Advertisement
ಕಳೆದ ವರ್ಷ ಶೇ. 20.79ರಷ್ಟು ನೀರಿನ ಸಂಗ್ರಹಣೆ ಯನ್ನು ಹೊಂದಿದ್ದ ಅಮರಾವತಿ ವಿಭಾಗದ ಜಲಾಶಯಗಳು ಈ ಬಾರಿ ಶೇ. 24.07ರಷ್ಟು ನೀರನ್ನು ಹೊಂದಿವೆ. ರಾಜ್ಯದಲ್ಲಿ ಔರಂಗಾಬಾದ್ ವಿಭಾಗವು ಅತಿ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇಲ್ಲಿನ ಜಲಾಶಯಗಳಲ್ಲಿ ನೀರಿನ ಮಟ್ಟವು ಕಳೆದ ವರ್ಷದ ಶೇ. 28.2ರ ವಿರುದ್ಧ ಶೇ.5.14ಕ್ಕೆ ಕುಸಿದಿದೆ.
ನಾಸಿಕ್‌ನ ಜಲಾಶಯಗಳು ಕಳೆದ ವರ್ಷದ ಶೇ.32.66ರ ತುಲನೆಯಲ್ಲಿ ಈ ವರ್ಷ ಕೇವಲ ಶೇ.17.78ರಷ್ಟು ನೀರನ್ನು ಹೊಂದಿವೆ. ಕಳೆದ ವರ್ಷ ಈ ಅವಧಿಯಲ್ಲಿ ಶೇ.34.47ರಷ್ಟು ನೀರಿನ ಸಂಗ್ರಹವನ್ನು ಹೊಂದಿದ್ದ ಪುಣೆ ವಿಭಾಗದ ಜಲಾಶಯಗಳಲ್ಲಿ ಈ ವರ್ಷ ಶೇ.23.26ಕ್ಕೆ ಕುಸಿದಿವೆ. ಕೊಂಕಣ ಪ್ರದೇಶದ ಜಲಾಶಯಗಳಲ್ಲಿ ನೀರಿನ ಪರಿಸ್ಥಿತಿಯು ಸ್ವಲ್ಪ ಉತ್ತಮವಾಗಿದ್ದು, ಇಲ್ಲಿ ಕಳೆದ ವರ್ಷದ ಶೇ.47.57ರ ತುಲನೆಯಲ್ಲಿ ಈ ವರ್ಷ ಶೇ.40.58ರಷ್ಟು ನೀರಿನ ಸಂಗ್ರಹವಿದೆ. ವೇಗವಾಗಿ ಒಣಗುತ್ತಿವೆ
ಮುಂಬಯಿ ನಗರಕ್ಕೆ ನೀರನ್ನು ಒದಗಿಸುವ ಜಲಾಶಯಗಳು ಕೂಡ ವೇಗವಾಗಿ ಒಣಗುತ್ತಿವೆ, ಆದರೆ ಈಗ ಸಾಕಷ್ಟು ನೀರು ಹೊಂದಿವೆ. ಮಧ್ಯ ವೈತರ್ಣದಲ್ಲಿ ಶೇ. 24.59, ಮೋಡಕ್ ಸಾಗರ್‌ನಲ್ಲಿ ಶೇ. 50.46, ಮತ್ತು ತಾನ್ಸಾದಲ್ಲಿ ಶೇ. 34ರಷ್ಟು ನೀರಿನ ಸಂಗ್ರಹವಿದೆ.
Related Articles
ಔರಂಗಾಬಾದ್‌ನಲ್ಲಿ ಹೆಚ್ಚಿನ ಜಲಾಶಯಗಳು ಒಣಗಿವೆ. ಪ್ರದೇಶದ ಎಂಟು ಪ್ರಮುಖ ಜಲಾಶ ಯಗಳ ಪೈಕಿ ಏಳು ಜಲಾಶಯಗಳಲ್ಲಿ ನೀರಿನ ಮಟ್ಟವು ಶೂನ್ಯಕ್ಕೆ ಇಳಿದಿದ್ದು, ಇದರಲ್ಲಿ ಅತಿದೊಡ್ಡ ಅಣೆಕಟ್ಟು ಜಯಕ್‌ವಾಡಿ ಕೂಡ ಸೇರಿದೆ. ಕೊಂಕಣದಲ್ಲಿ ಬಾತ್ಸಾ ಅಣೆಕಟ್ಟು ಕಳೆದ ವರ್ಷದ ಶೇ.43.2ರಷ್ಟು ನೀರಿನ ತುಲನೆಯಲ್ಲಿ ಪ್ರಸ್ತುತ ಶೇ. 37.91ರಷ್ಟು ನೀರಿನ ಸಂಗ್ರಹವನ್ನು ಹೊಂದಿದೆ.
