Advertisement

ಟ್ರಾಫಿಕ್‌ ಸಿಗ್ನಲ್‌ನಲ್ಲೇ ಬೈಕ್‌ ಸವಾರರಿಗೆ ಸಚಿನ್‌ ಪಾಠ..!

12:42 PM Apr 10, 2017 | |

ಹೈದರಾಬಾದ್‌: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ವಿಶ್ವವನ್ನೇ ಬೆರಗುಗೊಳಿಸಿದ ಅಪ್ರತಿಮ ಸಾಧಕ. ಇದೀಗ ಸಚಿನ್‌ ರಸ್ತೆ ಸುರಕ್ಷಾ ಕಾರ್ಯಕರ್ತನಾಗಿ ಕಾಣಿಸಿಕೊಂಡಿದ್ದಾರೆ. 

Advertisement

ಹೈದರಾಬಾದ್‌ನಲ್ಲಿ ಐಪಿಎಲ್‌ ಪಂದ್ಯವೊಂದಕ್ಕಾಗಿ ಸಚಿನ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರರಿಗೆ ಸಿಗ್ನಲ್‌ನಲ್ಲೇ ಪಾಠ ಮಾಡಿದ್ದಾರೆ.

ಏನಿದು ಘಟನೆ?: ಹೈದರಾಬಾದ್‌ನ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸಚಿನ್‌ ಕಾರು ನಿಂತಿತ್ತು. ಈ ವೇಳೆ ಹತ್ತಿರವೇ ನಿಂತಿದ್ದ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಹೆಲ್ಮೆಟ್‌ ಧರಿಸಿರಲಿಲ್ಲ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸಚಿನ್‌ ಇದನ್ನು ಗಮನಿಸಿದ್ದಾರೆ. ಕೂಡಲೇ ಕಾರಿನ ಕಿಟಕಿ ಗ್ಲಾಸ್‌ ಇಳಿಸಿದ್ದಾರೆ. ಹೆಲ್ಮೆಟ್‌ ಧರಿಸಿ.. ರಸ್ತೆ ಸುರಕ್ಷೆ ಎಲ್ಲಕ್ಕಿಂತ ಮೊದಲ ಆದ್ಯತೆಯ ವಿಷಯ. ಜೀವನ ಅನ್ನೋದು ಅಮೂಲ್ಯವಾದುದು. ಹೆಲ್ಮೆಟ್‌ ಧರಿಸದೇ ಬೈಕ್‌ ಚಲಾಯಿಸಿದರೆ ಜೀವಕ್ಕೇ ಅಪಾಯವಾಗಬಹುದು ಎಂದ ಸಚಿನ್‌ ಅಲ್ಲಿಯೇ ಆ ಯುವಕರಿಂದ ಭಾಷೆ ತೆಗೆದುಕೊಂಡರು. ಹುಡುಗರು ಅದನ್ನು ಒಪ್ಪಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next