Advertisement

Watch; ನೇರ ಪ್ರಸಾರದ ಸಮಯದಲ್ಲಿ ಟಿವಿ ಸ್ಟುಡಿಯೋಗೆ ನುಗ್ಗಿದ ಬಂದೂಕುಧಾರಿಗಳು

08:20 AM Jan 10, 2024 | Team Udayavani |

ಗುವಾಕ್ವಿಲ್: ಟಿವಿ ಚಾನೆಲೊಂದಕ್ಕೆ ನುಗ್ಗಿದ ಮುಸುಕುಧಾರಿ ವ್ಯಕ್ತಿಗಳು ಬಂದೂಕು ಝಳಪಿಸಿದ ಘಟನೆ ಕಲಹ ಪೀಡಿತ ಈಕ್ವೆಡಾರ್ ನಲ್ಲಿ ಮಂಗಳವಾರ ನಡೆದಿದೆ.  ಹಿಂಸಾಚಾರ ಪೀಡಿಯ ದೇಶವು ಆಂತರಿಕ ಸಶಸ್ತ್ರ ಸಂಘರ್ಷಕ್ಕೆ ಪ್ರವೇಶಿಸಿದೆ ಎಂದು ಅಧ್ಯಕ್ಷರು ಘೋಷಿಸಿದ್ದಾರೆ.

Advertisement

ನೇರ ಪ್ರಸಾರವಾಗುತ್ತಿದ್ದ ಸುದ್ದಿ ಕಾರ್ಯಕ್ರಮದ ಸಂದರ್ಭದಲ್ಲಿ ಪಿಸ್ತೂಲ್‌ ಗಳನ್ನು ಹೊಂದಿದ್ದ ಮತ್ತು ಡೈನಮೈಟ್‌ನ ಕಡ್ಡಿಗಳಂತೆ ಕಾಣುತ್ತಿದ್ದ ವಸ್ತುಗಳನ್ನು ಹೊತ್ತಿದ್ದ ವ್ಯಕ್ತಿಗಳು ಬಂದರು ನಗರವಾದ ಗುವಾಕ್ವಿಲ್‌ ನಲ್ಲಿ ಟಿಸಿ ಟೆಲಿವಿಷನ್ ನೆಟ್‌ವರ್ಕ್‌ ನ ಸೆಟ್‌ ಗೆ ಅಕ್ರಮವಾಗಿ ಪ್ರವೇಶಿಸಿದರು. ತಮ್ಮ ಬಳಿ ಬಾಂಬ್‌ ಗಳಿವೆ ಎಂದು ಬೆದರಿಸಿದ್ದಾರೆ. ಹಿನ್ನಲೆಯಲ್ಲಿ ಗುಂಡೇಟಿನ ರೀತಿಯ ಸದ್ದು ಕೇಳುತ್ತಿತ್ತು. ದಾಳಿಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ವರದಿಯಾಗಿದೆ.

ಸುಮಾರು 15 ನಿಮಿಷಗಳ ನಂತರ ನಿಲ್ದಾಣದ ಸಿಗ್ನಲ್ ಕಡಿತಗೊಂಡರೂ ಘಟನೆಯನ್ನು ನೇರ ಪ್ರಸಾರ ಮಾಡಲಾಯಿತು. ಕೆಲವು ದಾಳಿಕೋರರು ಸ್ಟುಡಿಯೊದಿಂದ ಓಡಿಹೋದರು, ತಮ್ಮನ್ನು ಪೊಲೀಸರು ಸುತ್ತುವರೆದಿದ್ದಾರೆಂದು ತಿಳಿದಾಗ ಮರೆಯಾಗಲು ಪ್ರಯತ್ನಿಸಿದರು.

ಟಿವಿ ಚಾನೆಲ್ ಆಕ್ರಮಣದ ಹಿಂದೆ ಯಾರಿದ್ದಾರೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ. ಇತ್ತೀಚೆಗೆ ದಕ್ಷಿಣ ಅಮೆರಿಕಾದ ದೇಶ ಈಕ್ವೆಡಾರ್ ನಲ್ಲಿ ದಾಳಿಗಳ ಸರಣಿ ನಡೆಯುತ್ತಿದೆ.

Advertisement

ಕುಖ್ಯಾತ ಗ್ಯಾಂಗ್ ಲೀಡರ್‌ ಜೈಲಿನಿಂದ ಪರಾರಿಯಾದ ಹಿನ್ನೆಲೆಯಲ್ಲಿ ಈಕ್ವೆಡಾರ್ ನಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳ ಅಪಹರಣಗಳು ಸೇರಿದಂತೆ ಸರಣಿ ದಾಳಿಗಳು ನಡೆಯುತ್ತಿದೆ. ಅಧ್ಯಕ್ಷ ಡೇನಿಯಲ್ ನೊಬೊವಾ ಸೋಮವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next