Advertisement

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

08:04 PM Oct 18, 2021 | Team Udayavani |

ದಾಂಡೇಲಿ : ನಗರದ ಶೋಭೆ ಹೆಚ್ಚಿಸುವ ದೃಷ್ಟಿಯಿಂದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ಜೆ.ಎನ್.ರಸ್ತೆಯಲ್ಲಿ ನಿರ್ಮಾಣ ಮಾಡಲಾದ ವಾಚ್ ಟವರ್ ಸರಿಯಿರುವುದಕ್ಕಿಂತ ಕೆಟ್ಟು ನಿಂತಿರುವುದೆ ಹೆಚ್ಚು ಎಂಬ ಮಾತು ನಗರದಲ್ಲಿ ಕೇಳಿ ಬರುತ್ತಿದೆ.

Advertisement

ವಾಚ್ ಟವರ್ ದುರಸ್ತಿ ಬಗ್ಗೆ ಸಾಕಷ್ಟು ಬಾರಿ ನಗರ ಸಭೆಗೆ ಗಮನ ಸೆಳೆಯಲಾಗಿತ್ತು. ಪರಿಣಾಮವಾಗಿ ಕಳೆದೆರಡು ದಿನಗಳ ಹಿಂದೆ ನಗರ ಸಭೆಯವರು ಕಾಗದ ಕಾರ್ಖಾನೆಯ ಸಹಕಾರದಲ್ಲಿ ದುರಸ್ತಿ ಮಾಡಿದ್ದರು. ದುರಸ್ತಿ ಮಾಡಿ ಎರಡು ದಿನ ಕಳೆಯುವಷ್ಟರಲ್ಲಿ ವಾಚ್ ಟವರ್ ಮತ್ತೇ ತನ್ನ ಹಿಂದಿನ ಚಾಳಿಯನ್ನು ಮುಂದುವರೆಸಿದೆ. ಪರಿಣಾಮವಾಗಿ ಸಮಯ ತೋರಿಸುವುದನ್ನೆ ನಿಲ್ಲಿಸಿ ಬಿಟ್ಟಿದೆ. ಹೀಗಾಗಿ ದುರಸ್ತಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ಮಾತುಗಳು ಕೇಳಿ ಬರತೊಡಗಿವೆ.

ಎಷ್ಟು ದುರಸ್ತಿ ಮಾಡಿದರೂ ಮತ್ತೇ ಕೆಟ್ಟು ನಿಲ್ಲುತ್ತಿರುವ ವಾಚ್ ಟವರಿನಲ್ಲಿ ಆಳವಡಿಸಲಾದ ವಾಚನ್ನು ತೆಗೆದು ವಿಶ್ವವಿಖ್ಯಾತಿಯನ್ನು ಪಡೆದ ಹಾರ್ನ್ ಬಿಲ್ ಹಕ್ಕಿ ಇಲ್ಲವೆ ಮೊಸಳೆಯ ಆಕೃತಿಯನ್ನಾದರೂ ನಿರ್ಮಿಸಿಟ್ಟಲ್ಲಿ ತಕ್ಕ ಮಟ್ಟಿಗೆ ಸಹಕಾರಿಯಾಗಬಹುದು ಮಾತ್ರವಲ್ಲದೇ ಕಾಲ ಕಾಲಕ್ಕೆ ಕೆಟ್ಟು ನಿಲ್ಲುವ ಗಡಿಯಾರದ ಸಮಸ್ಯೆಗೂ ವಿರಾಮ ನೀಡಬಹುದಾಗಿದೆ ಅಂತಾರೆ ಸಾರ್ವಜನಿಕರು.

ಇದನ್ನೂ ಓದಿ :ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ

Advertisement

Udayavani is now on Telegram. Click here to join our channel and stay updated with the latest news.

Next