ಬನಹಟ್ಟಿ: ಬೇಸಿಗೆಯಿಂದ ತತ್ತರಿಸಿದ್ದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗೆ ಶುಕ್ರದೆಸೆ ಫಲ ದೊರಕಿದೆ.
ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಭಾಕರ ಕೋರೆ, ಮಹಾಂತೇಶ ಕವಟಗಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಪಿ. ರಾಜೀವ್, ಶಶಿಕಲಾ ಜೊಲ್ಲೆ, ರಾಜು ಕಾಗೆ, ಅನ್ನಾಸಾಹೇಬ ಜೊಲ್ಲೆ ಇದ್ದರು.
Advertisement
ಶುಕ್ರವಾರ ರಾತ್ರಿ 9ಗಂಟೆ ಸುಮಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ನಿವಾಸಕ್ಕೆ ತೆರಳಿದ ರಾಜ್ಯದ ಉತ್ತರ ಕರ್ನಾಟಕದ ಬಿಜೆಪಿ ನಾಯಕರ ನಿಯೋಗಕ್ಕೆ ಸ್ಪಂದಿಸಿದ ಸಿಎಂ ಫಡ್ನವೀಸ್, ಕೃಷ್ಣೆಗೆ ನೀರು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಜತೆಗೆ ಇಂದಿನಿಂದಲೇ ಕೊಯ್ನಾ ಜಲಾಶಯದಿಂದ 2 ರಿಂದ 3 ಟಿಎಂಸಿ ಅಡಿ ನೀರನ್ನು ಹರಿಸುವುದಾಗಿ ತಿಳಿಸಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಮುಂಬೈದಿಂದ ದೂರವಾಣಿ ಮೂಲಕ ಉದಯವಾಣಿಗೆ ತಿಳಿಸಿದ್ದಾರೆ.