Advertisement

National Cinema Day: ಅ.13ರಂದು 99ರೂ.ಗೆ ಸಿನಿಮಾ ನೋಡಿ!

09:32 PM Oct 10, 2023 | Pranav MS |

ನವದೆಹಲಿ: ಸಾಮಾನ್ಯವಾಗಿ ಶುಕ್ರವಾರದಂದು ಸಿನಿಮಾಗಳ ಬಿಡುಗಡೆಯಾಗುವುದರಿಂದ ಟಿಕೆಟ್‌ ಬೆಲೆಯೂ ಆ ದಿನ ಹೆಚ್ಚಿಗೆ ಇರುತ್ತದೆ. ಆದರೆ, ಅ.13ರ ಈ ಶುಕ್ರವಾರ, ದೇಶದ 4,000 ಸ್ಕ್ರೀನ್‌ಗಳಲ್ಲಿ ಸಿನಿಮಾ ಟಿಕೆಟ್‌ನ ಬೆಲೆ ಕೇವಲ 99 ರೂ. ಮಾತ್ರ! ಹೌದು, ರಾಷ್ಟ್ರೀಯ ಸಿನಿಮಾ ದಿನದ ಹಿನ್ನೆಲೆಯಲ್ಲಿ ಅಂದು ಪಿವಿಆರ್‌ ಐನಾಕ್ಸ್‌, ಸಿನಿಪೊಲಿಸ್‌, ಮಿರಾಜ್‌, ಸಿಟಿಪ್ರೈಡ್‌, ಏಷ್ಯನ್‌ಮುಕ್ತಾ ಎ2, ಮೂವಿ ಟೈಮ್‌ನಂಥ ಮಲ್ಟಿಪ್ಲೆಕ್ಸ್‌ಗಳು ಸೇರಿ ಒಟ್ಟು 4 ಸಾವಿರ ಸ್ಕ್ರೀನ್‌ಗಳಲ್ಲಿ 99 ರೂ.ಗಳಿಗೆ ಟಿಕೆಟ್‌ ಖರೀದಿಸಿ ಸಿನಿಮಾ ನೋಡಬಹುದಾಗಿದೆ.

Advertisement

ಹೀಗೆಂದು ಮಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್ ಇಂಡಿಯಾ ಟ್ವೀಟ್‌ ಮಾಡಿದ್ದು, ಕುಟುಂಬಸ್ಥರು, ಪ್ರೀತಿಪಾತ್ರರು, ಸ್ನೇಹಿತರ ಜತೆಗೆ ಆಗಮಿಸಿ ಸಿನಿಮಾ ವೀಕ್ಷಿಸುವ ಮೂಲಕ ಆಚರಣೆಯನ್ನು ಸಂಭ್ರಮಿಸಿ ಎಂದು ಮನವಿ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next