Advertisement

YouTube ನಂಬಲರ್ಹ ಸುದ್ದಿ ವಾಹಿನಿಗಳಿಗಾಗಿ ವಾಚ್‌ಪೇಜ್‌-ಮುಂದಿನ ತಿಂಗಳು ಹೊಸ ವ್ಯವಸ್ಥೆ ಶುರು

09:10 PM Oct 19, 2023 | Team Udayavani |

ನವದೆಹಲಿ: ಯೂಟ್ಯೂಬ್‌ ಇಂದು ಅಂತರ್ಜಾಲದಲ್ಲಿ ಇಡೀ ಜಗತ್ತನ್ನು ಆಳುತ್ತಿದೆ. ಜೊತೆಗೆ ಅಲ್ಲಿ ಸುಳ್ಳುಸುದ್ದಿಗಳು ಬರುವುದು ಹೆಚ್ಚಾಗಿದೆ. ಆದ್ದರಿಂದ ಯೂಟ್ಯೂಬ್‌ ಮಹತ್ವದ ಹೆಜ್ಜೆಯೊಂದನ್ನಿಟ್ಟಿದೆ. ನಂಬಲರ್ಹ ಸುದ್ದಿಗಳನ್ನು ನೀಡುವ ವಾಹಿನಿಗಳನ್ನು ಗುರ್ತಿಸಲು “ವಾಚ್‌ ಪೇಜ್‌’ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

Advertisement

ಇದರಲ್ಲಿ ನಂಬಿಕೆಗೆ ಅರ್ಹ ಚಾನೆಲ್‌ಗ‌ಳ ಪಟ್ಟಿಯಿರುತ್ತದೆ ಎಂದು ಯೂಟ್ಯೂಬ್‌ ಇಂಡಿಯಾದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥೆ ಮೀರಾ ಚಾಟ್‌ ಹೇಳಿದ್ದಾರೆ. ಮುಂದಿನ ತಿಂಗಳಲ್ಲಿ ವಾಚ್‌ ಪೇಜ್‌ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸರ್ಕಾರ, ನಕಲಿ ಸುದ್ದಿ ಹರಡುವ ವಾಹಿನಿಗಳನ್ನು ಪತ್ತೆ ಮಾಡಲು ತಿಳಿಸಿತ್ತು. ಮೂಲಗಳ ಪ್ರಕಾರ, ನಕಲಿ ಸುದ್ದಿಗಳ ಬಗ್ಗೆ ಸರ್ಕಾರ ನಿರ್ದಿಷ್ಟ ಮಾನದಂಡಗಳನ್ನೇನು ನೀಡಿಲ್ಲ. ಆದರೂ ಇದನ್ನು ಯೂಟ್ಯೂಬ್‌ ಗಂಭೀರವಾಗಿ ಪರಿಗಣಿಸಿದೆ. ಈ ವರ್ಷ ಏಪ್ರಿಲ್‌-ಜೂನ್‌ ನಡುವೆ 20 ಲಕ್ಷ ವಿಡಿಯೊಗಳನ್ನು ಯೂಟ್ಯೂಬ್‌ ಅಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next