ಮುಂಬಯಿ: ಮಹಿಳಾ ಪ್ರಯಾಣಿಕರು ಪುರುಷ ಪ್ರಯಾಣಿಕರನ್ನು ಥಳಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುರುವಾರ ಮಧ್ಯಾಹ್ಬ(ಜೂ.22 ರಂದು) ಮುಂಬಯಿಯ ಸ್ಥಳೀಯ ರೈಲಿನಲ್ಲಿ ಕೆಲ ಪುರುಷ ಪ್ರಯಾಣಿಕರು ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಪ್ರವೇಶಿಸಿದ್ದಾರೆ. ಮಹಿಳೆಯರು ಪುರುಷರಲ್ಲಿ ಪ್ರಶ್ನೆ ಮಾಡಿದಾಗ, ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.
ನೀವು ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಬಂದಿದ್ದೀರಿ ಇಲ್ಲಿಂದ ಹೋಗಿ ಎಂದು ಹೇಳಿದಾಗ ಪುರುಷರು ಇದಕ್ಕೆ ನಿರಾಕರಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೆಲ ಮಹಿಳೆಯರು ಪುರುಷರ ಶರ್ಟ್ ಹಿಡಿದು ಥಳಿಸಿದ್ದಾರೆ. ಇದು ಲೇಡಿಸ್ ಕಂಪಾರ್ಟ್‌ಮೆಂಟ್ ಅಲ್ಲವೆಂದು ಹೇಳಿದ ಪುರುಷರ ಮಾತನ್ನು ಕೇಳದೇ ಮಹಿಳೆಯರು ಹಲ್ಲೆ ಮಾಡಿದ್ದಾರೆ.
ಘಟನೆ ಬಗ್ಗೆ ಮಹಿಳೆಯರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು, ಆದರೆ ರೈಲ್ವೆ ಪೊಲೀಸರು ಸಮಯಕ್ಕೆ ಬಾರದೆ ವಿಫಲರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಥಳೀಯ ಮುಖಂಡರು ಈ ವಿಷಯದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದು, ಸುಧಾರಿತ ಭದ್ರತಾ ಕ್ರಮಗಳ ಅಗತ್ಯಕ್ಕೆ ಆಗ್ರಹಿಸಿದ್ದಾರೆ.