ಮಲ್ಪೆ: ಕರಾವಳಿಯಲ್ಲಿ ಬಿಸಿಲಿನ ಬೇಗೆ ತೀವ್ರಗೊಳ್ಳುತ್ತಿದ್ದು, ಜಲಮೂಲಗಳು ಬರಿದಾಗಿವೆ. ಒಂದು ತಿಂಗಳಿನಿಂದ ಮಲ್ಪೆ ಮೀನುಗಾರಿಕೆ ಬಂದರಿಗೂ ನೀರಿನ ಬಿಸಿ ತಟ್ಟಿದ್ದು ಬೋಟ್ ಮಾಲಕರು ನೀರಿಗಾಗಿ ಪರದಾಡುತ್ತಿದ್ದಾರೆ.
ಮೀನುಗಾರಿಕೆಗೆ ತೆರಳುವ ಬೋಟುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗದೆ ಬೋಟ್ ಮಾಲಕರು ಒಂದೆರಡು ದಿನ ವಿಳಂಬವಾಗಿ ಮೀನುಗಾರಿಕೆಗೆ ತೆರಳುತ್ತಿದ್ದಾರೆ.
ಸಾಮಾನ್ಯವಾಗಿ 10-12 ದಿನಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಆಳ ಸಮುದ್ರ (ಸ್ಪೀಡ್) ಬೋಟ್‌ಗಳಿಗೆ ಸುಮಾರು 6,000 ಲೀಟರ್‌ನಷ್ಟು ನೀರು ಬೇಕಾಗುತ್ತದೆ. ಒಂದು ಬೋಟಿನಲ್ಲಿ ಸುಮಾರು 7 ಮಂದಿ ಮೀನುಗಾರರು ಇದ್ದು, ಕುಡಿಯಲು, ಅಡುಗೆ ಮತ್ತು ಸ್ನಾನಕ್ಕೆ ಸಾಕಾಗುತ್ತದೆ. ಇನ್ನು ಅದಕ್ಕಿಂತ ಸಣ್ಣ ಗಾತ್ರದ ಬೋಟುಗಳಿಗೆ 3ರಿಂದ 4ಸಾವಿರ ಲೀ. ನೀರು ಅಗತ್ಯವಿದೆ.
ಮೀನುಗಾರಿಕೆಗೆ ತೆರಳುವ ಮುನ್ನ ಸಂಬಂಧಪಟ್ಟ ಟ್ಯಾಂಕರ್‌ಗಳ ಮೂಲಕ ಖರೀದಿಸಿಟ್ಟುಕೊಳ್ಳುತ್ತಾರೆ.
ಟ್ಯಾಂಕರ್ ಮಾಲಕರು ಖಾಸಗಿಯವರಿಗೆ ಸೇರಿದ ತೆರೆದ ಬಾವಿ, ಬೋರ್‌ವೆàಲ್ ಮೂಲಕ ಬಾಡಿಗೆ ಆಧಾರದ ಮೇಲೆ ಪಡೆದು ಬೋಟ್‌ಗಳಿಗೆ ನೀರು ಪೂರೈಕೆ ಮಾಡುತ್ತಾರೆ. ಇದೀಗ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದರಿಂದ ಬಾವಿ, ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ಬರಿದಾಗಿವೆೆ.
ಬಾವಿಗಳಲ್ಲಿ ನೀರು ತೆಗೆಯುವುದಕ್ಕೆ ಊರವರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ, ಮನೆ ಯವರು ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ದುಪ್ಪಟ್ಟು ಹಣ ಕೊಟ್ಟು ಬೇರೆ ಬೇರೆ ಕಡೆಗಳಲ್ಲಿ ನೀರನ್ನು ತರಿಸಿಕೊಳ್ಳುವ ಅನಿವಾರ್ಯ ಮೀನುಗಾರರಿಗೆ ಎದುರಾಗಿದೆ.