Advertisement

ಮನೆಮನೆಗಳಲ್ಲೂ ಮೂಡುತ್ತಿದೆ ಜಲಸಾಕ್ಷರತೆ

01:21 AM Jun 27, 2019 | mahesh |

ಮಹಾನಗರ: ಜಲ ಸಾಕ್ಷರತೆ ಕುರಿತು ಉದಯವಾಣಿ ಹಮ್ಮಿಕೊಂಡ ಮನೆಮನೆಗೆ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತರಾಗಿ ಮುಂದಿನ ದಿನಗಳಲ್ಲಿ ಜಲಸಂಪನ್ಮೂಲವನ್ನು ಉಳಿಸುವ ನಿಟ್ಟಿನಲ್ಲಿ ನಗರವಾಸಿಗಳು ಮಳೆ ನೀರು ಸಂಗ್ರಹಿಸಲು ಮಳೆಕೊಯ್ಲು ಅಳವಡಿಸುತ್ತಿದ್ದರೆ ಗ್ರಾಮೀಣ ಭಾಗಗಳಲ್ಲಿ ಇಂಗುಗುಂಡಿಯಂಥ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಮಂಗಳೂರಿನ ನಗರವಾಸಿಗಳಿಂದ ಬಂಟ್ವಾಳ ತಾಲೂಕಿನಿಂದಲೂ ಸ್ಪಂದನೆ ವ್ಯಕ್ತವಾಗಿದೆ.

Advertisement

ಬಂಟ್ವಾಳ ತಾಲೂಕಿನ ಅಮೂrರು ಬಾಳಿಕೆಯ ವಿಖ್ಯಾತ್‌ ಶೆಟ್ಟಿ ಅವರು ತಮ್ಮ ಮನೆಯಲ್ಲಿ ಮಳೆ ನೀರು ಇಂಗಿಸುವ ಸಲುವಾಗಿ ಇಂಗುಗುಂಡಿಯನ್ನು ನಿರ್ಮಾಣ ಮಾಡಿದ್ದಾರೆ.

ತಮ್ಮ ಮನೆಯ ಬೋರ್‌ವೆಲ್ ಪಕ್ಕದಲ್ಲಿ 5 ಫೀಟ್ ಮತ್ತು 11 ಫೀಟ್ ಆಗಲವಿರುವ ಗುಂಡಿಯನ್ನು ನಿರ್ಮಾಣ ಮಾಡಿದ್ದಾರೆ. ಮಳೆ ನೀರು ಈ ಗುಂಡಿಗೆ ಬೀಳುವಂತೆ ಮಾಡಿ ನೀರು ಇಂಗಿಸುತ್ತಿದ್ದಾರೆ. ಇನ್ನು ಎತ್ತರದ ಪ್ರದೇಶಗಳಿಂದ ಬರುವ ಮಳೆ ನೀರನ್ನು ಕಣಿಯ ಮುಖೇನ ಬಾವಿಗೆ ಸಂಪರ್ಕ ಕಲ್ಪಿಸಿದ್ದಾರೆ. ಈ ಬಾವಿಯ ನೀರನ್ನು ಇವರು ಕುಡಿಯುವ ಉದ್ದೇಶಕ್ಕೆ ಉಪಯೋಗಿಸದೇ ಇರುವ ಕಾರಣದಿಂದ ಕೇವಲ ನೀರು ಇಂಗಿಸಲು ಬಳಕೆ ಮಾಡುತ್ತಿದ್ದಾರೆ. ಪಕ್ಕದಲ್ಲಿಯೇ ಬೋರ್‌ವೆಲ್ ಇರುವುದರಿಂದ ಇಂಗುಗುಂಡಿ ನಿರ್ಮಾಣ ಮಾಡಿದ ಪರಿಣಾಮವಾಗಿ ನೀರಿನ ಮಟ್ಟ ಏರಿಕೆಯಾಗಬಹುದು ಮತ್ತು ಅಕ್ಕಪಕ್ಕದ ಮನೆಗಳ ಬಾವಿ, ಬೋರ್‌ವೆಲ್ಗಳಲ್ಲಿಯೂ ನೀರಿನ ಮಟ್ಟ ಏರಿಕೆಯಾಗಬಹುದು ಎಂಬ ಉದ್ದೇಶದಿಂದ ಇಂಗುಗುಂಡಿ ನಿರ್ಮಾಣ ಮಾಡಿದ್ದಾರೆ.

