Advertisement
ಆಸ್ಪತ್ರೆಯಲ್ಲಿನ ಶೌಚಾಲಯಗಳಲ್ಲಿ ನೀರಿಲ್ಲ, ಶುಚಿತ್ವ ಕಾಪಾಡುತ್ತಿಲ್ಲ, ಈ ಬಗ್ಗೆ ಪದೇ ಪದೆಮನವಿ ಮಾಡಿದರೂ ಬಗೆಹರಿಸುತ್ತಿಲ್ಲ ಎಂದು ಆರೋಪಿಸಿ, ಆಕ್ರೋಶಗೊಂಡ ರೋಗಿಗಳುಆಸ್ಪತ್ರೆಯಿಂದ ಹೊರ ಬಂದು ಪ್ರತಿಭಟಿಸುವಮೂಲಕ ಜಿಲ್ಲಾಡಳಿತದ ಗಮನ ಸೆಳೆದರು.
Related Articles
Advertisement
ಪೌಷ್ಟಿಕತೆಯೇ ಇಲ್ಲ: ಕೋವಿಡ್ ಸೋಂಕಿತರಿಗೆ ದಿನನಿತ್ಯ ನೀಡುವ ಆಹಾರದಲ್ಲಿ ಪೌಷ್ಟಿಕತೆಗೆ ಆದ್ಯತೆ ಕೊಡಬೇಕು. ಆದರೆ, ಇದ್ಯಾವುದೂ ಇಲ್ಲಿ ಪಾಲನೆ ಆಗುತ್ತಿಲ್ಲ. ಇಲ್ಲಿನ ಸಿಬ್ಬಂದಿ ಕಾಫಿ, ಟೀ ಕೊಡುವ ಮನಸ್ಸಾದರೆ ಮಾತ್ರ ಕೊಡುತ್ತಾರೆ, ಇಲ್ಲದಿದ್ದರೆ ಇಲ್ಲ ಎಂದು ದೂರಿದರು.
ಮನೆಗೆ ಕಳುಹಿಸಿ: ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ವೃದ್ಧಿಸಿ ಇಲ್ಲವೇ ತಮ್ಮನ್ನು ಮನೆಗೆ ಕಳುಹಿಸಿ ಅಲ್ಲೇ ಚಿಕಿತ್ಸೆ ಕೊಡಿ ಎಂದು ಸೋಂಕಿತರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಪ್ರತಿಭಟನೆವಿಚಾರ ತಿಳಿದಾಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ನೀರು ಮತ್ತು ಸ್ವತ್ಛತೆಗೆ ತಕ್ಷಣದ ವ್ಯವಸ್ಥೆ ಮಾಡುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಭರವಸೆ ನೀಡಿದನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.ಮನೆಗೆ ಕರೆದುಕೊಂಡು ಹೋಗಲು ಮನವಿ:ಆದರೆ, ಶುಕ್ರವಾರ ಬೆಳಗ್ಗೆಯಾದರೂ ಸಮಸ್ಯೆಗಳು ಮುಂದುವರಿದಿದೆ. ಹೀಗಾಗಿ ಸೋಂಕಿತರು ತಮ್ಮಕುಟುಂಬಗಳಿಗೆ ಫೋನಾಯಿಸಿ ತಮ್ಮನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗುವಂತೆ ಮನವಿಮಾಡಿದ್ದಾರೆ ಎಂದು ಗೊತ್ತಾಗಿದೆ.
ಕೋವಿಡ್ ರೆಫರಲ್ ಆಸ್ಪತ್ರೆಯಲ್ಲಿ (ಕಂದಾಯ ಭವನ) ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ. ಕುಡಿಯುವ ನೀರು ಪೂರೈಸುವ 15 ಡಿಸ್ಪೆಂಸರ್‌ಗಳು ಸ್ಥಾಪನೆಯಾಗಿವೆ. ಹೆಚ್ಚುವರಿಯಾಗಿ ಇನ್ನೂ ಐದು ಡಿಸ್ಪೆಂಸರ್ ವ್ಯವಸ್ಥೆಗೆ ಸೂಚಿಸಲಾಗಿದೆ.– ಇಕ್ರಂ, ಸಿಇಒ, ಜಿಲ್ಲಾ ಪಂಚಾಯ್ತಿ