Advertisement

Leo: ಥಿಯೇಟರ್ ಸ್ಕ್ರೀನ್ ಮುಂದೆಯೇ ಹಾರ,ಉಂಗುರ ಬದಲಾಯಿಸಿಕೊಂಡ ದಳಪತಿ ಫ್ಯಾನ್ಸ್

12:16 PM Oct 19, 2023 | Team Udayavani |

ಚೆನ್ನೈ: ವಿಜಯ್ ‘ಲಿಯೋ’ ಹಬ್ಬ ಶುರುವಾಗಿದೆ. ಎಲ್ಲೆಡೆ ಪಟಾಕಿ ಹಚ್ಚಿ ಥಿಯೇಟರ್ ಮುಂದೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ‘ಲಿಯೋ’ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

Advertisement

ಈ ಹಿಂದಿನ ಸಿನಿಮಾದಂತೆ ‘ಲಿಯೋ’ ಸಿನಿಮಾಕ್ಕೂ ಫ್ಯಾನ್ಸ್ ಗಳು ಮುಂಜನೆಯಿಂದಲೇ ಥಿಯೇಟರ್ ಮುಂದೆ ಸಾಲಾಗಿ ನಿಂತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಕೆಲವರು ಸಿನಿಮಾದ ಕುರಿತು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಥಿಯೇಟರ್ ಒಳಗೆ ಫ್ಯಾನ್ಸ್ ಗಳು ಚಪ್ಪಾಳೆ ತಟ್ಟುವುದು, ಶಿಳ್ಳೆ ಹೊಡೆಯುವುದು, ಕುಣಿಯುವುದನ್ನು ನೋಡುತ್ತೇವೆ. ಆದರೆ ಇಲ್ಲೊಂದು ಥಿಯೇಟರ್ ನಲ್ಲಿ ವಿಶೇಷ ಸನ್ನಿವೇಶವೊಂದು ನಡೆದಿದೆ.

ದಳಪತಿ ವಿಜಯ್ ಅವರ ಅಪ್ಪಟ ಅಭಿಮಾನಿಗಳಾಗಿರುವ ವೆಂಕಟೇಶ ಹಾಗೂ ಮಂಜುಳಾ ಥಿಯೇಟರ್ ನಲ್ಲಿ ಎಲ್ಲರ ಸಮ್ಮುಖದಲ್ಲೇ ಪರಸ್ಪರ ಹಾರ ಹಾಗೂ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ.

ವಿಜಯ್ ಅವರ ಅಭಿಮಾನಿಯಾಗಿರುವ ಇಬ್ಬರು ‘ಲಿಯೋ’ ಸಿನಿಮಾ ಬಿಡುಗಡೆ ಆದ್ಮೇಲೆ ಮದುವೆ ಆಗುವುದರ ಬಗ್ಗೆ ಯೋಜನೆಯನ್ನು ಹಾಕಿಕೊಂಡಿದ್ದರು. ಅದರಂತೆ ಶುಕ್ರವಾರ (ಅಕ್ಟೋಬರ್ 20) ರಂದು ವೆಂಕಟೇಶ್ ಹಾಗೂ ಮಂಜುಳಾ ವಿವಾಹವಾಗಲಿದ್ದಾರೆ.

Advertisement

‘ಲಿಯೋ’ ಸಿನಿಮಾ ನೋಡಲು ಥಿಯೇಟರ್ ಗೆ ಬಂದಿದ್ದ ವೆಂಕಟೇಶ್ ಹಾಗೂ ಮಂಜುಳಾ ಅವರು ಸ್ಕ್ರೀನ್ ಮುಂದೆ ಬಂದು ಹಾರ ಹಾಗೂ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ‌. ಇದರೊಂದಿಗೆ ‌ಫೋಟೋಗಳಿಗೆ ಪೋಸ್ ಕೊಟ್ಟಿರುವುದು ಸೋಶಿಯಲ್ ‌ಮೀಡಿಯಾದಲ್ಲಿ ವೈರಲ್ ಆಗಿದೆ.

ಲೋಕೇಶ್ ಕನಕರಾಜ್ ಅವರ ‘ಲಿಯೋ’ ಸಿನಿಮಾದಲ್ಲಿ ದಳಪತಿ ವಿಜಯ್, ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ಮೆನನ್ ಸೇರಿದಂತೆ ಹಲವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next