Advertisement

15 ಗೇಟ್‌ಗಳಿಂದ ನೀರು ನದಿ ಪಾತ್ರಕ್ಕೆ

01:15 PM Sep 22, 2017 | |

ಆಲಮಟ್ಟಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯದಿಂದ ಗುರುವಾರ ಮುಂಜಾಗ್ರತಾ ಕ್ರಮವಾಗಿ 15 ಗೇಟುಗಳ ಮೂಲಕ 45,045 ಕ್ಯೂಸೆಕ್‌ ಹಾಗೂ ಜಲಾಶಯದ ಬಲದಂಡೆಯಲ್ಲಿರುವ ಜಲವಿದ್ಯುದಾಗಾರದಿಂದ 45ಸಾವಿರ ಕ್ಯೂಸೆಕ್‌ ನೀರನ್ನು ನದಿಪಾತ್ರಕ್ಕೆ ಬಿಡಲಾಗುತ್ತಿದೆ.

Advertisement

ಮಹಾರಾಷ್ಟ್ರದ ಮಹಾಬಲೇಶ್ವರ ಸೇರಿದಂತೆ ವಿವಿಧ ಕಡೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವ ಪರಿಣಾಮ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಕೊಯ್ನಾ ಜಲಾಶಯದಿಂದ
20,864 ಕ್ಯೂಸೆಕ್‌ ನೀರನ್ನು ನದಿಪಾತ್ರಕ್ಕೆ ಬಿಡುತ್ತಿದ್ದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಧ್ಯಭಾಗದಲ್ಲಿ ನಿರ್ಮಿಸಿರುವ ರಾಜಾಪುರ ಬ್ಯಾರೇಜಿಗೆ ವಿವಿಧ ಮೂಲಗಳಿಂದ ಸಂಗ್ರಹವಾಗಿ ಅಲ್ಲಿಂದ 79,470 ಕ್ಯೂಸೆಕ್‌ ನೀರು ರಾಜ್ಯಕ್ಕೆ ಹರಿದುಬರುತ್ತಿದೆ.

ಗುರುವಾರ ಬೆಳಗ್ಗೆ 10:25 ಗಂಟೆಯಿಂದ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಅಳವಡಿಸಲಾಗಿರುವ 26 ಗೇಟುಗಳ ಪೈಕಿ 5, 6, 7, 8, 9, 10, 14, 15, 16, 17, 18, 19, 20, 21, 22ನೇ ಗೇಟುಗಳನ್ನು 0.60ಮೀ. ಮೇಲೆತ್ತಿ ನದಿಪಾತ್ರಕ್ಕೆ ನೀರು ಹರಿಸಲಾಗುತ್ತಿದೆ. ಇನ್ನು 1ರಿಂದ4, 11ರಿಂದ13 ಹಾಗೂ 23ರಿಂದ 26ಗೇಟುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

ವಿದ್ಯುತ್‌ ಉತ್ಪಾದನೆ: ಕರ್ನಾಟಕ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿರುವ 55 ಮೆಗಾವ್ಯಾಟ್‌ನ 5ಘಟಕ ಹಾಗೂ 15 ಮೆಗಾವ್ಯಾಟ್‌ನ 1ಘಟಕ ಸೇರಿ ಒಟ್ಟು 290 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಘಟಕದಲ್ಲಿ ಗುರುವಾರ 270 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.

ಜಲವಿದ್ಯುದಾಗಾರವನ್ನು ಈ ವರ್ಷ ಜೂನ್‌ 16ರಿಂದಲೇ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದರೂ ಜುಲೆ„ 19ರಿಂದ ಆರಂಭಿಸಿ 300 ಮಿಲಿಯನ್‌ ವಿದ್ಯುತ್‌ ಉತ್ಪಾದನೆ ಮಾಡಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ 170ಮಿಲಿಯನ್‌ ಯುನಿಟ್‌ ಉತ್ಪಾದಿಸಲಾಗಿದೆ ಎನ್ನುತ್ತಾರೆ ಕೆಪಿಸಿಎಲ್‌ ಕಾರ್ಯನಿರ್ವಾಹಕ ಅಭಿಯಂತರ ಬಿಸ್ಲಾಪುರ.

