Advertisement

ಬೇಸಿಗೆಯಲ್ಲಿ ನೀರಿನ ತೊಂದರೆ ಆಗಲ್ಲ

04:50 PM Dec 20, 2018 | |

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಶುದ್ಧ ಕುಡಿಯುವ ನೀರು ಪೂರೈಸುವ 24+7 ಜಲಸಿರಿ…
ಯೋಜನೆ ಮೂರು ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ ತಿಳಿಸಿದ್ದಾರೆ.

Advertisement

ಬುಧವಾರ ಜಿಲ್ಲಾ ವರದಿಗಾರರ ಕೂಟ ದಿಂದ ಆಯೋಜಿಸಿದ್ದ ಮುಖಾಮುಖೀ… ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜನಹಳ್ಳಿ ಸಮೀಪದ ತುಂಗಭದ್ರಾ ನದಿಯಲ್ಲಿ 24+7 ಜಲಸಿರಿ…ಯೋಜನೆಯಡಿ ಬ್ಯಾರೇಜ್‌ ನಿರ್ಮಿಸಲಾಗುವುದು.

ನೀರು ಪೂರೈಕಾಗಿ ಹೊಸ ಮೇನ್‌ ಲೈನ್‌, ಓವರ್‌ ಹೆಡ್‌ ಟ್ಯಾಂಕ್‌ ಜತೆಗೆ ಸ್ಮಾರ್ಟ್‌ ಮೀಟರಿಂಗ್‌, ಹೊಸ ಎಕ್ಸ್‌ ಪ್ರಸ್‌ ವಿದ್ಯುತ್‌ ಮಾರ್ಗ ಒಳಗೊಂಡಂತೆ ಅಗತ್ಯ ವ್ಯವಸ್ಥೆ ಕ್ರಮವಹಿಸಲಾಗುವುದು ಎಂದರು. 

ದಾವಣಗೆರೆಯಲ್ಲಿ ಈಗ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜಲಸಿರಿ…ಯೋಜನೆ ಪ್ರಾರಂಭವಾದಲ್ಲಿ
ಪ್ರತಿ ದಿನವೂ ಶುದ್ಧ ಕುಡಿಯುವ ನೀರು ಪೂರೈಕೆ ಆಗಲಿದೆ. ಕುಂದುವಾಡ ಕೆರೆಯಲ್ಲಿ 1,600 ಎಂ.ಎಲ್‌.ಡಿ ಮತ್ತು ಟಿವಿ ಸ್ಟೇಷನ್‌ ಕೆರೆಯಲ್ಲಿ 2,800 ಎಂ.ಎಲ್‌.ಡಿ. ನೀರಿದೆ.
 