ಉದಯವಾಣಿ ಸುದಿನದಲ್ಲಿ ಪ್ರಕಟವಾಗುತ್ತಿದ್ದ ಮಳೆನೀರು ಕೊಯ್ಲು ಅಭಿಯಾನವನ್ನು ನಾನು ಗಮನಿಸಿದೆ. ಮಳೆ ನೀರನ್ನು ಪೋಲಾಗಲು ಬಿಡದೆ ಹಿಡಿದಿಟ್ಟುಕೊಂಡರೆ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ ಎಂಬ ಉದ್ದೇಶದಿಂದ ಇಂಗುಗುಂಡಿ ನಿರ್ಮಾಣ ಮಾಡಿದೆ ಎನ್ನುತ್ತಾರೆ ವಿಖ್ಯಾತ್‌.

ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೊ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Advertisement

ಹಲವು ವರ್ಷಗಳಿಂದ ನೀರಿನ ಕೊರತೆ ಎದುರಾಗುತ್ತಿತ್ತು. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಮನೆ ಮುಂಭಾಗದಲ್ಲಿ ಬಾವಿ ತೋಡಿಸಿ ಅದಕ್ಕೆ ಮಳೆಕೊಯ್ಲು ಅಳವಡಿಸಿದೆವು ಎನ್ನುತ್ತಾರೆ ಮೋರ್ಗನ್‌ಗೇಟ್ಸ್‌ನ ಭಗವಾನ್‌ದಾಸ್‌.

ಈ ಹಿಂದೆ ಬೇರೆ ಕಡೆ ಮನೆ ಮಾಡಿದ್ದ ಸಂದರ್ಭದಲ್ಲಿ ಅಲ್ಲಿ ಮಳೆಕೊಯ್ಲು ಅಳವಡಿಸಿದ್ದೆವು. ಅಲ್ಲಿ ಬೇಸಗೆಯಲ್ಲಿಯೂ ನೀರು ಆರುವುದಿಲ್ಲ. ಅದರ ಲಾಭದ ಬಗ್ಗೆ ಅರಿವಾದ ಬಳಿಕ ನಮ್ಮ ಮನೆಯಲ್ಲೂ ಮಳೆಕೊಯ್ಲು ಅಳವಡಿಸಬೇಕು ಎಂದು ಯೋಚಿಸಿದ್ದೆ. ಉದಯವಾಣಿ ಅಭಿಯಾನ ನೋಡಿದ ಬಳಿಕ ಬೋರ್‌ ವೆಲ್ ಬಗ್ಗೆ ಹೆಚ್ಚು ಆಸಕ್ತಿ ತಾಳದೆ ಬಾವಿ ತೋಡಿಸಿದೆವು. ಮನೆಯ ಟೆರೇಸ್‌ಗೆ ಬೀಳುವ ಮಳೆ ನೀರನ್ನು ಪೈಪ್‌ ಮೂಲಕ ಫಿಲ್ಟರ್‌ ಮಾಡಿ ಬಾವಿಗೆ ಬೀಳುವಂತೆ ಮಾಡಿದೆವು. ಬಾವಿಗೆ ಒಂದು ಲಕ್ಷದವರೆಗೆ ಖರ್ಚು ತಗಲಿದ್ದು, ಮಳೆಕೊಯ್ಲು ಅಳವಡಿಕೆಗೆ 30,000 ರೂ. ವರೆಗೆ ಖರ್ಚಾಗಿದೆ. ಆದರೆ ನೀರಿನ ಸಮಸ್ಯೆ ಮುಂದಿನ ಬಾರಿ ಎದುರಾಗುವುದಿಲ್ಲ ಎಂಬ ವಿಶ್ವಾಸ ಇದೆ ಎನ್ನುತ್ತಾರೆ ಅವರು.

