Advertisement
ಈ ಗ್ರಾಮಗಳ ಜನರ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ “ಭಗೀರಥ ಹೆಜ್ಜೆ’ ಇರಿಸಿರುವ ಚಿಕ್ಕಬಳ್ಳಾಪುರ ಶಾಸಕ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಯದಾರ್ಲಹಳ್ಳಿ ಕೆರೆ ಮೂಲಕ ನೀರು ಹರಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಕೊಡಿಸಿದ್ದು ಕಾಮಗಾರಿ ಹಾದಿ ಸುಗಮವಾಗಿದೆ.
Related Articles
Advertisement
ಜನ ನೀರು ಪಡೆಯಲು ಕೆರೆ, ಬಾವಿಗಳ ಬಳಿ ಹೋಗಿ ಬರಬೇಕಿತ್ತು.ಆದರೀಗ ಮನೆಗಳಿಗೆಕೊಳಾಯಿಯಲ್ಲಿ ನೀರು ಬರುವ ಸೌಲಭ್ಯ ಕಲ್ಪಿಸಲಾಗುತ್ತದೆ.
ಯದಾರ್ಲಹಳ್ಳಿ ಕೆರೆ: ದಕ್ಷಿಣ ಪೆನ್ನಾರ್‌ನಿಂದ ನೀರು ಪಡೆಯುವ ಯದಾರ್ಲಹಳ್ಳಿ ಕೆರೆ 101.31 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. 30.40 ಹೆಕ್ಟೇರ್‌ನಲ್ಲಿ ನೀರಿದೆ. ಈ ಕೆರೆ ಒಟ್ಟು 27.63 ಎಂಸಿಎಫ್ಟಿ ಸಾಮರ್ಥ್ಯ ಹೊಂದಿದೆ. ಇಲ್ಲಿ ನೀರನ್ನು ಶುದ್ಧೀಕರಿಸುವ ಘಟಕ ಅಳವಡಿಸಿದ್ದು ನೀರನ್ನು ಶುದ್ಧಮಾಡಿ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಈ ಎಲ್ಲಾ ಕಾಮಗಾರಿ ಶೀಘ್ರವಾಗಿ ಮುಗಿಸಿ, 2023ರ ವೇಳೆಗೆ ಮನೆಗಳಿಗೆ ನೀರು ಪೂರೈಸಲಾಗುತ್ತದೆ.
ನೀರಿನ ಸೌಲಭ್ಯ ಪಡೆದ ಗ್ರಾಮಗಳು ಯಾವುವು? :
ಬಚ್ಚೇನಹಳ್ಳಿ, ದರಬೂರು, ಗುಡಿಸಿಹಳ್ಳಿ, ನೆಲಮಾನಪರ್ತಿ, ಗುಂಡ್ಲಮಂಡಿಕಲ್ಲು, ಮಣಿಪುರ, ಹೊಸಹಳ್ಳಿ, ಮಂಡಿಕಲ್ಲು, ಯಾಟಗಾನಹಳ್ಳಿ, ಪಾರೇನಹಳ್ಳಿ, ಪೈಯೂರು, ಯದಾರ್ಲಹಳ್ಳಿ, ಜೀಡಮಾಕಲಹಳ್ಳಿ, ಯರ್ರಬಾಪನಹಳ್ಳಿ.
ಜ್ವಲಂತ ಸಮಸ್ಯೆ ನಿವಾರಣೆಗೆ ಪ್ರಧಾನಿ ಮೋದಿ ಆದ್ಯತೆ :
ಎಚ್.ಎನ್.ವ್ಯಾಲಿಯಿಂದ ಕೆರೆಗಳ ಭರ್ತಿ, ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ ಮೊದಲಾದ ಜಲ ಪೂರೈಕೆ ಯೋಜನೆಗಳ ಮುಂದುವರಿದ ಭಾಗವಾಗಿ, ಯದಾರ್ಲಹಳ್ಳಿ ಕೆರೆಯಿಂದ ನೀರು ಪಡೆದು, ಕೊಳಾಯಿಗಳಲ್ಲಿ ಮನೆಮನೆಗೆ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಸ್ವಾತಂತ್ರÂ ಬಂದು 75 ವರ್ಷಗಳಾದರೂ ಎಲ್ಲಾ ಮನೆಗಳಿಗೆ ಕೊಳಾಯಿ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂಬುದು ಜ್ವಲಂತ ಸಮಸ್ಯೆ. ಈ ಸಮಸ್ಯೆಗೆ ಆದ್ಯತೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಲಜೀವನ್ ಮಿಷನ್‌ನಿಂದ ಮನೆಗೆ ನೇರವಾಗಿ ನೀರು ಪೂರೈಸುವ ಗುರಿಯನ್ನು ರಾಜ್ಯ ಸರ್ಕಾರಗಳಿಗೆ ನೀಡಿದ್ದಾರೆ. ಆ ಕನಸನ್ನು ಸಾಕಾರಗೊಳಿಸುವತ್ತ ಸಾಗಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಪ್ರಮುಖಾಂಶಗಳು :
ವೆಚ್ಚ: 15.48 ಕೋಟಿ ರೂ. ಮನೆಗಳು: 1420
ನೀರಿನ ಬೇಡಿಕೆ: 0.43 ಎಂಎಲ್‌ಡಿ
ಪ್ರಸ್ತುತ ಫಲಾನುಭವಿಗಳು: 5251 ಪೂರೈಸುವ ನೀರು: 55 ಎಲ್‌ಪಿಸಿಡಿ
ಕಾಮಗಾರಿ ಪೂರ್ಣ-ನೀರು ಪೂರೈಕೆ ಆರಂಭ: 2023ರಲ್ಲಿ
ಪೈಪ್ ಅಳವಡಿಕೆ: 23,345 ಮೀಟರ್ ಉದ್ದ
ಶುದ್ಧೀಕರಣ ಘಟಕದ ಸಾಮರ್ಥ್ಯ: 0.43 ಎಂಎಲ್‌ಡಿ
ಸಮಾನಾಂತರ ಜಲಾಶಯದ ಸಾಮರ್ಥ್ಯ: 2ಲಕ್ಷ ಲೀಟರ್.