Advertisement
ಒಂದೆಡೆ ಬರ, ಇನ್ನೊಂದೆಡೆ ಜಲ ಕ್ಷಾಮ ಈ ಎರಡರ ಮಧ್ಯೆ ಬಡ ಕೂಲಿಕಾರ್ಮಿಕ ಮಹಿಳೆಯರು ಕೂಲಿಗೆ ಹೋಗದಂತಾಗಿದೆ. ದಿನನಿತ್ಯ ನೀರಿಗಾಗಿ ಕಾಯುವುದೇ ಇವರ ಕಾಯಕವಾಗಿದೆ. ಬಹುತೇಕ ಬೋರ್‌ವೆಲ್‌ಗಳ ಮುಂದೆ ರಾಶಿ ರಾಶಿ ಬಿಂದಿಗೆ ಕಂಡು ಬರುತ್ತಿವೆ. ಆದರೆ ನಲ್ಲಿಗಳಲ್ಲಿ ಹನಿ ಹನಿ ಜಿನಗು ನೀರು ಮಾತ್ರ ಸಿಗುತ್ತದೆ.
Related Articles
Advertisement
ಬೇಸಿಗೆ ನಿಭಾಯಿಸಲು ಅಧಿಕಾರಿಗಳು ಸಜ್ಜು: ಆರಂಭವಾಗಿರುವ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ತಯಾರಿಸಿ ನೀರು ಸಿಗುವ ಕಡೆ ಬೋರ್‌ವೆಲ್ ಕೊರೆಯಿಸುವುದು, ಕೈಕೊಟ್ಟಿರುವ ಬೋರ್ ವೆಲ್‌ಗಳ ಪುನಶ್ಚೇತನಕ್ಕೆ ಕ್ರಿಯಾ ಯೋಜನೆಯನ್ನು ಟಾಸ್ಕ್ಫೋರ್ಸ್ ಸಮಿತಿಯ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೂಡಾ ಲಭ್ಯ ಅನುದಾನವನ್ನು ಬಳಸಿಕೊಂಡು ಮೋಟರ್ ಪಂಪ್‌ಗ್ಳ ರಿಪೇರಿ, ಪೈಪ್‌ಲೈನ್ ಸೇರಿದಂತೆ ಇತರೇ ಕುಡಿಯುವ ನೀರಿನ ನಿರ್ವಹಣೆಯನ್ನು ಸಮರೋಪಾದಿಯಲ್ಲಿ ಆರಂಭಿಸಿದೆ. ಮೇವಿನ ಕೊರತೆ : ಸದ್ಯ ಮೇವಿನ ಕೊರತೆ ಇಲ್ಲದಿದ್ದರೂ ಶೇಖರಿಸಿರುವ ಅಲ್ಪ ಸ್ವಲ್ಪ ಮೇವು ಖಾಲಿಯಾದ ಮೇಲೆ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದೆ. ರೈತ ಸಂಘಟನೆಗಳು ಅನೇಕ ಬಾರಿ ಜಗಳೂರು ತಾಲೂಕಿನಲ್ಲಿ ಗೋಶಾಲೆ ತೆರೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನನೆಗುದಿಗೆ ಬಿದ್ದ ಬಹುಗ್ರಾಮ ಯೋಜನೆ ನನೆಗುದಿಗೆ ಬಿದ್ದ ಬಹುಗ್ರಾಮ ಯೋಜನೆ 2008ರಲ್ಲಿ ಜಗಳೂರು ತಾಲೂಕಿಗೆ ಮಂಜೂರಾಗಿದ್ದ ರಾಜೀವ ಗಾಂಧಿ ಸಬ್ ಮಿಷನ್ ಯೋಜನೆ ಅನುಷ್ಠಾನವಾಗಿದ್ದರೆ ಜಲಕ್ಷಾಮ ತಲೆದೋರುತ್ತಿರಲಿಲ್ಲ. ಆದರೆ ದಶಕವೇ ಕಳೆದರೂ ಯೋಜನೆ ಅನುಷ್ಠಾನವಾಗಿಲ್ಲ. 157 ಹಳ್ಳಿಗಳಿಗೆ ನೀರು ಒದಗಿಸುವ ಬಹು ದೊಡ್ಡ ಯೋಜನೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬಿದ್ದಿದೆ. ವರ್ಷಗಳು ಉರುಳಿದಂತೆ ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆ ಬಹುಗ್ರಾಮ ಯೋಜನೆಯಾಗಿ ಮಾರ್ಪಟ್ಟಿತು. ಹಿಂದಿನ ಸಿಎಂ ಸಿದ್ದರಾಮಯ್ಯ ಬಹುಗ್ರಾಮ ಯೋಜನೆಗೆ ಮಂಜೂರಾತಿ ನೀಡಲಾಗುವುದು ಎಂದು ಇಲ್ಲಿ ಬಂದಾಗ ಭರವಸೆ ನೀಡಿದ್ದರೂ ಮುಂದೆ ಏನೂ ಆಗಲಿಲ್ಲ. ಜನಪ್ರತಿನಿಧಿ ಗಳು ಮಾತ್ರ ಈ ಯೋಜನೆ ಮಂಜೂರು ಮಾಡಿಸುವುದಾಗಿ ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವುದು ಮಾತ್ರ ನಿಂತಿಲ್ಲ ಹೋರಾಟಗಾರರ ವಿರುದ್ಧ ಜನರ ಬೇಸರ ಹೋರಾಟಗಾರರ ವಿರುದ್ಧ ಜನರ ಬೇಸರ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದರೆ ಜಗಳೂರು ತಾಲೂಕು ಚಿತ್ರದುರ್ಗ ಜಿಲ್ಲೆಗೆ ಸೇರಬೇಕೆಂದು ಒಂದು ಬಣ, ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲೂಕು ಉಳಿಯಲಿ ಎಂದು ಮತ್ತೂಂದು ಬಣ ಹೋರಾಟ ನಡೆಸುತ್ತಿದೆ. ಆದರೆ ಜನರಿಗೆ ಅತ್ಯವಶ್ಯವಾಗಿರುವ ಜೀವಜಲಕ್ಕಾಗಿ ಯಾರೂ ಹೋರಾಟ ನಡೆಸದಿರುವುದಕ್ಕೆ ಸಹಜವಾಗಿ ಇಲ್ಲಿನ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಜಗಳೂರು ತಾಲೂಕಿನಲ್ಲಿ 45 ಸಾವಿರ ಜಾನುವಾರುಗಳು ಇರುವ ಬಗ್ಗೆ ಅಂದಾಜಿಸಲಾಗಿದೆ. ಈ ಸದ್ಯ ಮೇವಿಗೆ ತೊಂದರೆ ಇಲ್ಲ. ಬಹುಶಃ ಏಪ್ರಿಲ್ ತಿಂಗಳಲ್ಲಿ ಮೇವಿನ ಕೊರೆತೆಯಾಗುವ ಸಾಧ್ಯತೆ ಇದೆ.
ರಂಗಪ್ಪ, ಪಶು ಸಹಾಯಕ ನಿರ್ದೇಶಕ ಜಗಳೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾಗಿರುವ 60 ಕ್ಕೂ ಹೆಚ್ಚು ಗ್ರಾಮಗಳ ಪೈಕಿ 27 ಗ್ರಾಮಗಳಲ್ಲಿ ಟ್ಯಾಂಕರ್
ಮೂಲಕ, 28 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇನ್ನೂ 44 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಎಲ್ಲಾ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.
ಜಾನಕಿರಾಮ್, ಇಒ, ತಾ.ಪಂ. ಜಗಳೂರು ಜಗಳೂರು ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಅಧಿಕಾರಿಗಳು ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ
ಕೈಗೊಳ್ಳಬೇಕು. ಈಗಾಗಲೇ ಮೇವಿನ ಕೊರತೆ ಎದುರಾಗಿದೆ. ಕೂಡಲೇ ಜಗಳೂರು ತಾಲೂಕಿನಲ್ಲಿ ಗೋಶಾಲೆ ತೆರೆಯಬೇಕು. ಬರ ನಿರ್ವಹಣೆ ಸಂಬಂಧ ಕಾಮಗಾರಿಗಳನ್ನು ಆರಂಭಿಸಿ ಗುಳೇ ಹೋಗುವುದನ್ನು ತಪ್ಪಿಸಬೇಕು.
ಪಟೇಲ್ ಮಾರಪ್ಪ, ಮುಖಂಡರು, ರೈತ ಸಂಘ. ಬಸವರಾಜ ಜಗಳೂರು