Advertisement

ಮದ್ಯ ನಿಷೇಧಕ್ಕಾಗಿ ಜಲ ಸತ್ಯಾಗ್ರಹ

11:18 PM Jan 28, 2020 | Team Udayavani |

ಕೂಡಲಸಂಗಮ: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಮಹಿಳೆಯರು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಜಲ ಸತ್ಯಾಗ್ರಹ ಆರಂಭಿಸಿದ್ದಾರೆ.

Advertisement

ಬಾಗಲಕೋಟೆ ಸೇರಿ ರಾಜ್ಯದ ವಿವಿಧ ಜಿಲ್ಲೆ ಗಳಿಂದ ಆಗಮಿಸಿದ ಮಹಿಳೆಯರು, ಮಂಗಳ ವಾರ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ತ್ರಿವೇಣಿ ಸಂಗಮವಾದ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಹೊರ ಆವರಣದ ರಥಬೀದಿಯ ಪಕ್ಕದ ಕೃಷ್ಣಾ ನದಿಯಲ್ಲಿ ಎದೆಮಟ್ಟದವರೆಗೆ ನೀರಿನಲ್ಲಿ ನಿಂತು, ಮದ್ಯ ನಿಷೇಧಿಸುವಂತೆ ಒತ್ತಾಯಿಸಿದರು.

ಬೆಳಗ್ಗೆ 9 ಗಂಟೆ ಸುಮಾರಿಗೆ 150 ಜನರ ತಂಡ ಎದೆಮಟ್ಟದವರೆಗೆ ನೀರಿಗೆ ಇಳಿದು ಹೋರಾಟ ಆರಂಭಿಸಿತು. ಈ ತಂಡದ ಸದಸ್ಯರು 1ರಿಂದ 2 ಗಂಟೆ ಕಾಲ ನಡುಮಟ್ಟದ ನೀರಿನಲ್ಲಿ ನಿಂತಿದ್ದರು. ಬಳಿಕ, ಮತ್ತೂಂದು ತಂಡ ನೀರಿಗಿಳಿಯಿತು. ಹೀಗೆ ಪಾಳೆ ಪದ್ಧತಿಯಂತೆ ಸತ್ಯಾಗ್ರಹಿಗಳು ನಿಲ್ಲಲು ನದಿ ದಡದಲ್ಲಿ ಕುಳಿತಿದ್ದರು.

ರಾಜ್ಯದ 16 ಜಿಲ್ಲೆಯಿಂದ 800ಕ್ಕೂ ಅಧಿಕ ಮಹಿಳೆಯರು ಮಂಗಳವಾರ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ಜಲಸತ್ಯಾಗ್ರಹ ಬುಧ ವಾರವೂ ಮುಂದುವರಿಯಲಿದೆ. ಗುರುವಾರ ನಾಡಿನ ವಿವಿಧ ಸ್ವಾಮೀಜಿಗಳೊಂದಿಗೆ ಸಮಾವೇಶ ನಡೆಸಿ, ಮದ್ಯಪಾನ ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ಸ್ವರ್ಣಾ ಭಟ್‌ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next