Advertisement

ಕೃಷ್ಣಾ ನದಿ ತೀರದಹಳ್ಳಿಗಳಿಗೆ ನೀರಿನ ಬರ

12:05 PM May 20, 2019 | pallavi |
ಚಿಕ್ಕೋಡಿ: ನೆತ್ತಿ ಸುಡುವ ಬಿಸಿಲು ಒಂದೆಡೆಯಾದರೆ, ಕೃಷ್ಣಾ ನದಿ ತೀರದಲ್ಲಿರುವ ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲೂಕಿನ ಹಳ್ಳಿಗಳು ಕುಡಿಯುವ ನೀರಿನ ಭೀಕರ ಪರಿಸ್ಥಿತಿ ಎದುರಿಸುತ್ತಿವೆ.

ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ 40ರಿಂದ 41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಸರ್ವೇ ಸಾಮಾನ್ಯವಾಗಿದೆ. ಚಿಕ್ಕೋಡಿ ತಾಲೂಕಿನ 32 ಗ್ರಾಮಗಳಾದ ಉಮರಾಣಿ, ಇಟನಾಳ, ಬಂಬಲವಾಡ, ಕುಂಗಟೊಳ್ಳಿ, ಬೆಣ್ಣಿಹಳ್ಳಿ, ನಾಗರಮುನ್ನೋಳ್ಳಿ, ಕರಗಾಂವ, ಕರೋಶಿ, ಬೆಳಕೂಡ, ನಾಯಿಂಗ್ಲಜ್‌, ಯಾದ್ಯಾನವಾಡಿ, ಇಂಗಳಿ, ನವಲಿಹಾಳ, ಕೇರೂರ ಗ್ರಾಮಗಳಲ್ಲಿ 33 ಟ್ಯಾಂಕರ ಮೂಲಕ 114 ಟ್ರಿಪ್‌ ನೀರು ಸರಬರಾಜು ಮಾಡುತ್ತಿದೆ. ಬೆಳಕೂಡ ಗೇಟ್ದಲ್ಲಿ ಒಂದು ಕಡೆ ಮೇವು ಬ್ಯಾಂಕ್‌ ಸ್ಥಾಪನೆ ಮಾಡಿ ಜಾನುವಾರಗಳಿಗೆ ಮೇವು ಪೂರೈಕೆಯನ್ನು ಮಾಡಲಾಗುತ್ತಿದೆ.

Advertisement

ಅಥಣಿಯಲ್ಲಿ ಮೇವಿನ ಸಮಸ್ಯೆ: ಅಥಣಿ ಪಟ್ಟಣದಿಂದ ಸುಮಾರು 20 ಕಿಮೀ ದೂರದಲ್ಲಿ ಹಿಪ್ಪರಗಿ ಅಣೆಕಟ್ಟು ಇದ್ದರೂ ನೀರು ಸಂಗ್ರಹವಿಲ್ಲ. ಕೃಷ್ಣಾ ನದಿ ಬತ್ತಿಹೋಗಿದ್ದರ ಪರಿಣಾಮ ಹಿಪ್ಪರಗಿ ಬ್ಯಾರೇಜ್‌ ಖಾಲಿಯಾಗಿದೆ. ಹೀಗಾಗಿ ಅಥಣಿ ತಾಲೂಕಿನ 61 ಗ್ರಾಮಗಳಲ್ಲಿ ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿ 118 ಟ್ಯಾಂಕರ್‌ಗಳ ಮೂಲಕ 428 ಟ್ರಿಪ್‌ ನೀರನ್ನು ಸರ್ಕಾರ ಪೂರೈಕೆ ಮಾಡುತ್ತಿದೆ. ಇನ್ನೂ ಅನಂತಪೂರ, ತೇಲಸಂಗ ಮತ್ತು ಅಥಣಿ ಹೋಬಳಿ ವ್ಯಾಪ್ತಿಯ 24 ಕಡೆಗಳಲ್ಲಿ ಮೇವು ಬ್ಯಾಂಕ ಸ್ಥಾಪನೆ ಮಾಡಿ ಜಾನುವಾರಗಳಿಗೆ ಮೇವು ವಿತರಣೆ ಮಾಡಲಾಗುತ್ತಿದೆ.

ಚಿಕ್ಕೋಡಿ ಉಪವಿಭಾಗದಲ್ಲಿ ಉಂಟಾಗಿರುವ ಬರಗಾಲ ನಿಯಂತ್ರಣ ಮಾಡಲು ಆಯಾ ತಾಲೂಕಾಡಳಿತ ಸತತ ಪ್ರಯತ್ನ ಮಾಡುತ್ತಿದ್ದು, ಯಾವುದೇ ಗ್ರಾಮದಲ್ಲಿ ನೀರು ಮತ್ತು ಮೇವಿನ ಸಮಸ್ಯೆ ಉಲ್ಬಣಿಸಿದರೇ ತಕ್ಷಣ ನಾಗರಿಕರು ಮಾಹಿತಿ ನೀಡಬೇಕು. 24 ಗಂಟೆಯೊಳಗೆ ಮೇವು-ನೀರು ಪೂರೈಕೆ ಮಾಡಬೇಕೆಂದು ಆಯಾ ತಹಶೀಲ್ದಾರರು, ತಾಪಂ ಇಒ ಮತ್ತು ಗ್ರಾ.ಕು.ನಿ. ಸರಬರಾಜು ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

• ಸೋಮಲಿಂಗ ಗೇಣ್ಣೂರ,ಉಪವಿಭಾಗಾಧಿಕಾರಿಗಳು ಚಿಕ್ಕೋಡಿ

ರಾಯಬಾಗ ಹೊರತಾಗಿಲ್ಲ: ಬರಗಾಲಕ್ಕೆ ರಾಯಬಾಗ ತಾಲೂಕು ಹೊರತಾಗಿಲ್ಲ. ತಾಲೂಕಿನ ಬ್ಯಾಕೂಡ, ಹುಬ್ಬರವಾಡಿ, ಮೇಖಳಿ, ಮಂಟೂರ, ಬೂದಿಹಾಳ, ದೇವಣಕಟ್ಟಿ, ಮಾವಿನಹೊಂಡ, ಬೆಂಡವಾಡ, ಕಟಕಬಾವಿ, ಬಸ್ತವಾಡ, ಜೋಡಟ್ಟಿ, ಬೇಕ್ಕೇರಿ ಹೀಗೆ 21 ಗ್ರಾಮಗಳಲ್ಲಿ 34 ಟ್ಯಾಂಕರ್‌ ಮೂಲಕ 136 ಟ್ರಿಪ್‌ಗ್ಳಲ್ಲಿ ಸರ್ಕಾರ ನೀರು ಕೊಡುತ್ತಿದೆ. ಇಲ್ಲಿ ಮೇವಿನ ಸಮಸ್ಯೆ ಹೆಚ್ಚಿರುವ ಕಾರಣ ಮೇವು ಬ್ಯಾಂಕ್‌ ಪ್ರಾರಂಭಿಸಬೇಕೆಂಬುದು ರೈತರ ಒತ್ತಾಯವಾಗಿದೆ.

Advertisement

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next