ಹಾಗಾಗಿ ಮುಂದಿನ ಜೂನ್‌ವರೆಗೆ ಈಗಿನಂತೆ ನೀರು ಪೂರೈಸಬಹುದು. ಜೂನ್‌ ವೇಳೆಗೆ ಮಳೆಗಾಲ ಪ್ರಾರಂಭವಾಗುವುದರಿಂದ ನೀರಿನ ಸಮಸ್ಯೆ ಆಗುವುದಿಲ್ಲ. ಟಿವಿ ಸ್ಟೇಷನ್‌ ಕೆರೆಗೆ ಭದ್ರಾ ನಾಲೆಯಿಂದ ಅಧಿಕೃತವಾಗಿ
ನೀರು ತುಂಬಿಸಿಕೊಳ್ಳಲು ಪತ್ರ ಸಂಬಂಧಿತ ಇಲಾಖೆಗೆ ಪತ್ರ ಬರೆಯಲಾಗಿದೆ. ನೀರು ಪೋಲು ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾತ್ರಿ 11ರ ನಂತರ ಬೆಳಗ್ಗೆ 5 ಗಂಟೆ ಒಳಗೆ ನೀರು ಬಿಡದಂತೆ ಸೂಚಿಸಲಾಗುವುದು. ಅನಿವಾರ್ಯ ಸಂದರ್ಭ ಹೊರತುಪಡಿಸಿ ರಾತ್ರಿ ವೇಳೆ ನೀರು ಬಿಡುವಂತಹ ವಾಲ್‌ಮ್ಯಾನ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪಾಲಿಕೆಯಲ್ಲಿ ಹಿಂದೆ 90 ಟನ್‌ ಕಸ ಸಂಗ್ರಹವಾಗುತ್ತಿತ್ತು. ಈಗ 160 ಟನ್‌ ಸಂಗ್ರಹವಾಗುತ್ತಿದೆ. ಈವರೆಗೆ ಕೆಲ ವಾರು
ಕಾರಣದಿಂದ ಕಸ ವಿಂಗಡಣೆ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಕಸ ವಿಂಗಡಣೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಖಾಲಿ ಜಾಗಗಳು.. ಕಸದ ತೊಟ್ಟಿಗಳಾಗುತ್ತಿವೆ ಎಂಬ ಸಾರ್ವಜನಿಕರ ದೂರು ಇದೆ. ಖಾಲಿ ಜಾಗದಲ್ಲಿನ ಕಸ ವಿಲೇವಾರಿಗೆ ಪ್ರತಿ ಚದುರ ಅಡಿಗೆ 1 ರೂಪಾಯಿಯಂತೆ ನಿರ್ವಹಣಾ ವೆಚ್ಚ ಸಂಗ್ರಹಕ್ಕೆ ಟೆಂಡರ್‌ ಆಹ್ವಾನಿಸಲಾಗಿದೆ. ಖಾಲಿ ಜಾಗದಲ್ಲಿ ಕಸ ಹಾಕದೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟಾರೆ 1,227 ಕಿಲೋ ಮೀಟರ್‌ ರಸ್ತೆ ಇದೆ. 800 ಕಿಲೋ ಮೀಟರ್‌ ಡಾಂಬರ್‌, 118 ಕಿಲೋ ಮೀಟರ್‌ ಕಾಂಕ್ರಿಟ್‌ ರಸ್ತೆಗಳಿವೆ. 200 ಕಿಲೋ ಮೀಟರ್‌ ರಸ್ತೆಯನ್ನು ಹೊಸದಾಗಿ ಮಾಡಬೇಕಾಗಿದೆ. ಕೆಲವು ಕಡೆ ಭೂಗತ ವಿದ್ಯುತ್‌ ಮಾರ್ಗಕ್ಕಾಗಿ ರಸ್ತೆ ಅಗೆತ, ಪೇವರ್‌ ತೆಗೆದು ಹಾಕಿರುವ ಬಗ್ಗೆಯೂ ಗಮನ ನೀಡಲಾಗಿದೆ. ನೂತನ
ಕಾಲೇಜು ರಸ್ತೆ, ಮಂಡಕ್ಕಿ ಭಟ್ಟಿ, ಹಳೆ ಭಾಗದಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
 
ಒಳ ಚರಂಡಿ ಲೈನ್‌ನಲ್ಲಿ ಮಳೆ ನೀರು ಸಹ ಸೇರಿಕೊಳ್ಳುವುದರಿಂದ ಅಗ್ನಿಶಾಮಕ ಕಚೇರಿ ಒಳಗೊಂಡಂತೆ 60 ಜಾಗದಲ್ಲಿ ಸಮಸ್ಯೆ ಆಗುವುದನ್ನ ಗುರುತಿಸಲಾಗಿದೆ. ಇಂಟರ್‌ ಲಾಕಿಂಗ್‌ ವ್ಯವಸ್ಥೆ ಮಾಡಲಾಗುವುದು. ಆವರಗೆರೆ ಮತ್ತು ದೊಡ್ಡಬೂದಿಹಾಳ್‌ ಬಳಿ ಕ್ರಮವಾಗಿ 40 ಮತ್ತು 45 ಎಂಎಲ್‌ಡಿ ಎಸ್‌ಟಿಪಿ ಪ್ಲಾಂಟ್‌ ನಿರ್ಮಿಸಲಾಗಿದೆ.

