Advertisement

ʼVettaiyanʼ ಸೆಟ್‌ನಲ್ಲಿದ್ದ ರಜಿನಿ – ಫಾಹದ್ ‌ವಿಡಿಯೋ ಲೀಕ್; ವೈರಲ್

03:05 PM Jan 01, 2024 | Team Udayavani |

ಚೆನ್ನೈ:  ಸೂಪರ್‌ ಸ್ಟಾರ್‌ ರಜಿನಿಕಾಂತ್‌ ʼಜೈಲರ್‌ʼ ಬಳಿಕ ಟಿಜೆ ಜ್ಞಾನವೇಲ್ ಅವರ ʼವೆಟ್ಟಯ್ಯನ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ಹುಟ್ಟುಹಬ್ಬದಂದು ಸಿನಿಮಾದ ಟೈಟಲ್‌ ರಿವೀಲ್‌ ಆಗಿತ್ತು.

Advertisement

ʼವೆಟ್ಟಯ್ಯನ್ʼ ಚಿತ್ರದ ಚಿತ್ರೀಕರಣವನ್ನು ತಿರುನಲ್ವೇಲಿನಲ್ಲಿ ನಡೆಯುತ್ತಿದೆ. ಸಿನಿಮಾದಲ್ಲಿ ರಜಿನಿಕಾಂತ್‌ ನಿವೃತ್ತ ಮುಸ್ಲಿಂ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರಕರಣವೊಂದನ್ನು ರೀ ಓಪನ್‌ ಮಾಡಿ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿದ್ದಾರೆ ಎನ್ನಲಾಗಿದೆ.

ಸಿನಿಮಾ ಸಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಸಿನಿಮಾದಲ್ಲಿರುವ ಮಲ್ಟಿಸ್ಟಾರ್ಸ್‌ ಕೂಡ ಒಂದು. ಅಮಿತಾಭ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಪ್ರಮುಖ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ʼವೆಟ್ಟಯ್ಯನ್ʼ ಸಿನಿಮಾದ ಚಿತ್ರೀಕರಣದ ಫೋಟೋವೊಂದು ಲೀಕ್‌ ಆಗಿತ್ತು. ಇದೀಗ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿನ ವಿಡಿಯೋವೊಂದು ಲೀಕ್ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪೊಲೀಸ್‌ ಪಾತ್ರದ ಪಕ್ಕದಲ್ಲಿ ಫಾರ್ಮಲ್‌ ಡ್ರೆಸ್‌ ನಲ್ಲಿ ರಜಿನಿಕಾಂತ್‌ ಹಾಗೂ ಕಲರ್‌ ಫುಲ್‌ ಉಡುಗೆಯಲ್ಲಿ ಫಾಹದ್‌ ಫಾಸಿಲ್‌ ನಿಂತುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Advertisement

ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ, ಎಸ್ ಆರ್ ಕಥಿರ್ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next