Advertisement
ಬಂಟ್ವಾಳ: ಹಲವು ಬೃಹತ್ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ಇದೇ ಗ್ರಾಮದಿಂದ ನೀರು ಸರಬ ರಾಜಾದರೂ, ಈ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಕೂಡ ಪರಿಹಾರ ಕಂಡು ಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಗ್ರಾಮದ ಬಹುತೇಕ ಪ್ರದೇಶ ನೇತ್ರಾವತಿ ನದಿ ಕಿನಾರೆಯಲ್ಲಿದ್ದರೂ, ಗ್ರಾಮಕ್ಕೆ ನೀರಿನ ಸಮಸ್ಯೆ ಇರುವುದು ವಿಪರ್ಯಾಸ.
Related Articles
Advertisement
ಸಜೀಪಮುನ್ನೂರು ಗ್ರಾಮದ ಹಲವು ಕಡೆಗಳಿಂದ ಮಂಗಳೂರು ವಿಶ್ವ ವಿದ್ಯಾನಿಲಯ, ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಕೊಂಡು ಹೋಗಲಾಗುತ್ತಿದೆ. ಗ್ರಾಮದಲ್ಲೇ ಜಾಕ್‌ವೆಲ್ ಕೂಡ ನಿರ್ಮಿಸಲಾಗಿದೆ. ಉಳ್ಳಾಲ ನಗರ ಸಭೆ ಸೇರಿದಂತೆ ಅಲ್ಲಿ ಹಲವು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀರು ಪೂರೈಕೆಯ ದೃಷ್ಟಿಯಿಂದ ಬೃಹತ್ ಜಾಕ್‌ವೆಲ್ ಅನುಷ್ಠಾನಗೊಳ್ಳುತ್ತಿದ್ದು, ಅದರ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ.
ಸಜೀಪಮುನ್ನೂರು ಗ್ರಾಮಕ್ಕೆ ನೀರು ನೀಡುತ್ತಿಲ್ಲ ಎಂಬ ಕಾರಣಕ್ಕೆ ಜಾಕ್‌ವೆಲ್ ನಿರ್ಮಾಣಕ್ಕೆ ಪ್ರಾರಂಭದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದಿತ್ತು. ಬಳಿಕ ಸ್ಥಳೀಯ ಗ್ರಾಮಕ್ಕೂ ನೀರು ನೀಡ ಲಾಗುತ್ತದೆ ಎಂಬ ಭರವಸೆಯ ಹಿನ್ನೆಲೆಯಲ್ಲಿ ಕಾಮಗಾರಿಗೆ ಅವಕಾಶ ನೀಡಿದ್ದರು. ಇಲ್ಲಿಂದ ನೀರು ಕೊಂಡು ಹೋಗುವ ವೇಳೆಯೇ ಹಿಂತಿರುಗಿ ಬರುವ ಪೈಪುಲೈನ್ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಆದರೆ ನೀರು ಶುದ್ಧೀಕರಣಗೊಂಡು ಹಿಂದಿರುಗಿ ಬರುವ ಪೈಪ್‌ಲೈನ್ ಹಾಕದಿರುವುದರಿಂದ ಗ್ರಾಮಸ್ಥರಿಗೆ ಇನ್ನೂ ನೀರು ಸಿಗುವ ಭರ ವಸೆ ಸಿಕ್ಕಿಲ್ಲ.
ನೇರವಾಗಿ ನದಿಯಿಂದ ನೀರು :
ನದಿಯಲ್ಲಿ ಸಾಕಷ್ಟು ನೀರಿದ್ದರೂ ಜನತೆಗೆ ಕುಡಿಯುವ ನೀರು ಕೊಡುವ ಸಂದರ್ಭದಲ್ಲಿ ನೇರವಾಗಿ ಕೊಡುವಂತಿಲ್ಲ ಎಂಬ ನಿಯಮವಿದ್ದರೂ, ನಂದಾವರ ಪ್ರದೇಶ ಸೇರಿದಂತೆ ಗ್ರಾಮದ ಕೆಲ ವೊಂದೆಡೆ ನೇರವಾಗಿ ನೀರು ಕೊಡ ಲಾಗುತ್ತಿದೆ ಎಂಬ ಆರೋಪ ಇದೆ. ಅಂದರೆ ಶುದೀœಕರಣ ಘಟಕಕ್ಕೆ ಸಾಕಷ್ಟು ಅನುದಾನ ಬೇಕಿ ರುವು ದರಿಂದ ಅನುಷ್ಠಾನ ಮಾಡ ಲಾಗಿಲ್ಲ. ಕೆಲವು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋದ ಸಂದರ್ಭದಲ್ಲೂ ಪದೇ ಪದೆ ಗ್ರಾಮಕ್ಕೆ ನೀರಿನ ಸಮಸ್ಯೆ ಎದುರಾಗುತ್ತಲೇ ಇರುತ್ತದೆ.
ರುದ್ರಭೂಮಿ ಅನುಷ್ಠಾನಗೊಂಡಿಲ್ಲ :
ಪ್ರತೀ ಗ್ರಾಮದಲ್ಲೂ ಮುಕ್ತಿಧಾಮದ ಹೆಸರಿನಲ್ಲಿ ಹಿಂದೂ ರುದ್ರಭೂಮಿ ಇರ ಬೇಕು ಎಂಬ ನಿಯಮವಿದ್ದರೂ, ಸಜೀಪ ಮುನ್ನೂ ರಿನಲ್ಲಿ ಇನ್ನೂ ರುದ್ರಭೂಮಿ ಅನುಷ್ಠಾನಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ರುದ್ರ ಭೂಮಿಗೆ ಜಾಗ ಮೀಸ ಲಿಟ್ಟಿ ದ್ದರೂ, ಅದು ಕೂಡ ಗೊಂದಲದಲ್ಲಿದೆ. ರುದ್ರಭೂಮಿಯ ನಿವೇಶ ನದ ಸಮಸ್ಯೆಯನ್ನು ಅಂತಿಮ ಗೊಳಿಸುವುದಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂಬ ಆರೋಪವೂ ಇದೆ.
ಸಾವಿರಕ್ಕೂ ಅಧಿಕ ಅರ್ಜಿ :
ಗ್ರಾಮದಲ್ಲಿ ಹಲವಾರು ಮಂದಿ ನಿವೇಶನರಹಿತರಾಗಿದ್ದು ಫಲಾನುಭವಿಗಳ ಸಂಖ್ಯೆ ಸಾವಿರ ದಾಟಿದೆ. ಆದರೆ ಅದರ ಹಂಚಿಕೆಯೂ ಇನ್ನೂ ಕೂಡ ವಿಳಂಬವಾಗುತ್ತಲೇ ಇದೆ. ಅಂದರೆ ಒಂದೇ ಮನೆಯಲ್ಲಿ 10-15 ಮಂದಿ ವಾಸಿಸುತ್ತಿದ್ದು, ಅವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅದಕ್ಕೆ ಸರಕಾರಿ ಭೂಮಿಯ ಲಭ್ಯತೆಯ ಆಧಾರದಲ್ಲಿ ಭೂಮಿ ಹಂಚಿಕೆಯ ಕಾರ್ಯ ನಡೆಯಬೇಕಿದೆ.
-ಕಿರಣ್ ಸರಪಾಡಿ