ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಜನ ಮೆಚ್ಚುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅದೇ ರೀತಿ ಅವರು ಭಾನುವಾರ ಹಂಚಿಕೊಂಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಒರಗುಂಟನ್ ಒಂದು ಹುಲಿ ಮರಿಗಳನ್ನು ತನ್ನ ಮರಿಗಳಂತೆಯೇ ಸಲಹುತ್ತಾ ಕುಳಿತಿರುತ್ತದೆ. ಅವುಗಳಿಗೆ ಬಾಟಲ್ ಹಾಲು ಕುಡಿಸುವುದು, ಅವುಗಳನ್ನು ಮುದ್ದಾಡುವುದು, ಅಪ್ಪಿಕೊಳ್ಳುವುದು ಹೀಗೆ ವಿಶೇಷವಾಗಿ ಆರೈಕೆ ಮಾಡುವ ವಿಡಿಯೋ ಅದಾಗಿದೆ.
33 ಸೆಕೆಂಡುಗಳಿರುವ ವಿಡಿಯೋಗೆ 1.9 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 9 ಸಾವಿರಕ್ಕೂ ಅಧಿಕ ಮಂದಿ ವಿಡಿಯೋಗೆ ಲೈಕ್ ಒತ್ತಿದ್ದಾರೆ.
ಈ ವಿಡಿಯೋ ವೀಕ್ಷಿಸಲು ಗೂಗಲ್‌ನಲ್ಲಿ ಹೀಗೆ ಸರ್ಚ್ ಮಾಡಿ: orangutan feeding tiger cubs