್ತಿಗೆದಾರರು ಯಾರೇ ಆಗಿರಲಿ ತಕ್ಷಣ ಕೆಲಸ ಮುಗಿಸುವ ಮೂಲಕ
ಕುಡಿಯುವ ನೀರು ಪೂರೈಕೆ ಯೋಜನೆಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಕಪ್ಪು ಪಟ್ಟಿಗೆ ಸೇರಿಸಲು
ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.

ಶ್ರೀಪುರಂಜಂಕ್ಷನ್‌ನಲ್ಲಿ ಒಂದೆರಡು ದಿನಗಳಾದರೆ ಕೆರೆ ಸಂಪೂರ್ಣ ಬರಿದಾಗುತ್ತದೆ. ಏನು ಮಾಡಬೇಕೆಂದು
ತಿಳಿಯದಾಗಿದೆ ಎಂದು ಹೊಸಳ್ಳಿ ಇಜೆ ಪಿಡಿಒ ಸಭೆ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವರು ಅಭಿವೃದ್ಧಿ
ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕು.
 
ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು. ಶಿಕ್ಷಣ, ಆರೋಗ್ಯ ಸೇರಿ ವಿವಿಧ ಇಲಾಖೆಗಳ ಪ್ರಗತಿಯ ಸಂಪೂರ್ಣ ಮಾಹಿತಿ ಪಡೆದರು. ವಿವಿಧ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ನಿಗದಿತ ಕಾಲಾವದಿಯಲ್ಲಿ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ತಹಶೀಲ್ದಾರ್‌ ಉಮಾಕಾಂತ, ತಾಪಂ ಕಾ.ನಿ. ಅಧಿಕಾರಿ ಜಿ.ಎಂ. ಬಸಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರಾಜ ಬಿ.ಪಾಟೀಲ, ಸಿಡಿಪಿಒ ಟಿ.ಯೋಗಿತಾಬಾಯಿ, ಅಶೋಕ, ಸಮಾಜ ಕಲ್ಯಾಣಾಧಿಕಾರಿ ಜಯಮ್ಮ ಸೇರಿದಂತೆ ಮೀನುಗಾರಿಕೆ, ತೋಟಗಾರಿಕೆ, ಸಹಕಾರಿ, ಕೈಗಾರಿಕೆ, ಎಪಿಎಂಸಿ, ನೀರು ಸರಬರಾಜು, ನೀರಾವರಿ, ಪಶುಸಂಗೋಪನೆ, ಅಕ್ಷರ ದಾಸೋಹ,  ಸಾರಿಗೆ, ಸಣ್ಣ ನೀರಾವರಿ, ಭೂಸೇನಾ ನಿಗಮ, ಕ್ಯಾಶ್ಯುಟೆಕ್‌ ಮತ್ತಿತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ. ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮುಖ್ಯವಾಗಿ ಕುಡಿಯುವ ನೀರಿನ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು.
ವೆಂಕಟರಾವ್‌ ನಾಡಗೌಡ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಖಾತೆ ಸಚಿವರು
 

Advertisement

Udayavani is now on Telegram. Click here to join our channel and stay updated with the latest news.

Next