ದೇವರಹಿಪ್ಪರಗಿ: ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ ಯಾಳಗಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗಾಗಿ ಬಿ.ಎಸ್. ಪಾಟೀಲ ಯಾಳಗಿ ಅಭಿಮಾನಿಗಳ ಬಳಗ ಹಾಗೂ ಶಂಕರಗೌಡ ಪಾಟೀಲ ಯಾಳಗಿ ಆರೋಗ್ಯ ಟ್ರಸ್ಟ್ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅವರು ಮಾತನಾಡಿದರು.
ಬೇಸಿಗೆ ಬಿಸಿಲು ಮಿತಿ ಮೀರುತ್ತಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಸ್ವಲ್ಪ ಮಟ್ಟಿಗಾದರೂ ಕುಡಿಯುವ ನೀರಿನ ತೊಂದರೆ ನೀಗಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಗದ್ದಿಗೆ ಮಠದ ಮಡಿವಾಳೇಶ್ವರ ಸ್ವಾಮೀಜಿ ಮಾತನಾಡಿ, ಬಿ.ಎಸ್. ಪಾಟೀಲ ಯಾಳಗಿ ಜಿಲ್ಲೆಯ ಸಜ್ಜನ, ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಜನಸಮಾನ್ಯರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೃದಯರೋಗ ತಜ್ಞ ಡಾ| ಶಂಕರಗೌಡ ಪಾಟೀಲ ಯಾಳಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರಶೇಠ ಬೇಪಾರಿ, ಬಾಳಾಸಾಹೇಬಗೌಡ ಪಾಟೀಲ ಸಾತಿಹಾಳ, ಚೆನ್ನಾರೆಡ್ಡಿ, ಮುನೀರ ಬಿಜಾಪುರ, ಪ್ರಕಾಶ ಗುಡಿಮನಿ, ಪ್ರಕಾಶ ಮಲ್ಹಾರಿ, ಮುರ್ತುಜ ತಾಂಬೋಳಿ, ರಾಜು ಸಿಂದಗೇರಿ, ಗುರುರಾಜ ಆಕಳವಾಡಿ, ಪೀರು ಹಳ್ಳಿ, ಪರಶುರಾಮ ಬಡಿಗೇರ, ಸುರೇಶ ರಾಠೊಡ, ಯಮನಪ್ಪ ಬೂತಾಳಿ, ಶಿವಯೋಗಿ ಹೊಸಮನಿ, ಗಣೇಶ ಕಾಚಾಪುರ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.