ತಾಲೂಕಿನಲ್ಲಿ 58 ಕೋಟಿ ರೂ. ವೆಚ್ಚದಲ್ಲಿ ಏಳು ಕೆರೆಗಳನ್ನು ತುಂಬುವ ಮೂಲಕ ರೈತರ ಬಹುದಿನದ ಬೇಡಿಕೆ ಇಡೆರಿಸಿದಂತಾಗಿದೆ ಎಂದು ಶಾಸಕ ಎಂ.ವೈ.
ಪಾಟೀಲ ಹೇಳಿದರು. ತಾಲೂಕಿನ ಮಾಶಾಳ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಡಿಯಲ್ಲಿ 58 ಕೋಟಿ ರೂ. ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
Advertisement
ಕೃಷಿ ದೇಶದ ಬಹುಮುಖ್ಯ ಕಸಬಾಗಿದ್ದು ಕೃಷಿ ಚಟುವಟಿಕೆಗಳು ಬಲವರ್ಧನೆಗೊಳ್ಳಲು ನೀರಾವರಿ ಯೋಜನೆ ಯಶಸ್ವಿಯಾಗಬೇಕು. ಇನ್ನು ಕೃಷಿಯತ್ತಯುವಕರು ಸೇರಿದಂತೆ ವಿದ್ಯಾವಂತರು ಒಲವು ತೋರಿಸಿದರೆ ಕೃಷಿ ಮತ್ತಷ್ಟು ಲಾಭದತ್ತ ಹೆಜ್ಜೆ ಹಾಕಲು ಸಾಧ್ಯ ಎಂದರು.
Related Articles
Advertisement
ಕೆಎನ್‌ಎಲ್‌ಎಲ್ ಇಇ ಮಲ್ಲಿಕಾರ್ಜುನ ಜಾಕಾ ಕಾಮಗಾರಿ ಕುರಿತು ಮಾಹಿತಿ ನೀಡಿದರು. ಕಾಂಗ್ರೆಸ್ ಮುಖಂಡ ಜೆ.ಎಂ.ಕೊರಬು ಮಾತನಾಡಿ, ನಾನು ಯಾವತ್ತಿಗೂ ಕಾಂಗ್ರೆಸ್ ಪಕ್ಷದಲ್ಲಿದ್ದು ಸೇವೆ ಮಾಡುತ್ತೇನೆ. ಶಾಸಕ ಎಂ.ವೈ. ಪಾಟೀಲ ಜನಪರ ಕೆಲಸಗಳಿಗೆ ಸದಾ ಬೆಂಬಲ ಇದೆ ಎಂದರು.
ಗ್ರಾ ಪಂ ಅಧ್ಯಕ್ಷ ಸುಗಲಾಬಾಯಿ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಸದಸ್ಯ ರಾಜಕುಮಾರ ಬಬಲಾದ, ಜಿಪಂ ಸದಸ್ಯೆ ಬೌರಮ್ಮ ಕರೂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೆಶ ಪಾಟೀಲ, ಮುಖಂಡರಾದ ಪಪ್ಪು ಪಟೇಲ್, ರಮೇಶ ಪೂಜಾರಿ ಉಡಚಾಣ ಮಹಾದೇವಗೌಡ ಕರೂಟಿ, ಬಾಬಾಸಾಹೇಬಗೌಡ ಪಾಟೀಲ, ಶಿವಪುತ್ರಪ್ಪ ಜಿಡ್ಡಗಿ, ಸಿದ್ದಾರ್ಥ ಬಸರಿಗಿಡ, ರಾಜಶೇಖರ ಪಾಟೀಲ, ಸಂತೋಷ ರಾಠೊಡ, ಶಿವಾನಂದ ಗಾಡಿಸಾಹುಕಾರ, ಬಿಲ್ಲಮರಾಜ್ ಮ್ಯಾಳೆಸಿ, ಶಿವರುದ್ರಪ್ಪ ಅವಟಗಿ, ರೇವಪ್ಪ ನಾಮಗೊಂಡ, ಚಂದು ದೇಸಾಯಿ, ವಿಠೊಬ ಪೂಜಾರಿ, ನಾನಾ ಸಾಹೇಬಗೌಡ ಪಾಟೀಲ, ಶರಣು ಕುಂಬಾರ ಇತರರು ಇದ್ದರು.