Advertisement
ಪಂಪ್ ಮಾಡಿದ ನೀರನ್ನು ವೇದಾ ವ್ಯಾಲಿಯ ಮೂಲಕ 132 ಕಿ.ಮೀ. ದೂರದ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುವುದು. ತಾತ್ಕಾಲಿಕವಾಗಿ 1,500 ಕ್ಯುಸೆಕ್ ನೀರು ಹರಿಸಲು ಯೋಜಿಸಲಾಗಿದೆ. ನವೆಂಬರ್ 1ರ ವೇಳೆಗೆ 5 ಟಿಎಂಸಿ ನೀರೆತ್ತಲಾಗುವುದು. ಉದ್ದೇಶಿತ ಯೋಜನೆ ಅಡಿ ಒಟ್ಟಾರೆ 24 ಟಿಎಂಸಿ ನೀರೆತ್ತುವ ಗುರಿ ಇದೆ ಎಂದರು.
ಎತ್ತಿನಹೊಳೆ ಯೋಜನೆ 2027ಕ್ಕೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಪಂಪ್ ಮಾಡಿದ ನೀರನ್ನು 132 ಕಿ.ಮೀ. ದೂರದ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ. ಯೋಜನೆಗೆ ಅರಣ್ಯಭೂಮಿ ತಕರಾರು ಇದ್ದು ಅದನ್ನೂ ಈಗ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. 502 ಎಕರೆ ಅರಣ್ಯಭೂಮಿ ಆವಶ್ಯಕತೆ ಇದ್ದು, ಪರ್ಯಾಯವಾಗಿ 452 ಎಕರೆ ಭೂಮಿಯನ್ನು ನೀಡಲಾಗಿದೆ. ಶೀಘ್ರ ಇದು ಇತ್ಯರ್ಥವಾಗಲಿದ್ದು, ಮುಂದಿನ 4 ತಿಂಗಳಲ್ಲಿ ಈ ಭೂಮಿಯಲ್ಲಿ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ಇದರೊಂದಿಗೆ 140 ಕಿ.ಮೀ. ದೂರದ ಬರದನಾಡು ತುಮಕೂರಿಗೆ ನೀರುಹರಿಯುವ ಮಾರ್ಗ ಸುಗಮವಾಗಲಿದೆ. 2025ರ ಮುಂಗಾರು ವೇಳೆ ತುಮಕೂರಿಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಹೇಳಿದರು. ಯೋಜನೆಯ ವಿರುದ್ಧವಾಗಿ ಒಂದಷ್ಟು ಜನ ಬ್ಲಾಕ್‌ವೆುàಲ್ ಮಾಡುತ್ತಿದ್ದರು. ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಮೇಲೆ ಕಾರ್ಯಪ್ರವೃತ್ತವಾಗಿ ಈ ಯೋಜನೆ ಪೂರ್ಣಗೊಳಿಸಲು ಮುಂದಾದೆ. ಹಿಂದಿನ ಸರಕಾರವೂ ಸಾಕಷ್ಟು ಪ್ರಯತ್ನಿಸಿತ್ತು, ಆದರೆ ಸಹಕಾರ ಸಿಕ್ಕಿರಲಿಲ್ಲ.
-ಡಿ.ಕೆ. ಶಿವಕುಮಾರ್, ಡಿಸಿಎಂ
Related Articles
ಕಬಿನಿ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷ ಎ.ಕೆ. ಬಜಾಜ್ ನೇತೃತ್ವದಲ್ಲಿ “ಜಲಾಶಯಗಳ ಸುರಕ್ಷೆ ಪರಿಶೀಲನೆ ಸಮಿತಿ’ ರಚಿಸಲಾಗಿದೆ. ಅದು ವರ್ಷಕ್ಕೊಮ್ಮೆ ನೀರಿನ ಪ್ರಮಾಣ ಕಡಿಮೆ ಇದ್ದಾಗ ಪರಿಶೀಲನೆ ಮಾಡಿ ವರದಿ ನೀಡಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Advertisement
ಸಮಿತಿಯು ಈಗಾಗಲೇ ತುಂಗಭದ್ರಾ ಅಣೆಕಟ್ಟಿಗೆ ಸಂಬಂಧಿಸಿದಂತೆ ಆ. 16ರಂದು ವಿಶೇಷ ಸಭೆ ನಡೆಸಿದೆ. ಸಮಗ್ರ ಅಧ್ಯಯನ ನಡೆಸಿ, ವರದಿ ನೀಡಲಿದೆ. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ತುಂಗಭದ್ರಾ ಮಾತ್ರವಲ್ಲ; ಕಬಿನಿ ಜಲಾಶಯದ ಸ್ಥಿತಿಗತಿ ಬಗ್ಗೆಯೂ ಕೆಲವು ವರದಿಗಳಾಗಿವೆ. ಅದನ್ನೂ ಈ ಸಮಿತಿ ಅಧ್ಯಯನ ಮಾಡಲಿದೆ. ಅಷ್ಟೇ ಅಲ್ಲ, ರಾಜ್ಯದ ಪ್ರಮುಖ ಜಲಾಶಯಗಳ ಹೈಡ್ರಾಲಿಕ್ ಮಾದರಿಗಳು, ಗೇಟ್‌ಗಳು ಸೇರಿದಂತೆ ವಿವಿಧ ಪ್ರಕಾರದ ಅಧ್ಯಯನ ಮಾಡಲಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇದ್ದಾಗ, ವರ್ಷಕ್ಕೊಮ್ಮೆ ಪ್ರಮುಖ ಜಲಾಶಯಗಳ ಪರಿಶೀಲನೆಯನ್ನೂ ಈ ಸಮಿತಿ ಮಾಡಲಿದೆ ಎಂದು ಮಾಹಿತಿ ನೀಡಿದರು.