Advertisement
ಈ ಭಾಗದ ರೈತರು ಹೈನುಗಾರಿಕೆ ನೆಚ್ಚಿಕೊಂಡಿದ್ದು, ಜನ ಮತ್ತು ಜಾನು ವಾರುಗಳಿಗೆ ಅಗತ್ಯ ಇರುವ ಕಾರಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಳವೆ ಬಾವಿಯಿಂದ ದಿನ ಬಿಟ್ಟು ದಿನ ನೀರು ಬಿಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನೀರಿನ ಪ್ರಮಾಣ ಮತ್ತಷ್ಟು ಕಡಿಮೆ ಯಾಗಿ ಜನರು ಕಷ್ಟದ ಬದುಕನ್ನು ನಡೆಸುವಂತಾಗಿದೆ. ಬಿರು ಬೇಸಿಗೆಯಲ್ಲಿ ನೀರಿನ ಅಗತ್ಯ ಹೆಚ್ಚಾಗಿರುವ ಕಾರಣ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಖರೀದಿಸಿ ಕುಡಿಯುವಂತಾಗಿದೆ. ಜನರು ನೀರು ಸಿಗುವ ಸ್ಥಳಗಳಲ್ಲಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯಬೇಕಿದೆ. ಗ್ರಾಮಸ್ಥರ ಇಂತಹ ಪರಿಸ್ಥಿತಿಯನ್ನು ಗಮನಿಸಿದ ಗ್ರಾಪಂ ಹಿಂದೆ ಕೊರೆಯಿಸಿದ್ದ ಕೊಳವೆ ಬಾವಿಯೊಂದಕ್ಕೆ ಎರಡು ಮೂರು ದಿನಗಳ ಹಿಂದೆ ಹೊಸ ಪಂಪು ಮೋಟಾರು ಅಳವಡಿಸಿದ್ದು, ಪ್ರತಿನಿತ್ಯ ಒಂದು ತಾಸು ಬರುವ ಕೆಸರುಮಯವಾದ ನೀರನ್ನು ಸಂಗ್ರಹಿಸಬೇಕಿದೆ.ಮಾಲೂರು: ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಚನ್ನಕಲ್ಲು ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸಂತೇಹಳ್ಳಿ ಗ್ರಾಪಂ ವ್ಯಾಪ್ತಿಯ ಚನ್ನಕಲ್ಲು ಮತ್ತು ಸಮೀಪದ ಮೈಲಾಂಡಹಳ್ಳಿ ಗ್ರಾಮಗಳಿಗೆ ನೀರು ಪೂರೈಸಲು ಒಂದೇ ಕೊಳವೆ ಬಾವಿ ಇದ್ದು, ಇತ್ತೀಚಿನ ದಿನಗಳಲ್ಲಿ ಎರಡೂ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಬವಣೆ ಹೆಚ್ಚಾಗಿ ಇಲ್ಲಿನ ಜನರು ನೀರಿಗಾಗಿ ಪರದಾಡುವಂತಾಗಿದೆ.
Related Articles
Advertisement
ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ರಾಸುಗಳಿಗೆ ನೀರಿಲ್ಲದೆ, ಹೈನುಗಾರಿಕೆಯಿಂದ ಹಿಂದೆ ಸರಿಯುವಂತಾಗಿದೆ. 600 ರಿಂದ 700 ರೂ. ನೀಡಿ ಟ್ಯಾಂಕರ್ ನೀರು ಪಡೆಯುವಂತಾಗಿದೆ.- ನಾರಾಯಣಸ್ವಾಮಿ, ಗ್ರಾಮಸ್ಥ