ಚಳ್ಳಕೆರೆ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬತ್ತಿ ಹೋಗಿದ್ದ ಕೊಳವೆಬಾವಿಗಳಿಗೆ ಜೀವ ಕಳೆ ಬಂದಿದೆ. ತಳಕು ಹೋಬಳಿಯ ತಿಮ್ಮನಹಳ್ಳಿ, ಗೌರಸಮುದ್ರ, ಹನುಮಂತನಹಳ್ಳಿ ಮೊದಲಾದ ಕಡೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಿಗದೆ ಜನರು ಕಂಗಾಲಾಗಿದ್ದರು. ಈಗ ಉತ್ತಮ ಮಳೆಯ ಹಿನ್ನೆಲೆಯಲ್ಲಿ ನೀರು ಕಾಣದಂತಹ ಕೊಳವೆಬಾವಿಗಳಲ್ಲಿ ಸಹ ನೀರು ಕೇಸಿಂಗ್ ಪೈಪ್ ಮೂಲಕ ಉಕ್ಕಿ ಬರುತ್ತಿದೆ. ತಾಪಂ ಸದಸ್ಯ ಈ. ರಾಮರೆಡ್ಡಿ ಈ ಬಗ್ಗೆ ಮಾಹಿತಿ ನೀಡಿ, ಮಳೆ ಹಿನ್ನೆಲೆಯಲ್ಲಿ ಈ ಭಾಗದ ಬಹುತೇಕ ಕೊಳವೆಬಾವಿಗಳು ರೀಚಾರ್ಜ್ ಆಗಿವೆ. ಬಹಳ ವರ್ಷಗಳ ನಂತರ ಗ್ರಾಮೀಣ
ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.