ಮೈಸೂರು : ಮನೆಯ ಸಂಪುಗಳಿಗೆ ಅಳವಡಿಸುವ ಪಂಪುಗಳನ್ನು ಕಳ್ಳತನ ಮಾಡುತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಮೈಸೂರಿನ ಶಾಂತಿ ನಗರದ ನಿವಾಸಿ ಮೊಹಮ್ಮದ್ ಸಲೀಂ ಎನ್ನಲಾಗಿದ್ದು ಈತನಿಂದ 50 ಸಾವಿರ ಬೆಲೆಯ 11 ಪಂಪುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ವಿವಿಧ ಮನೆಗಳ ಸಂಪುಗಳಿಗೆ ಅಳವಡಿಸಿದ್ದ ಮೋಟಾರ್ ಪಂಪುಗಳನ್ನು ಈತ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕಳ್ಳತನ ಕೃತ್ಯಕ್ಕೆ ಸಂಬಂಧಿಸಿ ಆಲನಹಳ್ಳಿ ಪೊಲೀಸ್ ಠಾಣೆಯ 4 ಪ್ರಕರಣಗಳು ಮತ್ತು ನಜರ್ಬಾದ್ ಪೊಲೀಸ್ ಠಾಣೆಯ 01 ಪ್ರಕರಣ ಪತ್ತೆಯಾಗಿರುತ್ತವೆ.
ಇದನ್ನೂ ಓದಿ ;ವಾಯುವಿಹಾರಕ್ಕೆ ತೆರಳಿದಾಗ ದುಷ್ಕರ್ಮಿಗಳಿಂದ ತುಂಬು ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ
ಉಪ ಪೊಲೀಸ್ ಆಯುಕ್ತರಾದ ಗೀತಾ ಪ್ರಸನ್ನ ಮಾಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಎಂ.ಎನ್ ಶಶಿಧರ್ ನೇತೃತ್ವದಲ್ಲಿ ಆಲನಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹೆಚ್ ಹರಿಯಪ್ಪ ಕಾರ್ಯಾಚರಣೆ.