ಔರಂಗಾಬಾದ್‌ನ ಹೊರತಾಗಿ, ರಾಧಾನಗರಿ ಅಣೆಕಟ್ಟು (ಶೇ. 32.67), ತುಳಸಿ ಅಣೆಕಟ್ಟು (ಶೇ.45.14) ಕೊಯ್ನಾ (ಶೇ. 38.6) ಸೇರಿದಂತೆ ರಾಜ್ಯಾದ್ಯಂತ ಜಲಾಶಯಗಳು ಕೂಡ ಒಣಗಲಾರಂಭಿಸಿದ್ದು, ನೀರಿನ ಕೊರತೆ ಹೆಚ್ಚಾಗಲಾರಂಭಿಸಿದೆ.
Advertisement
ರಾಜ್ಯ ಸರಕಾರದ ಮಾಹಿತಿಯ ಪ್ರಕಾರ, ರಾಜ್ಯದ ಜಲಾಶಯಗಳಲ್ಲಿ ನೀರು ವೇಗವಾಗಿ ಇಳಿಮುಖವಾಗುತ್ತಿದೆ. ಮಹಾರಾಷ್ಟ್ರದ ಎಲ್ಲ ಜಲಾಶಯಗಳಲ್ಲಿ ಕಳೆದ ವರ್ಷದ ಶೇ. 30.84ರಷ್ಟು ನೀರಿನ ತುಲನೆಯಲ್ಲಿ ಪ್ರಸ್ತುತ ಒಟ್ಟು ಶೇ.19.35 ರಷ್ಟು ನೀರು ಮಾತ್ರ ಉಳಿದಿದೆ.
ನಾಗಪುರದ ದೊಡ್ಡ ಜಲಾಶಯಗಳಲ್ಲಿ ಶೇ. 8.51ರಷ್ಟು ನೀರಿನ ಸಂಗ್ರಹವಿದೆ. ಮಧ್ಯಮ ಅಣೆಕಟ್ಟುಗಳು ಶೇ.15.22ರಷ್ಟು ನೀರಿನ ಸಂಗ್ರಹವನ್ನು ಹೊಂದಿವೆ. ರಾಜ್ಯಾದ್ಯಂತ ದೊಡ್ಡ ಜಲಾಶಯಗಳು ಕಳೆದ ವರ್ಷದ ಶೇ. 31.33ರ ತುಲನೆಯಲ್ಲಿ ಶೇ.17.54 ರಷ್ಟು ನೀರಿನ ಶೇಖರಣೆಯನ್ನು ಹೊಂದಿವೆ. ಮಧ್ಯಮ ಮಟ್ಟದ ಅಣೆಕಟ್ಟಿನಲ್ಲಿ ಕಳೆದ ವರ್ಷದ 31.08ರ ತುಲನೆಯಲ್ಲಿ ಶೇ. 28.33ರಷ್ಟು ನೀರು ಉಳಿದಿದೆ.
ಔರಂಗಾಬಾದ್ ಪ್ರದೇಶದ ದೊಡ್ಡ ಜಲಾಶಯಗಳಲ್ಲಿ ಕೇವಲ ಶೇ. 2.73ರಷ್ಟು ನೀರು ಮಾತ್ರ ಉಳಿದಿದೆ. ಅದೇ, ಮಧ್ಯಮ-ಮಟ್ಟದ ಅಣೆಕಟ್ಟುಗಳು ಶೇ. 8.51ರಷ್ಟು ನೀರಿನ ಸಂಗ್ರಹವನ್ನು ಹೊಂದಿವೆ ಎಂದು ಸರಕಾರದ ಮಾಹಿತಿಯು ಬಹಿರಂಗಪಡಿಸಿದೆ.
ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲು ನಾವು ಚುನಾವಣಾ ಆಯೋಗದ ಅನುಮತಿಯನ್ನು ಕೋರಿದ್ದೇವೆ. ಈ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ ಅನಂತರ, ಪರಿಹಾರವನ್ನು ಒದಗಿಸಲಾಗುವುದು. ಜೂನ್‌ವರೆಗೆ ಬಳಸಬಹುದಾದ ಸಾಕಷ್ಟು ನೀರಿನ ಸಂಗ್ರಹವನ್ನು ನಾವು ಹೊಂದಿದ್ದೇವೆ. ಇಸಿಯಿಂದ ಅನುಮತಿ ಪಡೆಯಲು ವಿಫಲವಾದಲ್ಲಿ, ನಾವು ಖಾಸಗಿ ವಾಹನಗಳನ್ನು ಬಳಸಿ ಬರ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತೇವೆ ಮತ್ತು ಪರಿಹಾರ ಕ್ರಮಗಳನ್ನು ಕಂಡುಕೊಳ್ಳುತ್ತೇವೆ-ಗಿರೀಶ್ ಮಹಾಜನ್ , ನೀರಾವರಿ ಸಚಿವ