Advertisement

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

11:52 PM Sep 18, 2021 | Team Udayavani |

ಹೊಸದಿಲ್ಲಿ: “ವಸುದೈವ ಕುಟುಂಬಕಂ’ ಪರಿಕಲ್ಪನೆಯಲ್ಲಿ ಜಗತ್ತಿನ 115 ರಾಷ್ಟ್ರಗಳ ನದಿಯ ನೀರನ್ನು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಪ್ರಕಟಿಸಿದ್ದಾರೆ.

Advertisement

7 ಖಂಡಗಳ 115 ರಾಷ್ಟ್ರಗಳ ನದಿ, ಸರೋವರ, ಸಮುದ್ರಗಳ ಜಲಸಂಗ್ರಹವನ್ನು ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ ವಿವಿಧ ದೇಶಗಳ ರಾಯಭಾರಿಗಳ ಸಮ್ಮುಖದಲ್ಲಿ ಸಚಿವರು ಸ್ವೀಕರಿಸಿದರು. ಡೆನ್ಮಾರ್ಕ್‌, ಫಿಜಿ, ನೈಜೀರಿಯಾ ಸೇರಿದಂತೆ ಹಲವು ರಾಷ್ಟ್ರಗಳ ರಾಜತಾಂತ್ರಿಕ ಅಧಿಕಾರಿಗಳು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಈ ವೇಳೆ ಉಪಸ್ಥಿತರಿದ್ದರು. ದಿಲ್ಲಿಯ ಬಿಜೆಪಿ ಶಾಸಕ ವಿಜಯ್‌ ಜೊಲ್ಲಿ ನೇತೃತ್ವದಲ್ಲಿ “ಸ್ಟಡಿ ಸರ್ಕಲ್‌’ ಎಂಬ ಎನ್‌ಜಿಒ ಜಲ ಸಂಗ್ರಹಿಸುವ ಕಾರ್ಯ ನಡೆಸಿದೆ. “ಬಾಕಿ ಉಳಿದ 77 ರಾಷ್ಟ್ರಗಳ ನೀರನ್ನೂ ಎನ್‌ಜಿಒ ಸಂಗ್ರಹಿಸುತ್ತದೆಂಬ ವಿಶ್ವಾಸವಿದೆ. ಇದನ್ನು ನಾವು ರಾಮಲಲ್ಲಾನ ಜಲಾಭಿಷೇಕಕ್ಕೂ ಬಳಸಿಕೊಳ್ಳುತ್ತೇವೆ’ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next