Advertisement

Pocso: ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಸಂಗ್ರಹಿಸುವುದು ಪೋಕ್ಸೋ ಅಡಿ ಅಪರಾಧ: ಸುಪ್ರೀಂ

11:57 AM Sep 23, 2024 | Team Udayavani |

ಹೊಸದಿಲ್ಲಿ: ಮಕ್ಕಳ ಅಶ್ಲೀಲ ವಿಡಿಯೋವನ್ನು ವೀಕ್ಷಣೆ ಮಾಡುವುದು ಪೋಕ್ಸೋ (Pocso) ಅಡಿ ಅಪರಾಧ ಎಂದು ಸೋಮವಾರ (ಸೆ.23) ಸುಪ್ರೀಂ ಕೋರ್ಟ್‌ (Supreme Court) ತೀರ್ಪು ನೀಡಿದೆ.

Advertisement

ನ್ಯಾ|ಡಿ.ವೈ.ಚಂದ್ರಚೂಡ್ ಮತ್ತು ನ್ಯಾ| ಜೆ.ಪಿ. ಪರ್ದೀವಾಲಾ ಅವರಿರುವ ಪೀಠ ತೀರ್ಪು ಪ್ರಕಟಿಸಿದೆ. ಮಕ್ಕಳ ಅಶ್ಲೀಲ ವಿಡಿಯೋ (Child Po*n) ವೀಕ್ಷಣೆ ಮಾಡುವುದು ಪೋಕ್ಸೋ ಹಾಗೂ ಐಟಿ ಕಾಯ್ದೆ ಪ್ರಕಾರ ಅಪರಾಧವಲ್ಲ ಎಂದು ಜ.11ರಂದು ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ತೀರ್ಪು ನೀಡಿದ್ದು, ಮದ್ರಾಸ್‌ ಹೈಕೋರ್ಟ್‌ ತೀರ್ಪನ್ನು ರದ್ದು ಮಾಡಿದೆ.

ತೀರ್ಪು ನೀಡುವಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು “ಘೋರ ದೋಷ” ಎಸಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಚೆನ್ನೈ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಮತ್ತೆ ತೆರೆಯಿತು. ಮಕ್ಕಳ ಅಶ್ಲೀಲತೆಯ ಕಂಟೆಟ್ ನಿರ್ಮಿಸುವುದು ಮತ್ತು ಡೌನ್‌ಲೋಡ್ ಮಾಡುವುದು ಮಾತ್ರವಲ್ಲದೆ, ಅವುಗಳನ್ನು ಪ್ರಕಟಿಸುವುದು ಮತ್ತು ಹಂಚಿಕೊಳ್ಳುವುದು ಕೂಡಾ ಅಪರಾಧವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

Advertisement

‘ಮಕ್ಕಳ ಅಶ್ಲೀಲತೆ’ ಪದವನ್ನು ‘ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಸ್ತು’ ಎಂದು ಬದಲಿಸಲು ತಿದ್ದುಪಡಿ ತರುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಕೇಳಿದೆ.

ಇನ್ನು ಮುಂದೆ ಪ್ರಕರಣಗಳಲ್ಲಿ ‘ಮಕ್ಕಳ ಅಶ್ಲೀಲತೆ’ ಎಂಬ ಪದವನ್ನು ಬಳಸದಂತೆ ಇತರ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.

“ಅಶ್ಲೀಲತೆಯಿಂದ ಮಕ್ಕಳ ಮೇಲಿನ ದೌರ್ಜನ್ಯ ಮೇಲೆ ನಾವು ದೀರ್ಘಕಾಲೀನ ಪ್ರಭಾವದ ಬಗ್ಗೆ ಹೇಳಿದ್ದೇವೆ… POCSO ಗೆ ತಿದ್ದುಪಡಿ ತರಲು ನಾವು ಸಂಸತ್ತಿಗೆ ಸಲಹೆ ನೀಡಿದ್ದೇವೆ… ಇದರಿಂದ ಮಕ್ಕಳ ಅಶ್ಲೀಲತೆಯನ್ನು ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಎಂದು ಉಲ್ಲೇಖಿಸಬಹುದು. ನಾವು ಸುಗ್ರೀವಾಜ್ಞೆಯನ್ನು ತರಬಹುದು ಎಂದು ಸೂಚಿಸಿದ್ದೇವೆ” ಎಂದು ಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next