Advertisement

ನಾವು ಯಾರಿಗಾಗಿ ಹುಡುಕಾಡುತ್ತಿದ್ದೇವೆ? ಅವನನ್ನು ಅವನೇ ಹುಡುಕಿದ…

10:28 AM Sep 30, 2021 | Team Udayavani |

ಅಂಕಾರ: ಕಳೆದುಹೋಗಿದ್ದ ವ್ಯಕ್ತಿಯೊಬ್ಬ ಅವನನ್ನು ಅವನೇ ಹುಡುಕಿದ ವಿಚಿತ್ರ ಘಟನೆ ಟರ್ಕಿಯಲ್ಲಿ ನಡೆದಿದೆ.ಟರ್ಕಿಯ ಬಯ್ಹಾನ್‌ ಮತ್ಲು ಹೆಸರಿನ ವ್ಯಕ್ತಿ ಕಯ್ಯಕ ಹೆಸರಿನ ಪ್ರದೇಶದಲ್ಲಿರುವ ಕಾಡೊಂದರಲ್ಲಿ ಸ್ನೇಹಿತರ ಜತೆ ಗುಂಡು ಪಾರ್ಟಿ ಮಾಡಿದ್ದಾರೆ. ಕೆಲ ಸಮಯದ ನಂತರ ಆತ ಕಾಣೆಯಾಗಿದ್ದು ಗಾಬರಿಗೊಂಡ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಪೊಲೀಸರ ಜತೆ ಕೆಲ ಸ್ಥಳೀಯರೂ ಸ್ಥಳಕ್ಕೆ ಬಂದು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಹುಡುಕಾಟದ ನಡುವೆ ಕೆಲವರು ಅವನ ಹೆಸರು ಕೂಗಲಾರಂಭಿಸಿದಾಗ ಗುಂಪಿನಲ್ಲೇ ಇದ್ದ ಆ ಕಾಣೆಯಾದ ವ್ಯಕ್ತಿ, “ನಾವು ಯಾರಿಗಾಗಿ ಹುಡುಕಾಡುತ್ತಿದ್ದೇವೆ? ನಾನು ಇಲ್ಲೇ ಇದ್ದೇನಲ್ಲ’ ಎಂದು ಹೇಳಿದ್ದಾನೆ.

ಅದನ್ನು ಕಂಡು ಎಲ್ಲರು ಗಾಬರಿಗೊಂಡಿದ್ದಾರೆ. ಯಾರನ್ನು ಹುಡುಕುತ್ತಿದ್ದೇವೆ ಎನ್ನುವುದೂ ಅರಿಯದ ಆತ ಎಲ್ಲರೊಟ್ಟಿಗೆ ಸೇರಿಕೊಂಡು ತಾನೂ ಹುಡುಕಾಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next