ಬಾವಿ ತೋಡಿ ಮಳೆಕೊಯ್ಲು ಅಳವಡಿಕೆ

ಅಶೋನಗರದ ನಿವಾಸಿ ಲೋಬೊ ಅವರಿಗೆ ಈವರೆಗೆ ನೀರಿನ ಸಮಸ್ಯೆ ಉಂಟಾಗಲಿಲ್ಲ. ಮುಂಬರುವ ದಿನಗಳಲ್ಲಿಯೂ ನೀರಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಉದಯವಾಣಿ ಅಭಿಯಾನದಿಂದ ಪ್ರೇರಿತರಾಗಿ ತಮ್ಮ ಮನೆಯಲ್ಲಿ ಮಳೆ ನೀರು ಕೊಯ್ಲ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.

ಸುಮಾರು 40 ವರ್ಷಗಳ ಹಿಂದಿನ ಬಾವಿ ಇವರ ಮನೆಯಲ್ಲಿದ್ದು, ಈವರೆಗೆ ನೀರಿನ ಸಮಸ್ಯೆ ಉಂಟಾಗಿಲ್ಲ. ಈಗ ಮಳೆ ನೀರು ಪೋಲಾಗಬಾರದು ಎಂಬ ಉದ್ದೇಶದಿಂದ ಮನೆಯ ಛಾವಣಿಯ ನೀರನ್ನು ಪೈಪ್‌ಲೈನ್‌ ಮೂಲಕ ತಮ್ಮ ಬಾವಿಗೆ ಸಂಪರ್ಕ ಕಲ್ಪಿಸಿದ್ದಾರೆ. ಬಾವಿಯ ಬಳಿ ಫಿಲ್ಟರ್‌ ವ್ಯವಸ್ಥೆ ಮಾಡಲಾಗಿದ್ದು, ಕಸ, ಕಡ್ಡಿಗಳು ನೀರಿನಲ್ಲಿ ಬಂದರೆ ಬಟ್ಟೆಯಲ್ಲಿ ನಿಂತು ಶುದ್ಧ ನೀರು ಬಾವಿಗೆ ಹೋಗುತ್ತಿದೆ.

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ

ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೊ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

ನೀರಿನ ಸಮಸ್ಯೆ ತಡೆಯಲು ಮಳೆಕೊಯ್ಲು
ಅಶೋನಗರದ ನಿವಾಸಿ ಲೋಬೊ ಅವರಿಗೆ ಈವರೆಗೆ ನೀರಿನ ಸಮಸ್ಯೆ ಉಂಟಾಗಲಿಲ್ಲ. ಮುಂಬರುವ ದಿನಗಳಲ್ಲಿಯೂ ನೀರಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಉದಯವಾಣಿ ಅಭಿಯಾನದಿಂದ ಪ್ರೇರಿತರಾಗಿ ತಮ್ಮ ಮನೆಯಲ್ಲಿ ಮಳೆ ನೀರು ಕೊಯ್ಲ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಸುಮಾರು 40 ವರ್ಷಗಳ ಹಿಂದಿನ ಬಾವಿ ಇವರ ಮನೆಯಲ್ಲಿದ್ದು, ಈವರೆಗೆ ನೀರಿನ ಸಮಸ್ಯೆ ಉಂಟಾಗಿಲ್ಲ. ಈಗ ಮಳೆ ನೀರು ಪೋಲಾಗಬಾರದು ಎಂಬ ಉದ್ದೇಶದಿಂದ ಮನೆಯ ಛಾವಣಿಯ ನೀರನ್ನು ಪೈಪ್‌ಲೈನ್‌ ಮೂಲಕ ತಮ್ಮ ಬಾವಿಗೆ ಸಂಪರ್ಕ ಕಲ್ಪಿಸಿದ್ದಾರೆ. ಬಾವಿಯ ಬಳಿ ಫಿಲ್ಟರ್‌ ವ್ಯವಸ್ಥೆ ಮಾಡಲಾಗಿದ್ದು, ಕಸ, ಕಡ್ಡಿಗಳು ನೀರಿನಲ್ಲಿ ಬಂದರೆ ಬಟ್ಟೆಯಲ್ಲಿ ನಿಂತು ಶುದ್ಧ ನೀರು ಬಾವಿಗೆ ಹೋಗುತ್ತಿದೆ.
Advertisement

Udayavani is now on Telegram. Click here to join our channel and stay updated with the latest news.

Next