ಹುಲಿ ಬೇಟೆಯಾಡುವ ವೀಡಿಯೋಗಳನ್ನು ನೋಡಿರುತ್ತೀರಿ. ಆದರೆ ಈ ವೀಡಿಯೋದಲ್ಲಿ ಹುಲಿಗಳು ಬೇಟೆಯಾಡುತ್ತಿಲ್ಲ. ಬದಲಾಗಿ ಸಹೋದರ ಹುಲಿಗಳು ಆಟವಾಡುತ್ತಿವೆ. ಒಂದರ ಮೇಲೆ ಒಂದು ಎರಗಿ ಆಟವಾಡುತ್ತಿರುವ ವೀಡಿಯೋವನ್ನು ಅರಣ್ಯ ಅಧಿಕಾರಿ ಸುಶಾಂತ್ ನಂದ ಟ್ವೀಟ್ ಮಾಡಿದ್ದಾರೆ.
Advertisement
ಮಧ್ಯಪ್ರದೇಶದ ಹುಲಿ ಫೌಂಡೇಶನ್ ಈ ವೀಡಿಯೋ ನೀಡಿದೆ ಎಂದು ಮಾಹಿತಿ ಕೊಟ್ಟಿರುವ ಅವರು, “ದಶಕದ ಹಿಂದೆ ಈ ಪ್ರದೇಶದಲ್ಲಿ ಹುಲಿಯೇ ಇಲ್ಲ ಎನ್ನಲಾಗಿತ್ತು. ಈಗ ಇಲ್ಲಿ 45-50 ಹುಲಿ ಹಾಗೂ 20-25 ಹುಲಿಮರಿಗಳಿವೆ’ ಎಂದು ತಿಳಿಸಿದ್ದಾರೆ.
ಮೈ ಜುಂ ಎನಿಸುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.
Related Articles
Advertisement