Advertisement

ಮುಖ್ಯ ನಾಲೆಗೆ ಇಂದಿನಿಂದ ನೀರು

05:01 PM May 14, 2019 | Suhan S |

ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆ ವಿಜಯಪುರ ಮುಖ್ಯ ಕಾಲುವೆಯಿಂದ ಬುಧವಾರದಿಂದ ನೀರು ಹರಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ. ನೀರಿನ ತೀವ್ರ ಅಭಾವ ಇರುದರಿಂದಾಗಿ ವಾರಾಬಂದಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ ನೀರು ಹರಿಸಲಾಗುತ್ತಿದೆ. ಹೀಗಾಗಿ ರೈತರು ಸಹಕರಿಸಬೇಕು ಎಂದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Advertisement

ಚಿಂಚೋಳಿ ಉಪ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ವಿಜಯಪುರ ಮುಖ್ಯ ಕಾಲುವೆಗೆ ನೀರು ಹರಿಸಲು ವಿನಂತಿಸಿ, ವಿವಿಧ ಗ್ರಾಮಗಳ ರೈತರ ಮನವಿಗೆ ಪ್ರತಿಕ್ರಿಯಿಸಿ ಮಾತನಾಡಿದರು.

ವಿಜಯಪುರ ಮುಖ್ಯ ಕಾಲುವೆಯ ಕೂಡಗಿ ಹತ್ತಿರದ ರೈಲ್ವೆ ಲೈನ್‌ ಪಾಸಿಂಗ್‌ ಕಾಮಗಾರಿ ತಾಂತ್ರಿಕ ತೊಂದರೆಯಿಂದ ವಿಳಂಬದಿಂದ ಸಾಗಿದೆ. ಈಗಾಗಲೇ ಗುತ್ತಿಗೆ ಅವಧಿ 18 ತಿಂಗಳು ಪೂರ್ಣಗೊಂಡು, ವಿಸ್ತರಣೆಯ 6 ತಿಂಗಳು ಹೆಚ್ಚವರಿ ಅವಧಿ ಮುಗಿದಿದ್ದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಚಲಿಸುವ ರೈಲ್ವೆ ಲೈನ್‌ಗಳ ಕೆಳ ಭಾಗದಲ್ಲಿಯೇ ಬೃಹತ್‌ ಕಾಮಗಾರಿ ನಡೆಯುತ್ತಿರುವದು ವಿಳಂಬಕ್ಕೆ ಪ್ರಮುಖ ಕಾರಣ. ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಇಲಾಖೆಯವರು ಒಪ್ಪ್ಪುತ್ತಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ತಾತ್ಕಾಲಿಕ ಪುಸ್ಸಿಂಗ್‌ ಕಾಮಗಾರಿ ಮೂಲಕ ನೀರು ಹರಿಸಲು ಸೂಚಿಸಲಾಗಿದ್ದು, ಇದಕ್ಕಾಗಿ 60 ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.

93 ಕ್ಯೂಮೆಕ್ಸ್‌ ನೀರು ಹರಿಸುವ ಸಾಮರ್ಥಯ ಹೊಂದಿರುವ ವಿಜಯಪುರ ಮುಖ್ಯ ಕಾಲುವೆಯಲ್ಲಿ ತಾತ್ಕಾಲಿಕ ಪೈಪ್‌ ಪುಸ್ಸಿಂಗ್‌ನಿಂದ 22 ಕ್ಯೂಮೆಕ್ಸ್‌ ನೀರು ಮಾತ್ರ ಹರಿಯಲಿದ್ದು, ವಿಜಯಪುರ ಮುಖ್ಯ ಕಾಲುವೆಯಲ್ಲಿ 136 ಕಿ.ಮೀ. ಜಾಲವಾದವರೆಗೆ ನೀರು ಹರಿಸಸಲಾಗುತ್ತದೆ. ಅಲ್ಲಿಂದ ಕಗ್ಗೋಡ, ಕುಮಟಗಿ, ಪಡಗಾನೂರ, ದೇವರಹಿಪ್ಪರಗಿ, ಮಣೂರ, ಮಾರ್ಕಬ್ಬಿನಹಳ್ಳಿ, ಬೊಮ್ಮನಜೋಗಿ ಕೆರೆಗಳನ್ನು ತುಂಬಿಸಲಾಗುತ್ತದೆ. ಹೂವಿನಹಿಪ್ಪರಗಿ ಶಾಖಾ ಕಾಲುವೆಯಿಂದ 40 ಕಿ.ಮೀ.ವರೆಗೆ ನೀರು ಹರಿಸಿ ನಾಗವಾಡ, ಮಣೂರ, ಮುಕರ್ತಿಹಾಳ, ಅಲಕೊಪ್ಪರ, ರೂಡಗಿ ಕೆರೆಗಳನ್ನು ತುಂಬಿಸಲಾಗುತ್ತದೆ.

Advertisement

ಅಲ್ಲಿಂದ ಮುಂದೆ ಬಸವನಬಾಗೇವಾಡಿ ಶಾಖಾ ಕಾಲುವೆಯಿಂದ 40 ಕಿ.ಮೀ. ನೀರು ಹರಿಸಿ ಡೋಣುರ, ಬಿಸನಾಳ, ರೆಬಿನಾಳ, ಸಾತಿಹಾಳ ಕೆರೆಗಳನ್ನುತುಂಬಲಾಗುತ್ತದೆ. ಇದಾದ ಬಳಿಕ ತಿಡಗುಂದಿ ಶಾಖಾ ಕಾಲುವೆಗೆ 2.7 ಕಿ.ಮೀ.ವರೆಗೆ ನೀರು ಹರಿಸಿ, ಮದಭಾವಿ, ನಾಗಠಾಣ ಕೆರೆಗಳನ್ನು ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ತುಂಬಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಕೆಲವು ಕೆರೆಗಳ ಮೇಲೆ ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆಗಳು ಅವಲಂಬಿತವಾಗಿದ್ದು, ಆ ಎಲ್ಲ ಯೋಜನೆಗಳಿಗೆ ವಿಜಯಪುರ ಮುಖ್ಯ ಕಾಲುವೆಗಳಿಂದ ನೀರು ಹರಿಸುವದರಿಂದ ಅನುಕೂಲವಾಗಲಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next