Advertisement

ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಅಲ್ಪ ಏರಿಕೆ: ರೇಷನಿಂಗ್‌ ಕೈ ಬಿಡುವ ಸಾಧ್ಯತೆ

01:54 AM Jun 13, 2019 | Team Udayavani |

ಮಂಗಳೂರು: ನೇತ್ರಾವತಿ ಜಲಾನಯನ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ನೀರು ಉಣಿಸುವ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಬುಧವಾರ 5 ಸೆಂ.ಮೀ. ನಷ್ಟು ಏರಿಕೆಯಾಗಿದೆ.

Advertisement

ಸೋಮವಾರ ಸಂಜೆ ವೇಳೆಗೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 2.10 ಸೆಂ.ಮೀ. ಇತ್ತು. ಮಂಗಳವಾರ ದಿನಪೂರ್ಣ ಪಂಪಿಂಗ್‌ ಮಾಡಿದರೂ ಬಳಿಕ ಸಂಜೆಯ ವೇಳೆ ಡ್ಯಾಂನಲ್ಲಿ ನೀರಿನ ಮಟ್ಟ 2.20 ಸೆಂ.ಮೀ. ಆಗಿತ್ತು. ಬುಧವಾರ ಸಂಜೆ ವೇಳೆಗೆ 2.25 ಸೆಂ.ಮೀ.ನಷ್ಟು ನೀರು ಏರಿಕೆಯಾಗಿದೆ.

ರೇಷನಿಂಗ್‌ ಸ್ಥಗಿತ ಅಥವಾ ಪರಿಷ್ಕರಣೆ ಬಗ್ಗೆ ಗುರುವಾರ ಜಿಲ್ಲಾಡಳಿತದ ಜತೆಗೆ ಪಾಲಿಕೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ನೀರಿನ ಪ್ರಮಾಣ ಏರಿಕೆ ಮತ್ತು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೇಷನಿಂಗ್‌ ನಿಯಮ ಕೈಬಿಡುವ ಸಾಧ್ಯತೆ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next