Advertisement

ವಾಟರ್‌ ಸ್ಪ್ರೇ ಗನ್‌

04:43 AM May 25, 2020 | Lakshmi GovindaRaj |

ಗಿಡಗಳಿಗೆ ನೀರು ಹಾಕುವಾಗ, ಬುಡಕ್ಕೆ ನೀರು ಬಿಡುವುದರ ಜೊತೆಗೆ, ಕೆಲವೊಮ್ಮೆ ಎತ್ತರದ ಸ್ಥಳಗಳನ್ನು ತಲುಪಬೇಕಾಗುತ್ತದೆ. ಈ ಸಂದರ್ಭಕ್ಕೆ ಸರಿಹೊಂದುವ ಹಾಗೆ, ಹೈಪ್ರಷರ್‌ ವಾಟರ್‌ ಸ್ಪ್ರೇ ಗನ್‌ಗಳು ಮಾರುಕಟ್ಟೆಯಲ್ಲಿ  ಸಿಗುತ್ತವೆ. ಹೆಚ್ಚಿನ ಶ್ರಮವಿಲ್ಲದೆ, ಎತ್ತರದ ಸ್ಥಳಗಳಿಗೆ ನೀರನ್ನು ಸ್ಪ್ರೇ ಮಾಡಲು ಇದು ಸಹಕಾರಿ. ಹ್ಯಾಂಡಲ್‌ ಮಾದರಿಯ ಈ ವಸ್ತುವನ್ನು, ನೀರಿನ ಕೊಳವೆಯ ಒಳಗೆ ತೂರಿಸಬೇಕು. ನೀರಿನ ಪ್ರಷರ್‌ ಅನ್ನು ತಮಗೆ ಬೇಕಾದಂತೆ ಅಡ್ಜಸ್ಟ್ ಮಾಡಿಕೊಳ್ಳುವ ಸಲುವಾಗಿ, ತಿರುವು  ಸ್ಲೆಡರ್‌ ಅನ್ನು ನೀಡಲಾಗಿದೆ. ಅದನ್ನು ತಿರುಗಿಸುವ ಮೂಲಕ ಪ್ರಷರ್‌ ಅನ್ನು ನಿಯಂತ್ರಿಸಬಹುದು.

Advertisement

ನಾಝಲ್‌ ಅನ್ನು ಟೈಟ್‌ ಮಾಡಿ ಹೆಚ್ಚಿನ ಪ್ರಷರ್‌ಗೆ ಅಡ್ಜಸ್ಟ್ ಮಾಡಿದರೆ, ಕಡಿಮೆ ಪ್ರಮಾಣದ  ನೀರು ಹೊರಕ್ಕೆ ಹರಿಯುವುದು. ಇದರಿಂದ ನೀರಿನ ಉಳಿತಾಯ ಸಾಧ್ಯ. ಚಿತ್ರದಲ್ಲಿ ಕಾಣುವ ಹ್ಯಾಂಡಲ್‌ ಒತ್ತಿದರೆ ಮಾತ್ರ, ನೀರು ಸ್ಪ್ರೇ ಆಗುತ್ತದೆ. ದೀರ್ಘ‌ ಕಾಲ ದವರೆಗೆ ನೀರು ಹಾಯಿಸಬೇಕಾದಾಗ, ಅದರಲ್ಲಿನ ಲಾಕ್‌  ಅನ್ನು ಒತ್ತಬಹುದು.  ಹ್ಯಾಂಡಲ್‌ ಪ್ರಸ್‌ ಮಾಡಿದ ನಂತರ ಲಾಕ್‌ ಒತ್ತಿದರೆ, ಹ್ಯಾಂಡಲ್‌ ಪ್ರಸ್‌ ಆದ ಸ್ಥಿತಿಯಲ್ಲಿಯೇ ಲಾಕ್‌ ಆಗುತ್ತದೆ. ಹ್ಯಾಂಡಲ್‌ ಸಡಿಲಿಸಿದರೂ ಒತ್ತಿದಂತೆಯೇ ಇರುವುದರಿಂದ, ನೀರು ಹರಿಯುತ್ತಲೇ ಇರುತ್ತದೆ. ಕೈದೋಟ, ಉದ್ಯಾನವನ, ಹುಲ್ಲು ಹಾಸು- ಇತ್ಯಾದಿ ಸ್ಥಳಗಳಲ್ಲಿ ನೀರು ಬಿಡಲು ಈ ಉತ್ಪನ್ನ ಸೂಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next