ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡ ತುಮಕೂರು ಕೆರೆಯ ನೀರು ಕಪ್ಪು ಬಣ್ಣಕ್ಕೆತಿರುಗಿದ್ದು, ಇದಕ್ಕೆ ರಾಸಾಯನಿಕಯುಕ್ತ ನೀರು ಕಾರಣ ಆಗಿರುವುದು ಪ್ರಯೋಗಾಲಯದಲ್ಲಿ ದೃಢಪಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿನಒಳಚರಂಡಿ ನೀರು ಹರಿದ ಪರಿಣಾಮದೊಡ್ಡತುಮಕೂರು ಕೆರೆಯ ನೀರುಕಪ್ಪು ಬಣ್ಣಕ್ಕೆ ತಿರುಗಿವೆ. ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲ ನೀರುಒಳಚರಂಡಿ ಮೂಲಕ ಹರಿದು ಹೋಗಿ ಚಿಕ್ಕತುಮಕೂರು ಕೆರೆಗೆ ಸೇರುತ್ತದೆ. ಕೊಳಚೆ ನೀರನ್ನು ಇಲ್ಲಿಂದ ಶುದ್ಧೀಕರಿಸಿ ಹೊರಬಿಡಲು ಯಂತ್ರಗಳನ್ನು ಸಹ ಅಳವಡಿಸಲಾಗಿದೆ. ಆದರೆ, ನಗರಸಭೆ ಅಧಿಕಾರಿ ಗಳ ನಿರ್ಲಕ್ಷ್ಯದಿಂದ ಒಳಚರಂಡಿ ನೀರನ್ನು ಶುದ್ಧೀಕರಣ ಮಾಡದೆ ಹೊರಗೆ ಹರಿದು ಬಿಡಲಾಗುತ್ತಿದೆ.
ರಾಸಯನಿಕ ಬೆರೆತಿರುವುದು ಪತ್ತೆ:
ಕೆರೆಯಲ್ಲಿನ ನೀರು ಕಪ್ಪು ಬಣ್ಣಕ್ಕೆ ತಿರುಗಿರುವ ಬಗ್ಗೆ ಹಾಗೂ ನೀರು ಕಲುಷಿತವಾಗಿದೆಯ ಎನ್ನುವ ಬಗ್ಗೆಪರೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಕುಡಿಯುವ ನೀರಿನ ಮಾದರಿ ಪರೀಕ್ಷಾ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ನೀರಿನಲ್ಲಿ ಫ್ಲೋರೈಡ್ ಅಂಶ ಸೇರಿದಂತೆ ಹಲವಾರು ರಾಸಯನಿಕ ಬೆರೆತಿರುವುದು ಪತ್ತೆಯಾಗಿದೆ ಎಂದು ದೊಡ್ಡ ತುಮಕೂರು ಗ್ರಾಮದ ನಿವಾಸಿ ವಸಂತಕುಮಾರ್ ದೂರಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಅರ್ಕಾವತಿ ನದಿ ಪಾತ್ರದಲ್ಲಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ದೊಡ್ಡ ತುಮಕೂರು ಕೆರೆ ತುಂಬಿ ದಶಕಗಳೇ ಕಳೆದಿತ್ತು. ಈ ಬಾರಿ ಕೆರೆ ಕೋಡಿ ಬಿದ್ದಿದೆ. ಆದರೆ, ಕರೆಯ ನೀರು ಕಲುಷಿತ ಆಗುತ್ತಿರುವುದು ಆತಂಕಕಾರಿಯಾಗಿದೆ. ಕೆರೆಗೆ ಕಲುಷಿತ ನೀರು ಬರಲುಕಾರಣವಾಗಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.