Advertisement
ಇನ್ನೇನು ಮಳೆಗಾಲ ಸೀಸನ್ ಶುರುವಾಗುತ್ತಿದ್ದು, ವಾಟರ್ ಪ್ರೂಫ್ ವಸ್ತುಗಳತ್ತ ಎಲ್ಲರೂ ಮೊರೆಹೋಗುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವು ಮೊಬೈಲ್ ಕಂಪೆನಿಗಳು ವಾಟರ್ ಪ್ರೂಫ್ (ವಾಟರ್ ರೆಸಿಸ್ಟೆಂಟ್) ಮೊಬೈಲ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಳೆಗಾಲಕ್ಕೆಂದೇ ವಿಶೇಷವಾಗಿ ಸಿದ್ಧಗೊಂಡಿರುವ ಮೊಬೈಲ್ನಂತೆ ಇದ್ದು, ಮಳೆಗೆ ಸ್ಮಾರ್ಟ್‌ಫೋನ್ ಹಾಳಾಗುವ ಚಿಂತೆಯನ್ನು ಇನ್ನು ಬಿಡಬಹುದು.
Related Articles
Advertisement
ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಬ್ರ್ಯಾಂಡ್ ಸೃಷ್ಟಿಸಿದ ಸ್ಯಾಮ್‌ಸಂಗ್ ಕೂಡ ವಾಟರ್ ಪ್ರೂಫ್ ಸೌಲಭ್ಯವನ್ನು ಹೊಂದಿದೆ. 45,990 ರೂ. ಹೊಂದಿದ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್- 5 ಮೊಬೈಲ್ 5.7 ಇಂಚ್ ಡಿಸ್‌ಪ್ಲೇ, ಧೂಳು ಮತ್ತು ವಾಟರ್ ಪ್ರೂಫ್ ಹೊಂದಿದೆ. ಇದೇ ಕಂಪೆನಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7, ಎಸ್7 ಎಡ್ಜ್ ಕೂಡ ವಾಟರ್ ಪ್ರೂಫ್ ಮೊಬೈಲ್ ಆಗಿದೆ.
ಇದರೊಂದಿಗೆ ಕಡಿಮೆ ಬೆಲೆಯ ವಾಟರ್ ಪ್ರೂಫ್ ಮೊಬೈಲ್ ಕೂಡ ಮಾರುಕಟ್ಟೆಯಲ್ಲಿದೆ. ಕಾರ್ಬನ್ ಕಂಪೆನಿಯ ಆರ್-1 4ಜಿ ಎಲ್ಟಿಇ ಸ್ಮಾರ್ಟ್ ಫೋನ್ ಸ್ಲಿಮ್ ವಿನ್ಯಾಸದೊಂದಿಗೆ 13 ಮೆಗಾ ಫಿಕ್ಸೆಲ್ ಫೋಕಸ್ ಕೆಮರಾವನ್ನು ಒಳಗೊಂಡಿದೆ. ಇದು ಕೂಡ ವಾಟರ್ ಫ್ರೂಪ್ ಆಗಿದೆ. ಸುಮಾರು 7 ಸಾವಿರ ರೂ. ಇದರ ಮಾರುಕಟ್ಟೆ ದರ.
ವಾಟರ್ ಪ್ರೂಫ್ ಮೊಬೈಲ್ ಕವರ್
ನೀರಿನಿಂದ ಸ್ಮಾರ್ಟ್‌ಫೋನ್ ರಕ್ಷಿಸುವ ಸಲುವಾಗಿ ಮಾರುಕಟ್ಟೆಯಲ್ಲಿ ವಾಟರ್ ಪ್ರೂಫ್ ಕವರ್ ಕೂಡ ಬಂದಿದೆ. ಇದು ಬ್ಯಾಗ್‌ನ ರೀತಿಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಹೊರಗಡೆ ತೆರಳುವ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ವಾಟರ್ ಪ್ರೂಫ್ ಬ್ಯಾಗ್‌ನ ಒಳಗೆ ಮೊಬೈಲ್ ಹಾಕಬಹುದಾಗಿದೆ. ಈ ಕವರ್ ಸ್ವಲ್ಪ ದೊಡ್ಡದಿರುವುದರಿಂದ ಮೊಬೈಲ್ ಸೇರಿದಂತೆ ಇನ್ನಿತರ ಚಿಕ್ಕಪುಟ್ಟ ವಸ್ತುಗಳನ್ನು ಇದರಲ್ಲಿಡಲು ಸಾಧ್ಯವಾಗುತ್ತದೆ. ಹೆಚ್ಚಾಗಿ ಸ್ವಿಮ್ಮಿಂಗ್, ನೀರಿನ ಆಟ ಆಡುವ ವೇಳೆಯಲ್ಲಿ ವಾಟರ್ ಪ್ರೂಫ್ ಬ್ಯಾಗ್ ಅನ್ನು ಬಳಕೆ ಮಾಡುತ್ತಾರೆ. ಏಕೆಂದರೆ, ನೀರಿರುವ ಕೈಯಿಂದ ಮೊಬೈಲ್ ಮುಟ್ಟಿದರೆ ಮೊಬೈಲ್ ಹಾಳಾಗುವ ಪ್ರಮೇಯ ಹೆಚ್ಚಿರುತ್ತದೆ. ಈ ವೇಳೆ ಸಾಮಾನ್ಯ ಮೊಬೈಲ್ನ ಸುರಕ್ಷೆಗೆ ವಾಟರ್ ಪ್ರೂಫ್ ಬ್ಯಾಗ್ ಅನ್ನು ಕೆಲವು ಮಂದಿ ಉಪಯೋಗ ಮಾಡುತ್ತಾರೆ.
ವಾಟರ್ ಪ್ರೂಫ್ ಮೊಬೈಲ್ಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇನ್ನೇನು ಕೆಲವೇ ಸಮಯದಲ್ಲಿ ಮಳೆಗಾಲ ಆರಂಭವಾಗಲಿದ್ದು, ಗ್ರಾಹಕರು ಈಗಲೇ ವಾಟರ್ ಪ್ರೂಫ್ ಬ್ರ್ಯಾಂಡ್‌ನ ಮೊಬೈಲ್ಗಳನ್ನೇ ಆಯ್ಕೆ ಮಾಡುತ್ತಿದ್ದಾರೆ.
– ಮೋಹನ್ ಕುಮಾರ್, ಮೊಬೈಲ್ ಟೆಕ್ನೀಶಿಯನ್
– ಮೋಹನ್ ಕುಮಾರ್, ಮೊಬೈಲ್ ಟೆಕ್ನೀಶಿಯನ್
••••ನವೀನ್ ಭಟ್ ಇಳಂತಿಲ