Advertisement

ನೀರಿನಲ್ಲಿ ಬೇಕು ಸಮಪಾಲು; ನದಿ ಜೋಡಣೆ ಬಗ್ಗೆ ಸಂಸದರ ಜತೆ ಸಿಎಂ ಪ್ರಸ್ತಾವ

12:14 AM Feb 08, 2022 | Team Udayavani |

ಬೆಂಗಳೂರು: “ನದಿ ಜೋಡಣೆ ವಿಚಾರದಲ್ಲಿ ರಾಜ್ಯಕ್ಕೆ ಸಮರ್ಪಕ ಪಾಲು ದೊರೆಯಬೇಕು. ಈ ವಿಚಾರದಲ್ಲಿ ರಾಜ್ಯದ ಸಂಸದರು ಮುಖ್ಯ ಪಾತ್ರ ವಹಿಸಬೇಕು…’

Advertisement

-ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ರಾಜ್ಯದ ಸಂಸದರ ಸಭೆ ಯಲ್ಲಿ ನದಿ ಜೋಡಣೆ ಬಗ್ಗೆ ಚರ್ಚಿಸಿದ ಸಿಎಂ, ರಾಜ್ಯಕ್ಕೆ ಸಿಗಬೇಕಾದ ನೀರಿನ ಪಾಲಿನ ಬಗ್ಗೆ ಪ್ರಸ್ತಾವಿಸಿದ್ದಾರೆ. ನಮ್ಮ ನದಿಗಳ ನೀರಿನಲ್ಲಿ ನಮ್ಮ ಅಗತ್ಯ ಮತ್ತು ಹಕ್ಕನ್ನು ಆಧರಿಸಿ ಪಾಲು ನಿರ್ಧಾರವಾಗಬೇಕು ಎಂದಿದ್ದಾರೆ.

ವಿತ್ತ ಸಚಿವರ ನಿರಾಕರಣೆ?
ಸಭೆಯಲ್ಲಿ 14ನೇ ಹಣಕಾಸು ಆಯೋಗದ ರಾಜ್ಯದ ಪಾಲಿನ 14 ಸಾವಿರ ಕೋಟಿ ರೂ. ಬಾಕಿ ಹಣವನ್ನು ನೀಡುವಂತೆ ಸಿಎಂ ಮಾಡಿದ ಮನವಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ಶಿಕ್ಷಣ ಇಲಾಖೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 530 ಕೋಟಿ ರೂ. ಬರಬೇಕಿದ್ದು, ಅದನ್ನೂ ಕೇಂದ್ರ ಸರಕಾರ ನೀಡಬೇಕು. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣಕ್ಕೆ ಬರಬೇಕಿದ್ದ 700 ಕೋಟಿ ರೂ. ನೀಡಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸರಕಾರದಿಂದ ಎಷ್ಟು ಅನುದಾನ ನೀಡಲಾಗುತ್ತಿದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಒದಗಿಸಬೇಕೆಂದು ಸಂಸದರು ಸಭೆಯಲ್ಲಿ ಆಗ್ರಹಿಸಿದರು.

ಇದನ್ನೂ ಓದಿ:ದತ್ತಪೀಠದಲ್ಲಿ ಪೂಜಾ ಕೈಂಕರ್ಯ ವಿವಾದ: ಸಂಪುಟ ಉಪಸಮಿತಿಯಿಂದ ಶೀಘ್ರ ವರದಿ ಸಲ್ಲಿಕೆ

Advertisement

ಮಾ. 15ರ ವರೆಗೆ ತೀರ್ಮಾನ ಬೇಡ
ಮಾ. 15ರ ವರೆಗೆ, ಪಂಚರಾಜ್ಯ ಚುನಾವಣೆ ಮುಗಿ ಯುವ ವರೆಗೆ ರಾಜ್ಯದಲ್ಲಿ ರಾಜಕೀಯ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ. ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೆ ಒತ್ತಡ ಇದ್ದು, ಈ ಬಗ್ಗೆ ಬೊಮ್ಮಾಯಿ ಮತ್ತು ಶಾ ಚರ್ಚಿಸಿದರು. ಮಾ. 15ರ ವರೆಗೆ ತೀರ್ಮಾನ ಬೇಡ ಎಂದು ಶಾ ಸೂಚಿಸಿದರು ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next