ಭಟ್ಕಳ: ಒಂದೆಡೆ ನೀರಿಗೆ ಹಾಹಾಕಾರ, ಇನ್ನೊಂದೆಡೆ ನೀರಿದ್ದರೂ ಉಪಯೋಗಿಸಲಾಗದ ಪರಿಸ್ಥಿತಿ ಇದು ಜಾಲಿ ಕೋಡಿ ನಾಗರಿಕರು ನಿತ್ಯ ಅನುಭವಿಸುವ ಮಾನಸಿಕ ಕಿರಿಕಿರಿ. ಇದಕ್ಕೆ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತವನ್ನೇ ಹೊಣೆಯನ್ನಾಗಿಸುವ ನಾಗರಿಕರು ನದಿಗೆ ಕೆಲವೇ ಕೆಲವು ಜನರು ಹೊಲಸು ನೀರನ್ನು ಬಿಟ್ಟು ಇರುವ ಬಾವಿಯ ನೀರನ್ನು ಉಪಯೋಗಿಸದಂತಾಗಿರುವುದು ನಮ್ಮ ದುರಂತ ಎನ್ನುತ್ತಾರೆ.
ಗ್ರಾಮದಲ್ಲಿ ಕೆಲವೇ ಕೆಲವು ಮನೆಯವರು ಶೌಚದ ನೀರನ್ನು ನದಿಗೆ ಬಿಡುತ್ತಿದ್ದಾರೆ. ಈ ಬಗ್ಗೆ ಊರಿನವರು ಎಚ್ಚರಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು ಈ ಕುರಿತು ತಾಲೂಕು ಆಡಳಿತಕ್ಕೆ, ಪ ಪಂಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈಗಾಗಲೇ ಎಲ್ಲ ಕಡೆ ನೀರು ಒಣಗಿದ್ದು ನದಿಯ ಹೊಲಸು ನೀರು ಬಾವಿಗೆ ಬರುತ್ತಿದೆ. ಇದರಿಂದ ಇದ್ದ ಅಲ್ಪ ಸ್ವಲ್ಪ ನೀರನ್ನು ನಾವು ಉಪಯೋಗಿಸದಂತಾಗಿದೆ. ಈಗಾಗಲೇ ನದಿಗೆ ಅಳವಡಿಸಲಾಗಿದ್ದ ಹೊಲಸು ನೀರು ಬಿಡುವ ಪೈಪ್‌ಗ್ಳನ್ನು ಬಂದ್ ಮಾಡಿಸುವಂತೆ ಕೋರಿಕೊಂಡರೂ ವಾಸನೆ ಉಂಟು ಮಾಡಿದೆ. ಬಿರು ಬೇಸಿಗೆಯಾದ್ದರಿಂದ ರೋಗ ಹರಡುವ ಭೀತಿ ಕಾಡುತ್ತಿದ್ದು ತಕ್ಷಣ ಕ್ರಮ ಕೈಗೊಂಡು ಹೊಲಸು ನೀರು ಬಿಡುವುದನ್ನು ಶಾಶ್ವತವಾಗಿ ಬಂದ್ ಮಾಡಿಸದೇ ಇದ್ದಲ್ಲಿ ತೀವ್ರ ಪರಿಣಾಮ ಬೀರಲಿದೆ ಎನ್ನುವುದು ನಾಗರೀರ ಆಗ್ರಹವಾಗಿದೆ. ತಕ್ಷಣ ಈ ಕುರಿತು ತಾಲೂಕು ಆಡಳಿತ ಹಾಗೂ ಪಪಂ ಪರಿಶೀಲನೆ ನಡೆಸಿ ನದಿಗೆ ಶೌಚಾಲಯದ ನೀರು ಬಿಡುವ ಮನೆಗಳಿಗೆ ಪ್ರತ್ಯೇಕ ನೋಟಿಸ್ ನೀಡಿ ಶೌಚಗುಂಡಿಗಳನ್ನು ಮಾಡಿಸಿಕೊಳ್ಳಲು ತಿಳಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೇ ಮುಂದಾಗಿ ಕ್ರಮ ಕೈಗೊಳ್ಳಲು ಹೋದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.
ತಕ್ಷಣ ಸ್ಥಳೀಯಾಡಳಿತ ಹಾಗೂ ಪಟ್ಟಣ ಪಂಚಾಯತ್ ಕ್ರಮ ಕೈಗೊಂಡು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಊರಿನಲ್ಲಿ ರೋಗ ಹರಡುವ ಭೀತಿ ದೂರ ಮಾಡಬೇಕು ಎನ್ನುವುದು ಆಗ್ರಹವಾಗಿದೆ.
Advertisement
ಜಾಲಿ ಪಪಂ ವ್ಯಾಪ್ತಿಯ ಜಾಲಿ ಕೊಡಿಯ ಹೊಳೆಗೆ ಕೆಲವೇ ಕೆಲವು ಮನೆಯವರು ಶೌಚಾಲಯದ ನೀರು ಬಿಡುವುದರಿಂದ ನೀರಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಅಲ್ಲದೇ ಅಕ್ಕಪಕ್ಕದ ಬಾವಿಗಳೂ ಕಲುಷಿತ ನೀರು ಸೇರಿ ಉಪಯೋಗಕ್ಕೆ ಬಾರದಂತಾಗಿದೆ ಎನ್ನುವುದು ಗ್ರಾಮಸ್ಥರ ದೂರಾಗಿದೆ.
Related Articles
Advertisement