Advertisement

ಶಾಂತಂ ಪಾಪಂ‌ ಸೀರಿಯಲ್ ನೋಡಿ ಪತಿಯನ್ನು ಹತ್ಯೆಗೈದ ಮಹಿಳೆ: ಪತ್ನಿ, ಪ್ರಿಯಕರ ಬಂಧನ

04:35 PM Sep 21, 2022 | Team Udayavani |

ಮಳವಳ್ಳಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ, ಶಾಂತಂ ಪಾಪಂ‌ ಸೀರಿಯಲ್ ನಲ್ಲಿ ಬರುವ ಸನ್ನಿವೇಶದ ರೀತಿ ಹತ್ಯೆ ಮಾಡಿದ್ದ ಪತ್ನಿ ಮತ್ತು ಪ್ರಿಯಕರನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

Advertisement

ಇದನ್ನೂ ಓದಿ:ಜೈಲರ್ ಗೆ ಬೆದರಿಕೆ; ಬಿಎಸ್ಪಿ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 2 ವರ್ಷ ಜೈಲುಶಿಕ್ಷೆ

ಪಟ್ಟಣದ ಇನ್ ಇಎಸ್ ಬಡಾವಣೆಯ ಶಶಿಕುಮಾರ್(35) ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಪತ್ನಿ ನಾಗಮಣಿ(28) ಹಾಗೂ ಪ್ರಿಯಕರ ಕನಕಪುರದ ನಿವಾಸಿ ಹೇಮಂತ್(25) ಬಂಧಿತರು.

ನಾಗಮಣಿ ಮತ್ತು ಹೇಮಂತ್ ಕನಕಪುರ ಗ್ರಾಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಿಚಯವಾಗಿ ಅನೈತಿಕ ಸಂಬಂಧ ಹೊಂದಿದ್ದರು. ಪತ್ನಿಯ ಅನೈತಿಕ ಸಂಬಂಧ ತಿಳಿದು ಶಶಿಕುಮಾರ್ ಪತ್ನಿಯನ್ನು ಕಳೆದ ಎರಡು ತಿಂಗಳ ಹಿಂದೆ ಕೆಲಸ ಬಿಡಿಸಿ ಮನೆಯಲ್ಲಿಯೇ ಇರುವಂತೆ ಹೇಳಿದ್ದರು ಎನ್ನಲಾಗಿದೆ.

ಇದರಿಂದ ಕೋಪಗೊಂಡು ಖಾಸಗಿ ವಾಹಿನಿಯ ಶಾಂತಂ ಪಾಪಂ ಕಾರ್ಯಕ್ರಮದಿಂದ ಪ್ರೇರಿತಳಾದ ನಾಗಮಣಿ ಪ್ರಿಯಕರ ಹೇಮಂತ್ ನನ್ನು ಭಾನುವಾರ ರಾತ್ರಿ ಮನೆಗೆ ಕರೆಸಿಕೊಂಡು ಮನೆಯಲ್ಲಿದ್ದ ಮಗನಿಗೆ ಮೊಬೈಲ್ ನೀಡಿ ರೂಮಿನಲ್ಲಿ ಆಟವಾಡಿಕೊಳ್ಳಲು ಹೇಳಿದ್ದಾಳೆ. ಬಳಿಕ ಶಶಿಕುಮಾರ್ ನನ್ನು ದಿಂಬು ಮತ್ತು ವೇಲಿನಿಂದ ಬಿಗಿದು ಕೊಲೆ ಮಾಡಿದ್ದಾರೆ.

Advertisement

ಯಾರೂ ದುಷ್ಕರ್ಮಿಗಳು ಬಂದು ನನ್ನನ್ನು ಮತ್ತು ಮಗನನ್ನು ಕೈಕಾಲು ಕಟ್ಟಿ ರೂಮಿನಲ್ಲಿ ಕೂಡಿಹಾಕಿ ಗಂಡನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ನಾಟಕವಾಡಿದ್ದಳು. ಸೊಸೆಯ ಮೇಲೆ ಅನುಮಾನಗೊಂಡು ಮೃತ ಶಶಿಕುಮಾರ್ ತಾಯಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸಿಪಿಐ ಎ.ಕೆ.ರಾಜೇಶ್ ನೇತೃತ್ವದ ಪೊಲೀಸರ ತಂಡದ ವಿಚಾರಣೆ ವೇಳೆ ನಾಗಮಣಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next