Advertisement
ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳು ಎದುರಿಸುತ್ತಿರುವ ಅಂತಾರಾಜ್ಯ ನೀರು ಹಂಚಿಕೆ ವಿವಾದಗಳನ್ನು ಇತ್ಯರ್ಥಗೊಳಿಸಲು ಅಂತಾರಾಜ್ಯ ನದಿ ನೀರು ವ್ಯಾಜ್ಯಗಳ ಕಾಯ್ದೆ 1956 ಎಂಬ ಹೆಸರಿನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಇದೊಂದು ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಗಲಿದೆ ಎಂದಿದ್ದಾರೆ. ಅದೇ ವೇಳೆ ವಿಪಕ್ಷಗಳಿಂದ ಆಕ್ಷೇಪವೂ ಕೇಳಿಬಂದಿದ್ದು, ಬಿಜೆಡಿ ನಾಯಕ ಭತೃìಹರಿ ಮೆಹತಾಭ್ “ಇದೊಂದು ಲೋಪಪೂರಿತ ಮಸೂದೆ’. ಸರಕಾರ ಲೋಕಸಭೆಯಲ್ಲಿ ಮಂಡಿಸುವುದಕ್ಕೂ ಮೊದಲು ರಾಜ್ಯಗಳ ಅಭಿಪ್ರಾಯಗಳನ್ನು ಕೇಳಬೇಕಿತ್ತು ಎಂದಿದ್ದಾರೆ.
ಅಂತಾರಾಜ್ಯ ನೀರು ಹಂಚಿಕೆ ವಿವಾದ ಏಕ ನ್ಯಾಯಮಂಡಳಿಯಲ್ಲಿ ಬೇರೆ ಬೇರೆ ನ್ಯಾಯಪೀಠಗಳ ನ್ಯಾಯಮೂರ್ತಿಗಳನ್ನು ಒಳಗೊಂಡಿರಲಿದೆ. ಮಸೂದೆಯಲ್ಲಿರುವಂತೆ ಈ ನೂತನ ನ್ಯಾಯಮಂಡಳಿಯಲ್ಲಿ ಒಬ್ಬ ಅಧ್ಯಕ್ಷ, ಒಬ್ಬ ಉಪಾಧ್ಯಕ್ಷ ಹಾಗೂ ಆರು ಅಥವಾ ಆರಕ್ಕಿಂತ ಹೆಚ್ಚು ಮಂದಿ ಸದಸ್ಯರು ಇರಲಿದ್ದಾರೆ.
Related Articles
ಉಮಾ ಭಾರತಿ, ಕೇಂದ್ರ ಜಲ ಸಂಪನ್ಮೂಲ ಸಚಿವೆ
Advertisement
ಮುಖ್ಯಾಂಶಗಳುಯಾವುದೇ ಜಲವಿವಾದ ನಾಲ್ಕೂವರೆ ವರ್ಷಕ್ಕಿಂತ ಜಾಸ್ತಿ ಇತ್ಯರ್ಥಗೊಳ್ಳದೇ ಇರುವಂತಿಲ್ಲ. ಇತ್ಯರ್ಥಕ್ಕೆ ಸಮಯ ನಿಗದಿಗೊಳಿಸುವುದು. ನ್ಯಾಯಮಂಡಳಿ ನೀಡಿದ ತೀರ್ಪು ಅಂತಿಮವಾಗಿರಲಿದೆ. ಸಂಬಂಧಪಟ್ಟ ರಾಜ್ಯಗಳೂ ಇದಕ್ಕೆ ಬದ್ಧವಾಗಿರಬೇಕು. ನ್ಯಾಯಮಂಡಳಿಯ ಮುಖ್ಯಸ್ಥರು, ಸದಸ್ಯರು ಐದು ವರ್ಷಕ್ಕಿಂತ ಹೆಚ್ಚು ಕಾಲ ಸೇವೆಯಲ್ಲಿ ಇರುವಂತಿಲ್ಲ. 70 ವರ್ಷ ಮೇಲ್ಪಟ್ಟವರು ಮುಂದುವರಿಯುವಂತಿಲ್ಲ. ಕೇಂದ್ರ ನೀರು ಸರಬರಾಜು ಇಲಾಖೆಯ ತಜ್ಞ ಎಂಜಿನಿಯರ್‌ಗಳೂ ನ್ಯಾಯಮಂಡಳಿಯಲ್ಲಿರಬೇಕು. ವಿವಾದ ಪರಿಹಾರ ಸಮಿತಿ ರಾಜ್ಯಗಳ ಜತೆ ವಿವಾದದ ಕುರಿತು ಮಾತುಕತೆ ನಡೆಸಿದ ಬಳಿಕ ನ್ಯಾಯಮಂಡಳಿಯ ಮುಂದೆ ಕೊಂಡೊಯ್ಯಲಾಗುವುದು.