ಹೊಸ ಭಾಗದಲ್ಲಿ ರಾಜಾಕಾಲುವೆ ಒತ್ತುವರಿ ಇತರೆ ಕಾರಣದಿಂದ ಸಣ್ಣ ಮಳೆಗೆ ನೀರು ನಿಲ್ಲುವ ಸಮಸ್ಯೆ ಇದೆ. ಅಂತಹ 18 ಜಾಗ ಗುರುತಿಸಿ, ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಅಧಿಕೃತ ಕಟ್ಟಡಗಳಿಗೆ ಡೋರ್‌ ನಂಬರ್‌ ನೀಡಲಾಗಿದೆ. 1975ಕ್ಕಿಂತಕಲೂ ಹಿಂದಿನ ಅನಧಿಕೃತ ಕಟ್ಟಡಗಳನ್ನು ಅಧಿಕೃತ ಮಾಡಲಿಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ರಸ್ತೆ ಒತ್ತುವರಿ, ಚರಂಡಿ ಮೇಲೆ ಅಕ್ರಮವಾಗಿ ಕಟ್ಟಿರುವಂತಹ ಕಟ್ಟಡಗಳಿಗೆ ಏನೂ ಮಾಡಲಿಕ್ಕೆ ಬರುವುದೇ ಇಲ್ಲ. ಕಾನೂನು ಅನ್ವಯ ನಿರ್ಮಾಣ ಮಾಡದ 2 ಕಟ್ಟಡಗಳನ್ನ ತೆರವು ಮಾಡಲಿಕ್ಕೆ ಮುಂದಾಗಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿದೆ. ಅಕ್ರಮ ಕಟ್ಟಡಗಳಿಗೆ ಕಂಪ್ಲೀಷನ್‌ ಸರ್ಟಿಫಿಕೇಟ್‌ ನೀಡುವುದೇ ಇಲ್ಲ. ಫುಟ್‌ಪಾತ್‌, ನಗರಪಾಲಿಕೆ ಜಾಗ ಒತ್ತುವರಿ ವಿರುದ್ಧವೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ನಗರಪಾಲಿಕೆ ವ್ಯಾಪ್ತಿಯಲ್ಲಿನ 758 ಮಳಿಗೆಗಳಲ್ಲಿ 700 ಬಾಡಿಗೆ ನೀಡಲಾಗಿದೆ.

ಇನ್ನುಳಿದವುಗಳಲ್ಲಿ ಸಣ್ಣ ಪುಟ್ಟ ದುರಸ್ತಿ ಇರುವ ಕಾರಣಕ್ಕೆ ಬಾಡಿಗೆ ನೀಡಲಾಗಿಲ್ಲ. ಮಳಿಗೆಗಳನ್ನು ಸಬ್‌ ಲೀಸ್‌ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ದಾವಣಗೆರೆಯಲ್ಲಿ ಮಾಲ್‌ಗ‌ಳು ತಲೆ ಎತ್ತುತ್ತಿರುವ ಹಿನ್ನೆಲೆಯಲ್ಲಿ ಸೂಪರ್‌ ಮಾರ್ಕೆಟ್‌… ಮಾದರಿ ಒಂದೇ ತೆರನಾದ ಟ್ರೇಡ್‌ ಲೈಸೆನ್ಸ್‌ ನೀಡಲಾಗುವುದು. ಹೋರ್ಡಿಂಗ್‌ಗಳಿಂದ 53 ಲಕ್ಷ ಬಾಕಿ ಇತ್ತು 3 ತಿಂಗಳಲ್ಲಿ 21 ಲಕ್ಷ ವಸೂಲು ಮಾಡಲಾಗಿದೆ. ಜಕಾತಿ ವಸೂಲಾತಿಯಲ್ಲಿ
ದೌರ್ಜನ್ಯ ಎಸಗುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌, ಹಿರಿಯ ಉಪಾಧ್ಯಕ್ಷ ಎನ್‌. ಆರ್‌. ನಟರಾಜ್‌, ಪ್ರಧಾನ ಕಾರ್ಯದರ್ಶಿ ನಾಗರಾಜ್‌ ಎಸ್‌. ಬಡದಾಳ್‌, ಖಜಾಂಚಿ ಎ.ಎಲ್‌. ತಾರಾನಾಥ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next