Advertisement

10ರ ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಿದ ತ್ರಿಪುರಾ ಸಿಎಂ ಸಹಾ!

07:33 PM Jan 11, 2023 | Team Udayavani |

ಹಪಾನಿಯಾ:ತ್ರಿಪುರಾದ ಹಾಲಿ ಮುಖ್ಯಮಂತ್ರಿ ಡಾ.ಮಾಣಿಕ್‌ ಸಹಾ ರಾಜಕೀಯದಲ್ಲಿ ಇದ್ದರೂ, ಮೂಲತಃ ದಂತ ವೈದ್ಯ. ರಾಜಕೀಯ ಕ್ಷೇತ್ರದಲ್ಲಿ ಇದ್ದರೂ ತಮ್ಮ ಮೂಲ ವೃತ್ತಿ ಮರೆತಿಲ್ಲ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ.

Advertisement

ಏಳು ತಿಂಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು ಹಪಾನಿಯಾದಲ್ಲಿ ಇರುವ ತ್ರಿಪುರಾ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಅವರು ಹತ್ತು ವರ್ಷದ ಬಾಲಕನಿಗೆ ಹಲ್ಲಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯನ್ನೂ ನಡೆಸಿದ್ದಾರೆ.

ಬೆಳಗ್ಗೆ 9 ಗಂಟೆಗೆ ಶಸ್ತ್ರಚಿಕಿತ್ಸಾ ಕೊಠಡಿಗೆ ಆಗಮಿಸಿದ ಡಾ.ಮಾಣಿಕ್‌ ಸಹಾ 9.30ರ ವೇಳೆಗೆ ಅದನ್ನು ಪೂರೈಸಿ ಮುಗುಳ್ನಗುತ್ತಾ ಹೊರಬಂದರು.

ಈ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ಮೂಲ ವೃತ್ತಿ ಮರೆತಿಲ್ಲ ಎಂದು ಸಾಬೀತು ಮಾಡಿದ್ದಾರೆ. ಮಾರ್ಚ್‌ನಲ್ಲಿ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next