Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ಡ್ಯಾಂ ಗೆ ಹೋಗಿ ಹೊರಹರಿವು ಪ್ರಮಾಣ ಪರೀಕ್ಷೆ ಮಾಡಿ. ಈ ವಿಚಾರವಾಗಿ ನಾನು ಚಾಲೆಂಜ್ ಮಾಡುತ್ತೇನೆ. ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಸೆ.13 ರಿಂದ ನೀರು ಹರಿಸಲಾಗುತ್ತಿದೆ. ನಾವು ಈ ವಿಚಾರವಾಗಿ ಹೋರಾಟ ಮಾಡುತ್ತೇವೆ. ಹೇಮಾವತಿ ಡ್ಯಾಂ ನಲ್ಲಿ 12 ಟಿಎಂಸಿ ಇದೆ. ಹಾರಂಗಿ, ಕಬಿನಿ ಡ್ಯಾಂಗಳು ಬರಿದಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಕೊಡಬಾರದು. ಕುಡಿಯುವ ನೀರಿನ ಉದ್ದೇಶಕ್ಕೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದರು.
Related Articles
Advertisement
ಅದ್ದೂರಿ ಮೈಸೂರು ದಸರಾ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದ್ದೂರಿ, ಸರಳ ದಸರಾ ಚರ್ಚೆಯಲ್ಲಿ ನಾನಿಲ್ಲ. ಸಾಂಪ್ರದಾಯಕವಾಗಿ ದಸರಾ ಮಾಡಲಿ. ದಸರಾ ಮಾಡುವಾಗ ಒಂದಷ್ಟು ಹಣ ಖರ್ಚಾಗುತ್ತದೆ ಎಂದ ಮಾತ್ರಕ್ಕೆ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಮುರಿಯುವುದು ಬೇಡ. ದಸರಾ ಅಂದರೆ ಜಂಬೂಸವಾರಿ, ದೀಪಾಲಂಕಾರ, ಕ್ರೀಡೆ, ಗೋಷ್ಠಿ ಇರುತ್ತದೆ, ಇದಕ್ಕೆಲ್ಲ ಖರ್ಚು ಆಗಿಯೇ ಆಗುತ್ತದೆ. ಬರ ಎಂದು ಸಂಪ್ರದಾಯ ಮುರಿಯುವುದು ಬೇಡ ಎಂದರು.
ಸರ್ವ ಪಕ್ಷ ಸಭೆಗೆ ಪ್ರಧಾನಿ ಸಮಯ ಕೊಡುತ್ತಿಲ್ಲ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಒಬ್ಬ ಜನ ಪ್ರತಿನಿಧಿಗೆ ಸಾಮಾನ್ಯ ಜ್ಞಾನ ಇರಬೇಕು. ಮೋದಿ ಅಲ್ಲ. ಮನಮೋಹನ್ ಸಿಂಗ್ ಬಂದರೂ ಈ ವಿಚಾರದಲ್ಲಿ ಏನು ಮಾಡಲಾಗದು. ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ನಿರ್ಣಯವಾಗಬೇಕು. ಸಿದ್ದರಾಮಯ್ಯ ಅವರು ಮೋದಿ ಬದಲು ಸ್ಟಾಲಿನ್ ಅವರಿಗೆ ಕರೆ ಮಾಡಲಿ. ನೀರು ಬಿಡುವುದುದಕ್ಕೆ ಆಗಲ್ಲ ಎಂದು ಹೇಳಲಿ. ಇವರಿಗೆ ಲೋಕಸಭಾ ಚುನಾವಣೆ ಮುಖ್ಯವೇ ಅಥವಾ ರಾಜ್ಯದ ಜನರ ಹಿತಸಾಕ್ತಿ ಮುಖ್ಯವೇ ಎಂದು ಪ್ರಶ್ನಿಸಿದರು.
ಚೈತ್ರಾ ಕುಂದಾಪುರ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಸಂಸದ ಪ್ರತಾಪಸಿಂಹ, ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ. ಅವರ ವಿಚಾರವೂ ನನಗೆ ಗೊತ್ತಿಲ್ಲ. ಈ ಬಗ್ಗೆ ನನ್ನನ್ನ ಏನೂ ಕೇಳಬೇಡಿ ಎಂದು ಹೇಳಿದರು.