Advertisement

ಕೃಷ್ಣಾ ನದಿಗೆ ಮಹಾರಾಷ್ಟ್ರದಲ್ಲಿ 105ಟಿಎಂಸಿ ಸಂಗ್ರಹದ ಕೋಯ್ನಾ ಜಲಾಶಯ, 12ಟಿಎಂಸಿ ಸಂಗ್ರಹಮಟ್ಟದ ಧೂಮ ಜಲಾಶಯ, 10ಟಿಎಂಸಿ ಸಂಗ್ರಹದ ಕನ್ಹೆàರ್‌, 34ಟಿಎಂಸಿ ಸಂಗ್ರಹದ ವಾರಣಾ, 8.23ಟಿಎಂಸಿ ಅಡಿಯ ರಾಧಾನಗರಿ ಜಲಾಶಯ, 26ಟಿಎಂಸಿ ಅಡಿಯ ದೂಧಗಂಗಾ ಜಲಾಶಯ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಧ್ಯಭಾಗದಲ್ಲಿ ರಾಜಾಪುರ ಬ್ಯಾರೇಜು, ರಾಜ್ಯದಲ್ಲಿ 10ಟಿಎಂಸಿ ಸಂಗ್ರಹದ ಹಿಪ್ಪರಗಿ, 123.081ಟಿಎಂಸಿಸಿ ಅಡಿಯ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಸಾಗರ ಹಾಗೂ 40ಟಿಎಎಂಸಿಯ ನಾರಾಯಣಪುರದ ಬಸವಸಾಗರ ಜಲಾಶಯ ನಿರ್ಮಿಸಲಾಗಿದೆ. 

ಕೃಷ್ಣಾ ನದಿಯು ಆಂಧ್ರಪ್ರದೇಶ ಸೇರುವ ಮುನ್ನ, ಭೀಮಾ, ಘಟಪ್ರಭಾ, ಮಲಪ್ರಭಾ, ಡೋಣಿ, ತುಂಗಾ ನದಿಗಳು ಸೇರಿದ ನಂತರ ಆಂಧ್ರಪ್ರದೇಶ ಸೇರುತ್ತವೆ. ಅಲ್ಲಿಯೂ ಜುರಾಲಾ, ನಾಗಾರ್ಜುನ ಸಾಗರ, ಶ್ರೀಶೈಲಂ ಜಲಾಶಯ ಸೇರಿದಂತೆ ಕೆಲವು ಜಲಾಶಯ ಹಾಗೂ ಬ್ಯಾರೇಜುಗಳಲ್ಲಿ ನೀರಿನ ಸಂಗ್ರಹವಾಗಿ ಸಮುದ್ರ ಸೇರುತ್ತವೆ. 519.600 ಮೀಟದ ಎತ್ತರದ ಜಲಾಶಯವು ಗರಿಷ್ಠ 123.081ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ ಜಲಾಶಯಕ್ಕೆ 90ಸಾವಿರ ಕ್ಯೂಸೆಕ್‌ ನೀರು ಒಳಹರಿವಿನಿಂದ 519.60ಮೀ. ಎತ್ತರದಲ್ಲಿ 123.081ಟಿಎಮ್‌ಸಿ ಅಡಿ ನೀರು ಸಂಗ್ರಹವಾಗಿರುವುದರಿಂದ ಅದರಲ್ಲಿ 17.650ಟಿಎಮ್‌ಸಿ ಜಲಚರಗಳಿಗಾಗಿ ಮೀಸಲಿರಿಸಿದರೆ 105.431ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯಗಳಿಂದ ಸುಮಾರು 6.5ಲಕ್ಷ ಹೆಕ್ಟೇರ್‌ ಜಮೀನು ನೀರಾವರಿಗೊಳಪಡಲಿದೆ. 

ಕೂಡಗಿ ವಿದ್ಯುತ್‌ಗೂ ನೀರು: ಕೂಡಗಿಯಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಉಷ್ಣವಿದ್ಯುತ್‌ ಸ್ಥಾವರಕ್ಕೆ ಆಲಮಟ್ಟಿ ಪಾರ್ವತಿಕಟ್ಟೆ ಸೇತುವೆ ಹತ್ತಿರದಿಂದ 18ಕಿ. ಮೀ ಅಂತರದ ಕೂಡಗಿಗೆ ಕೊಳವೆ ಮಾರ್ಗವಾಗಿ ಪ್ರತಿ ದಿನ 20ಕ್ಯೂಸೆಕ್‌ ನೀರು ಹಾಗೂ ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ವಾರಾಬಂದಿ ಪದ್ದತಿಯಂತೆ ಸುಮಾರು 943ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. 

ಕೆರೆ ಹಾಗೂ ಬಾಂದಾರ: 60ಕ್ಯೂಸೆಕ್‌ ನೀರನ್ನು ಜಿಲ್ಲೆಯ 16 ಕೆರೆ, 5 ಬಾಂದಾರ ಮತ್ತು ಬಾಗಲಕೋಟೆ ಜಿಲ್ಲೆಯ 7ಕೆರೆಗಳ ತುಂಬುವ ಯೋಜನೆ ಹಾಗೂ ಮಮದಾಪುರ, ಸಾರವಾಡ, ಬಬಲೇಶ್ವರ, ಬೇಗಂತಲಾಬ, ಭೂತನಾಳ, ತಿಡಗುಂದಿ, ತಿಕೋಟಾ ಮತ್ತು ಇತರೆ 10ಕೆರೆಗಳನ್ನು ತುಂಬಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next