ಹೊಸದಿಲ್ಲಿ: ಚಂದ್ರಯಾನ-2 ಯೋಜನೆಯಡಿ ನಡೆಸಲಾಗುವ ಚಂದ್ರನ ದಕ್ಷಿಣ ಧ್ರುವದ ಅಧ್ಯಯನ, ನಿರೀಕ್ಷೆಗಿಂತಲೂ ರೋಚಕವಾದ ಸಂಗತಿಗಳನ್ನು ಹೊರಹಾಕಲಿದ್ದು, ಅಪಾರ ಪ್ರಮಾಣದ ಜಲಾಗಾರಗಳು ಅಲ್ಲಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನ ಲೋಕ ಹೇಳಲಾರಂಭಿಸಿದೆ.
ಈವರೆಗೆ ಯಾರೂ ಪರೀಕ್ಷಿಸುವ ಗೋಜಿಗೆ ಹೋಗದ ಚಂದ್ರನ ಗುಪ್ತ ಪ್ರದೇಶ ಅದು. ಚಂದ್ರನ ಉತ್ತರ ಭಾಗಕ್ಕೆ ಹೋಲಿಸಿದರೆ ಅದರ ದಕ್ಷಿಣ ಧ್ರುವ ಒಂದು ರೀತಿಯಲ್ಲಿ ಶಾಶ್ವತ ಕತ್ತಲೆಯ ಪ್ರಾಂತ್ಯ.
ಚಂದ್ರನ ಉತ್ತರ ಭಾಗಕ್ಕೆ ಹೋಲಿಸಿದರೆ ಅಲ್ಲೆಲ್ಲೂ ಕಾಣಸಿಗದ ಅನೇಕ ವಿಶೇಷತೆಗಳು ಆ ಕತ್ತಲೆಯ ಲೋಕದಲ್ಲೇ ಇವೆ ಎಂಬುದು ವಿಜ್ಞಾನಿಗಳ ಬಲವಾದ ನಂಬಿಕೆ. ಇತ್ತೀಚೆಗೆ ನಾಸಾ ನಡೆಸಿರುವ ಅಧ್ಯಯನದ ಫಲಿತಾಂಶ ಗಳು ಈಗ ಹೊರಬಿದ್ದಿದ್ದು, ಚಂದ್ರನ ದಕ್ಷಿಣ ಧ್ರುವ ದಲ್ಲಿ ನಿರೀಕ್ಷೆಗಿಂತಲೂ ಅಪಾರ ಪ್ರಮಾಣದ ಮಂಜುಗಡ್ಡೆ ತುಂಬಿದೆ ಎಂದು ಹೇಳಲಾಗಿದೆ. ಅಲ್ಲಿನ ಮೇಲ್ಮೆ„ ಅಪಾರ ಕುಳಿ ಗಳಿಂದ ತುಂಬಿದ್ದು, ಅವುಗಳನ್ನು ಕೋಲ್ಡ್ ಟ್ರಾಪ್ ಎಂದು ಕರೆಯಲಾಗಿದೆ. ಅವುಗಳೆಲ್ಲ ಅಪಾರ ಮಂಜುಗಡ್ಡೆಯಿಂದ ಆವೃತ್ತವಾಗಿದ್ದು, ಕುಳಿಗಳ ಹೊರತಾಗಿನ ಪ್ರದೇಶದಲ್ಲೂ ಮಂಜಿನ ಅಸ್ತಿತ್ವವಿದೆ ಎಂದು ನಾಸಾ ತಿಳಿಸಿದೆ. ಜತೆಗೆ ಕಲ್ಪನೆಗೂ ಮೀರಿದ ಶೀತಲ ಪ್ರಕೃತಿ ಅಲ್ಲಿರಲಿದೆ ಎಂದು ಹೇಳಲಾಗಿದೆ.
ಹಾಗಾಗಿ ಚಂದ್ರಯಾನ-2 ಯೋಜನೆಯಡಿ ಚಂದ್ರನ ದಕ್ಷಿಣದ ನೆಲದ ಮೇಲೆ ಅಡ್ಡಾಡುವ ರೋವರ್‌ನಿಂದ ಏನು ನಿರೀಕ್ಷಿಸಲಾಗುತ್ತಿದೆಯೋ ಅದಕ್ಕಿಂತ ಹೆಚ್ಚಿನ ಮಾಹಿತಿ ದೊರಕಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜು.22ರಂದು ಚಂದ್ರಯಾನ-2ರ ಉಡಾ ವಣೆ ನಡೆದಿದ್ದು, 48 ದಿನಗಳಲ್ಲಿ ಇದು ಚಂದ್ರನ ಮೇಲೆ ಇಳಿಯಲಿದೆ.
ಚಂದ್ರನಲ್ಲಿ ನೀರಿರುವ ಸಾಧ್ಯತೆಗಳು ಹೆಚ್ಚಿವೆ. ಅದು ಮಂಜುಗಡ್ಡೆಯ ರೀತಿಯಲ್ಲಿ ರುವ ನಿರೀಕ್ಷೆ ಇದೆ. ಇದಲ್ಲದೆ ಇತರ ಹಲವಾರು ಅಂಶಗಳು ದಕ್ಷಿಣ ಭಾಗದಲ್ಲಿ ಪತ್ತೆಯಾಗುವ ಸಂಭವ ಇದೆ.
– ಸುದೀಪ್ ಭಟ್ಟಾಚಾರ್ಯ,
ಅಸೋಸಿಯೇಟ್ ಪ್ರೊಫೆಸರ್ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್