Advertisement
ಹಣಕಾಸಿನ ತೊಂದರೆ ಇಲ್ಲಜಿಲ್ಲೆಯ 84 ಗ್ರಾ.ಪಂ.ಗಳ 126 ಗ್ರಾಮಗಳಿಗೆ 141 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡ ಲಾಗುತ್ತಿದೆ. ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಭಾಗಶಃ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ನೀರು ಪೂರೈಕೆಗೆ ಹಣಕಾಸಿನ ತೊಂದರೆ ಇಲ್ಲ. ತುರ್ತು ಕಾಮಗಾರಿಗಳಿಗಾಗಿ ಒಟ್ಟು 39 ಕೋ.ರೂ. ಇದೆ. ಟ್ಯಾಂಕರ್‌ಮೂಲಕ ನೀರು ಪೂರೈಕೆಗೂ ಇದನ್ನು ಬಳಸಬಹುದಾಗಿದೆ. ನೀರು ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿ ಹಾರ ರೂಪಿಸಲು ಕ್ರಮ ಕೈಗೊಳ್ಳ ಲಾಗುವುದು. ಜಲಮರು ಪೂರಣ, ಮಳೆಕೊೖಲು ಅನುಷ್ಠಾನಿಸುವ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲೆಯ 400 ಮದಗ, ತೋಡುಗಳ ಹೂಳೆತ್ತಲು ನಿರ್ಧರಿಸಲಾಗಿದೆ. ಖಾಸಗಿ ಬಾವಿ, ಬೋರ್‌ವೆಲ್ಗಳನ್ನೂ ಬಳಸಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ. ಚುನಾವಣೆಗೆ ಮೊದಲೇ ನೀರು ಸಮಸ್ಯೆ ಕುರಿತು ಸಭೆ ನಡೆಸಿ ಸೂಚನೆ ನೀಡಿದ್ದೆ. ನರೇಗಾ ಮೂಲಕವೂ ಹೂಳೆತ್ತಲು ಅವಕಾಶವಿದೆ. ಜಿಲ್ಲಾಧಿಕಾರಿ ಮತ್ತು ಸೇರಿದಂತೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಡಾ| ಜಯಮಾಲಾ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮೂಳೂರಿನಲ್ಲಿ ಚಿಕಿತ್ಸೆ ಪಡೆಯು ತ್ತಿರುವ ದೇವೇಗೌಡ ಅವರನ್ನು ಭೇಟಿ ಯಾಗಿಲ್ಲ. ಚುನಾವಣ ನೀತಿ ಸಂಹಿತೆ ಇದ್ದು, ಇಂದು ಕುಡಿಯುವ ನೀರಿನ ಸಮಸ್ಯೆ ಮತ್ತು ಮೀನುಗಾರರ ಪರಿಹಾರ ಕುರಿತು ಮಾತನಾಡಲು ಮಾತ್ರ ಆಯೋಗದಿಂದ ಅನುಮತಿ ಸಿಕ್ಕಿದೆ ಎಂದರು. ಸಿಎಂ ನೋವು ಅವರಿಗೇ ಗೊತ್ತು
ಸಿಎಂ ರೆಸಾರ್ಟ್ ಭೇಟಿ ಬಗ್ಗೆ ಆಕ್ಷೇಪ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಆರೋಗ್ಯ ವಿಚಾರ ವೈಯಕ್ತಿಕ. ಅವರ ನೋವು ಅವರಿಗೇ ಗೊತ್ತು. ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೂ ಸುಸ್ತಾಗುವುದಿಲ್ಲವೆ? ಎಂದು ಪ್ರತಿಕ್ರಿಯಿಸಿದರು.
Related Articles
Advertisement
ಮೀನುಗಾರರಿಗೆ 10 ಲ.ರೂ. ಪರಿಹಾರಸಮುದ್ರದಲ್ಲಿ ಮುಳುಗಿರುವ ಸುವರ್ಣ ತ್ರಿಭುಜ ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರ ಕುಟುಂಬದವರಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 6 ಲ.ರೂ. ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲ.ರೂ. ಸೇರಿದಂತೆ ಒಟ್ಟು ತಲಾ 10 ಲ.ರೂ. ಪರಿಹಾರ ನೀಡಲು ರಾಜ್ಯ ಸರಕಾರ ಆದೇಶಿಸಿದೆ. ಕೇಂದ್ರ ಸರಕಾರ ಕೂಡ ಗರಿಷ್ಠ ಪರಿಹಾರ ನೀಡಬೇಕು ಎಂದು ಶಿಫಾರಸು ಕಳುಹಿಸಲಾಗುವುದು ಎಂದು ಡಾ| ಜಯಮಾಲಾ ಅವರು ತಿಳಿಸಿದರು.